ಬೆಂಗಳೂರು: ಜಾಗತಿಕ ಮಾಹಿತಿ ತಂತ್ರಜ್ಞಾನ ಸಲಹಾ ಮತ್ತು ಹೊರಗುತ್ತಿಗೆ ಸಂಸ್ಥೆಯಾಗಿರುವ ಸೈಬರ್ ಇಂಕ್, ಬೆಂಗಳೂರಿನಲ್ಲಿ ತನ್ನ ಎರಡನೇ ಜಾಗತಿಕ ಕೇಂದ್ರ ಆರಂಭಿಸಿದೆ.

ಈ ಹೊಸ ಕೇಂದ್ರದಲ್ಲಿ ಆರಂಭದಲ್ಲಿ 750 ತಂತ್ರಜ್ಞರು ಕಾರ್ಯನಿರ್ವಹಿಸಬಹುದಾಗಿದ್ದು, 18 ತಿಂಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಎರಡು ಪಟ್ಟುಗಳಷ್ಟು ಹೆಚ್ಚಿಸಲಾಗುವುದು ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವ್ ಪೀಟರ್ಸ್ಮಿತ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತದಲ್ಲಿ 2005ರಲ್ಲಿ 100 ಸಿಬ್ಬಂದಿಯೊಂದಿಗೆ ಕಾರ್ಯಾರಂಭ ಮಾಡಿದ ಸಂಸ್ಥೆಯಲ್ಲಿ ಈಗ 1300 ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವದಾದ್ಯಂತ ಇರುವ ಗ್ರಾಹಕರಿಗೆ ಭಾರತದಲ್ಲಿನ ಮೂರು ಕೇಂದ್ರಗಳು ಸೇವೆ ಒದಗಿಸುತ್ತಿವೆ.

ಇದಕ್ಕೆ ಸ್ಥಳೀಯವಾಗಿ ಸೂಕ್ತ ಪ್ರತಿಭೆಗಳ ಲಭ್ಯತೆಯೇ ಕಾರಣ. ಜಾಗತಿಕ ಗ್ರಾಹಕರಿಗೆ ಸೇವೆ ಒದಗಿಸುವುದರ ಜತೆಗೆ ಸ್ಥಳೀಯವಾಗಿಯೂ ವಹಿವಾಟು ವಿಸ್ತರಣೆಗೆ ನಾವು ಈಗ ಹೆಚ್ಚು ಗಮನ ಹರಿಸಲಿದ್ದೇವೆ. ಸಂಸ್ಥೆಯು ಐಫೋನ್ಗಾಗಿ ಹೊಸ ಅಪ್ಲಿಕೇಷನ್ಸ್ಗಳನ್ನೂ ಅಭಿವೃದ್ಧಿಪಡಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.