ನವದೆಹಲಿ (ಪಿಟಿಐ):  ಸೈನಾ ನೆಹ್ವಾಲ್ ಅವರು ಅಂಗಳದಲ್ಲಿ ಇನ್ನಷ್ಟು ವೇಗವಾಗಿ ಚಲಿಸುವುದು ಅಗತ್ಯ ಎಂದು ಡೆನ್ಮಾರ್ಕ್ನ ಬ್ಯಾಡ್ಮಿಂಟನ್ ಆಟಗಾರ ಪೀಟರ್ ಗೇಡ್ ಅಭಿಪ್ರಾಯಪಟ್ಟಿದ್ದಾರೆ.

‘ಸೈನಾ ಅವರ ಪ್ರತಿಭೆಯ ಬಗ್ಗೆ ಯಾರಿಗೂ ಅನುಮಾನ ಬೇಡ. ಆದರೆ ಅವರು ತಮ್ಮ ಆಟದ ವೇಗ ಹೆಚ್ಚಿಸಿಕೊಳ್ಳುವುದು ಅಗತ್ಯ. ಅಂಗಳದಲ್ಲಿ ಇನ್ನಷ್ಟು ಚುರುಕಾಗಿ ಅತ್ತಿತ್ತ ಚಲಿಸಬೇಕು’ ಎಂದು 1999ರ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ ಹೇಳಿದರು.

ಮುಂಬರುವ ಇಂಡಿಯನ್ ಓಪನ್ ಸೂಪರ್ ಸೀರಿಸ್ನಲ್ಲಿ ಸೈನಾ ಪ್ರಶಸ್ತಿ ಗೆಲ್ಲುವ ‘ಫೇವರಿಟ್’ ಎನಿಸಿದ್ದಾರೆ ಎಂದ ಗೇಡ್, ‘ತವರು ನೆಲದಲ್ಲಿ ಈ ಚಾಂಪಿಯನ್ಷಿಪ್ ನಡೆಯುತ್ತಿರುವುದು ಸೈನಾ ಅವರಿಗೆ ನೆರವಾಗಲಿದೆ. ಆದರೆ ಅವರು ನಿರೀಕ್ಷೆಯ ಭಾರವನ್ನು ಹೊತ್ತುಕೊಂಡು ಆಡಬೇಕಾಗಿದೆ’ ಎಂದರು. ‘ಸೈನಾ ಅವರ ಆಟದ ಕೆಲವೊಂದು ವಿಭಾಗಗಳಲ್ಲಿ ಇನ್ನೂ ಸುಧಾರಣೆ ಕಾಣಬೇಕಿದೆ’ ಎಂದು ಗೇಡ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.