ಕೈ-ಕಾಲು, ಕೀಲುಗಳಲ್ಲಿ ಅಸಹನೀಯ ನೋವು, ಹೊಟ್ಟೆಯಲ್ಲಿ ವಿಚಿತ್ರ ಸೆಳೆತ, ತಲೆಯಲ್ಲಿ ಹುಳು ಓಡಾಡಿದಂತಹ ಅನುಭವ, ಎದ್ದು ನಿಲ್ಲಲೂ ಆಗದಷ್ಟು ಸುಸ್ತು, ಮೈಯಲ್ಲಿ ವಿಪರೀತ ಜಡತ್ವ... ವೈದ್ಯರನ್ನೂ ಕ್ಷಣಕಾಲ ದಿಗಿಲುಗೊಳಿಸುವ ಕಾಯಿಲೆ!

ಇದು ದೇಹಕ್ಕೆ ಸಂಬಂಧಿಸಿದ್ದಲ್ಲ, ಇದಕ್ಕೆ ಮೂಲ ಕಾರಣವೂ ಇರುವುದಿಲ್ಲ. ಆದರೆ ವ್ಯಕ್ತಿಗೆ ನಿರಂತರ ನೋವಿನ ಅನುಭವ ಆಗುತ್ತದೆ. ದೈಹಿಕ ಪರೀಕ್ಷೆ ನಡೆಸುವ ವೈದ್ಯರು `ಏನೂ ತೊಂದರೆ ಇಲ್ಲ' ಎನ್ನುತ್ತಾರೆ. ಹಾಗಾದರೆ ಇದು ಮಾಟ- ಮಂತ್ರದ ಫಲವೇ ಇರಬೇಕು ಎಂತಲೋ, ದೇವರಿಗೆ ಹರಕೆ ತೀರಿಸದ ಪರಿಣಾಮ ಎಂತಲೋ ನಂಬುವವರೂ ಇದ್ದಾರೆ.

ಆದರೆ, ಹೀಗೆ ಕಾರಣವಿಲ್ಲದೇ ವ್ಯಕ್ತಿಯನ್ನು ನಿರಂತರವಾಗಿ ಬಾಧಿಸುವ ಮನೋ ಕಾಯಿಲೆಗೆ `ಸೊಮ್ಯಾಟೊಫಾರ್ಮ್' ಎಂದು ಹೆಸರು. ಇದಕ್ಕೆ ಸುಲಭ ಪರಿಹಾರವಿದೆ, ಚಿಕಿತ್ಸೆಯೂ ಇದೆ...

ಏನಿದು `ಸೊಮ್ಯಾಟೊಫಾರ್ಮ್' ಕಾಯಿಲೆ?
`ಸೊಮ್ಯಾಟೊಫಾರ್ಮ್' ದೈಹಿಕ ಲಕ್ಷಣಗಳಿಂದ ಆರಂಭವಾಗುವ, ಆದರೆ ಮಾನಸಿಕ ಕಾರಣದಿಂದ ಉಂಟಾಗುವ ಒಂದು ಮನೋವ್ಯಾಧಿ. ಇಲ್ಲಿ ಕಂಡುಬರುವ ದೈಹಿಕ ಲಕ್ಷಣಗಳಿಗೆ ಎಷ್ಟೇ ಪರೀಕ್ಷೆ ನಡೆಸಿದರೂ ಯಾವುದೇ ಕಾರಣ ತಿಳಿದುಬರುವುದಿಲ್ಲ. ಆದ್ದರಿಂದ ಔಷಧ ನೀಡುವುದು ಕಷ್ಟ. ಆದರೆ ರೋಗಿ ದೀರ್ಘಕಾಲ ಬಳಲಬೇಕಾಗುತ್ತದೆ.

ಈ ಕಾಯಿಲೆಯನ್ನು ಗುರುತಿಸುವುದು ಹೇಗೆ?
ಇದನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ದೇಹದಲ್ಲಿ ನೋವು, ಸೆಳವು, ಅಸಮಾಧಾನದಿಂದ ರೋಗಿ ಬಳಲುತ್ತಾನೆ. ವಾಕರಿಕೆ, ವಾಂತಿ, ಹೊಟ್ಟೆ ಊದಿಕೊಳ್ಳುವಿಕೆ, ಅತಿಸಾರ ಮುಂತಾದ ಜಠರಗರುಳಿನ ಸಮಸ್ಯೆಗಳೂ ಎದುರಾಗುತ್ತವೆ. ಆಗ ರೋಗಿ ಅದಕ್ಕೆ ಸಂಬಂಧಿಸಿದ ವೈದ್ಯರನ್ನು ಕಾಣುತ್ತಾನೆ. ಎಷ್ಟೇ ಪರೀಕ್ಷೆ ನಡೆಸಿದರೂ ರೋಗ ಪತ್ತೆಯಾಗುವುದಿಲ್ಲ, ಕಾರಣ ತಿಳಿಯುವುದಿಲ್ಲ. ಔಷಧ ಯಾವುದೇ ಪರಿಣಾಮ ಬೀರುವುದಿಲ್ಲ.

ಇದೊಂದು ಮಾನಸಿಕ ಕಾಯಿಲೆ ಇರಬಹುದು ಎನ್ನುವ ಬಗ್ಗೆ ಹೆಚ್ಚಿನ ವೈದ್ಯರು ಗಮನ ಹರಿಸುವುದಿಲ್ಲ. ಇದು `ಸೊಮ್ಯಾಟೊ ಫಾರ್ಮ್' ಎಂದು ಗುರುತಿಸುವುದು ವಿಳಂಬವಾಗುತ್ತಾ ಹೋಗುತ್ತದೆ. ಆದರೆ ರೋಗಿಗೆ ನೋವು ಮಾತ್ರ ಕಡಿಮೆ ಆಗುವುದಿಲ್ಲ.

`ಸೊಮ್ಯಾಟೊಫಾರ್ಮ್' ಕಾಯಿಲೆಗೆ ಕಾರಣ?
ಮನೋ-ಸಾಮಾಜಿಕ ಒತ್ತಡಗಳೇ ಪ್ರಮುಖ ಕಾರಣಗಳೆಂದು ಗುರುತಿಸಲಾಗಿದೆ. ಇನ್ನು ನಿರ್ದಿಷ್ಟವಾದ ವೈದ್ಯಕೀಯ ಕಾರಣಗಳು ತಿಳಿದು ಬಂದಿಲ್ಲ. ಮನೋವೈದ್ಯರನ್ನು ಭೇಟಿ ಮಾಡಲು ಇರುವ ಸಾಮಾಜಿಕ ಭಯ, ಮನೋ ಸಮಸ್ಯೆಯನ್ನು ಒಪ್ಪಿಕೊಳ್ಳುವಲ್ಲಿ ಇರುವ ಆತಂಕ ಸಹ ಇದಕ್ಕೆ ಕಾರಣ ಎಂದು ಹೇಳಬಹುದು.

ಚಿಕಿತ್ಸೆ ನೀಡುವುದು ಹೇಗೆ?
ಹೆಚ್ಚಾಗಿ ಈ ತೊಂದರೆ ಮಾನಸಿಕ ಖಿನ್ನತೆ ಹಾಗೂ ದೈಹಿಕ ಲಕ್ಷಣಗಳಿಂದ ಆರಂಭವಾಗುತ್ತದೆ. ಆದ್ದರಿಂದ ಮೊದಲು ರೋಗಿಗೆ ಈ ಕಾಯಿಲೆಯ ನಿಜವಾದ ಸ್ವರೂಪ, ಕಾರಣ ಮತ್ತು ಚಿಕಿತ್ಸೆಯ ಬಗ್ಗೆ ತಿಳಿವಳಿಕೆ ನೀಡಬೇಕಾಗುತ್ತದೆ. ಇದು ಗಂಭೀರ ಹಾಗೂ ಗುಣವಾಗದ ಕಾಯಿಲೆ ಅಲ್ಲ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡುವ ಅಗತ್ಯ ಇರುತ್ತದೆ.

ಅರಿವಿನ ವರ್ತನಾ ಚಿಕಿತ್ಸೆ ಬಗ್ಗೆ ಹೇಳಿ.
ಮನಸ್ಸಿನ ವ್ಯಾಕುಲತೆ ಹಾಗೂ ಬಳಲಿಕೆಯನ್ನು ಶಮನ ಮಾಡಲು ಅರಿವಿನ ವರ್ತನಾ ಚಿಕಿತ್ಸೆ-ಸಿಬಿಟಿ (Cognitive Behavioural Therapy) ನೀಡಲಾಗುತ್ತದೆ. ಅಂದರೆ ಸಮಸ್ಯೆಯ ಮೂಲ ಎಲ್ಲಿದೆ, ಕಾರಣವೇನು, ಪರಿಹಾರವೇನು ಎಂಬುದನ್ನು ರೋಗಿಗೆ ತಿಳಿಸಿಕೊಡಲಾಗುತ್ತದೆ. ಈ ಮೂಲಕ ರೋಗಿ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುವಂತೆ ಮಾಡಲಾಗುತ್ತದೆ.

`ಸೊಮ್ಯಾಟೊಫಾರ್ಮ್' ಪ್ರಕಾರಗಳೆಷ್ಟು?
ಇದರಲ್ಲಿ ಅನೇಕ ವಿಧಗಳಿವೆ.ಸಾಮಾನ್ಯ `ಸೊಮ್ಯಾಟೊಫಾರ್ಮ್' ವ್ಯಾಧಿ: ದೀರ್ಘಕಾಲದ ಹಲವಾರು ಭೌತಿಕ ದೂರುಗಳಿರುವ, ಆದರೆ ಯಾವುದೇ ಜೈವಿಕ ಕಾರಣಗಳಿಲ್ಲದ ಸಮಸ್ಯೆ ಇದು.

ಬೇರ್ಪಡಿಸಲಾಗದ `ಸೊಮ್ಯಾಟೊಫಾರ್ಮ್' ಅಸ್ವಾಸ್ಥ್ಯ: ಇದು ವಿವರಿಸಲಾಗದ ಭೌತಿಕ ರೋಗ ಲಕ್ಷಣಗಳ ಒಂದು ವರ್ಗ. ಈ ಲಕ್ಷಣಗಳು ಸುಮಾರು ತಿಂಗಳವರೆಗೆ ಮುಂದುವರಿಯಬಹುದು.

ವ್ಯಾಧಿ ಭ್ರಾಂತಿ (Hypochondriasis): ಇದು ಗಂಭೀರ ಕಾಯಿಲೆ ಬರಬಹುದೆಂಬ ಭಯ ಅಥವಾ ಹಾಗೆ ನಂಬಿಕೊಳ್ಳುವುದರ ಫಲವಾಗಿ ಬರುವ ಕಾಯಿಲೆ. ಈ ವ್ಯಾಧಿಯ ಕಾರಣವನ್ನು ಯಾವ ವೈದ್ಯಕೀಯ ತಪಾಸಣೆಗಳೂ ದೃಢಪಡಿಸಲಾರವು.

ಡಿಸ್ಮೊರ್ಫಿಕ್ ಅಸ್ವಾಸ್ಥ್ಯ(Body Dysmorphic Disorder): ಇದು ದೈಹಿಕ ವಿಕಾರ ಹಾಗೂ ನ್ಯೂನತೆಯ ಒಂದು ವಸ್ತುನಿಷ್ಠ ವಿವರಣೆ. ತನ್ನ ಮೂಗು, ಕಿವಿ, ಬಾಯಿ, ಸ್ತನ ತುಂಬಾ ಚಿಕ್ಕದು ಅಥವಾ ದೊಡ್ಡದು ಎಂಬ ತೀವ್ರವಾದ ಅಸಮಾಧಾನ ಇಲ್ಲಿ ಕಂಡುಬರುತ್ತದೆ.

ನೋವಿನ ವ್ಯಾಧಿ: ಯಾವುದೇ ನಿರ್ದಿಷ್ಟ ಕಾರಣವಿಲ್ಲದೇ ಕಂಡು ಬರುವ ದೀರ್ಘಕಾಲಿಕ ನೋವು ಇಲ್ಲಿ ಕಾಣಿಸಿಕೊಳ್ಳುತ್ತದೆ.

ಕೌಟುಂಬಿಕ ಹಿನ್ನೆಲೆ, ವೈದ್ಯಕೀಯ ಹಿನ್ನೆಲೆಯ ಪಾತ್ರವೇನು?
ಇದು ಆನುವಂಶಿಕ ಕಾಯಿಲೆ ಅಲ್ಲ. ಅಲ್ಲದೆ, ಯಾವುದೇ ವೈದ್ಯಕೀಯ ಕಾರಣದಿಂದಲೂ ಇದು ಬರುವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಯಾವುದೋ ಒಂದು ಕಾಯಿಲೆ ಬಂದು ಹೋದ ನಂತರ ಅದು ಮತ್ತೆ ಬರಬಹುದು ಎಂಬ ಭಯ, ಆತಂಕ ಈ ವ್ಯಾಧಿಯನ್ನು ಹುಟ್ಟು ಹಾಕಬಹುದು ಅಥವಾ ಆನುವಂಶೀಯವಾಗಿ ಬರುವ ಕೆಲವು ಕಾಯಿಲೆಗಳ ಬಗ್ಗೆ ಇರುವ ಭೀತಿಯಿಂದಲೂ ಈ ಸಮಸ್ಯೆ ಉದ್ಭವಿಸಬಹುದು.

`ಸೊಮ್ಯಾಟೊಫಾರ್ಮ್' ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂಬ ನಂಬಿಕೆ ಇದೆ?
ಹೌದು, ಅವರಲ್ಲಿ ಸರಿಯಾದ ತಿಳಿವಳಿಕೆ ಇಲ್ಲದ ಕಾರಣ ಖಿನ್ನತೆ- ಬಳಲಿಕೆಯಂತಹ ಮನೋ ಸಮಸ್ಯೆಗಳನ್ನು ದೈಹಿಕ ಲಕ್ಷಣಗಳನ್ನಾಗಿ ಮಾರ್ಪಡಿಸಿಕೊಳ್ಳಬಹುದಾದ ಅಪಾಯ ಹೆಚ್ಚಿರುತ್ತದೆ. ಅಲ್ಲದೆ, ಮನೋ ಸಮಸ್ಯೆಗಳಿಗೆ ಪರಿಹಾರವಿದೆ, ದೇಹಕ್ಕೆ ಬರುವಂತೆ ಮನಸ್ಸಿಗೂ ಕಾಯಿಲೆ ಬರುತ್ತದೆ ಮತ್ತು ಅದಕ್ಕೆ ಪರಿಹಾರವೂ ಇದೆ ಎಂಬ ಸಂಗತಿ ಅವರಿಗೆ ತಿಳಿದಿರುವುದಿಲ್ಲ.

ತಮ್ಮ ದೈಹಿಕ ಸಮಸ್ಯೆಗಳು ವೈದ್ಯಕೀಯವಾಗಿ ದೃಢಪಡದೇ ಹೋದಾಗ ಅವರು ದೇವರು- ಹರಕೆ ಮುಂತಾದ ನಂಬಿಕೆಗಳ ಮೊರೆ ಹೋಗುವುದನ್ನು ಕಾಣಬಹುದು. ಅಂತೆಯೇ ನಗರ ಪ್ರದೇಶದಲ್ಲೂ ಇದಕ್ಕೆ ಗುರಿಯಾಗುವವರ ಸಂಖ್ಯೆ ಕಡಿಮೆ ಏನಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.