ಶನಿವಾರ, ಜನವರಿ 18, 2020
18 °C

ಸೋಚಿ ಒಲಿಂಪಿಕ್ಸ್‌ಗೆ ನಾಲ್ಕು ಮಂದಿ ಅರ್ಹತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2014 ರ ಫೆಬ್ರುವರಿ 7 ರಿಂದ 23 ರ ವರೆಗೆ ರಷ್ಯಾದ ಸೋಚಿಯಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಭಾರತದ ನಾಲ್ಕು ಮಂದಿ ಕ್ರೀಡಾಪಟುಗಳು  ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಶಿವ ಕೇಶವನ್, ನದೀಮ್ ಇಕ್ಬಾಲ್, ಹೀರಾಲಾಲ್ ಮತ್ತು ಹಿಮಾಂಶು ಠಾಕೂರ್ ಅವರು ಅರ್ಹತೆ ಪಡೆದ ಕ್ರೀಡಾಪಟುಗಳು.ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಯು (ಐಒಸಿ) ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಮೇಲೆ ಅಮಾನತು ಹೇರಿರುವುದರಿಂದ ಇವರುಗಳು ಒಲಿಂಪಿಕ್ಸ್‌ನಲ್ಲಿ ತ್ರಿವರ್ಣ ಧ್ವಜದ ಅಡಿಯಲ್ಲಿ ಪಾಲ್ಗೊಳ್ಳುವಂತಿಲ್ಲ. ಬದ ಲಾಗಿ ವೈಯಕ್ತಿಕವಾಗಿ ಭಾಗವಹಿಸುವ ಅನಿವಾರ್ಯತೆ ಎದುರಾಗಿದೆ. ಇನ್ನೂ ಕೆಲ ಸ್ಪರ್ಧಿಗಳು ಅರ್ಹತೆ ಗಿಟ್ಟಿಸುವ ಹಾದಿಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)