ಗುರುವಾರ , ಫೆಬ್ರವರಿ 25, 2021
29 °C

ಸೋತರೆ ಹೊಣೆ ಹೊರಲ್ಲ: ಸಚಿವ ಜಯಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋತರೆ ಹೊಣೆ ಹೊರಲ್ಲ: ಸಚಿವ ಜಯಚಂದ್ರ

ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಸೋಲು– ಗೆಲುವಿನ ಹೊಣೆಯನ್ನು ವೈಯಕ್ತಿಕವಾಗಿ ಹೊರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.­ಜಯಚಂದ್ರ ಸ್ಪಷ್ಟಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವ­ರಾ­ದರೂ ವೈಯಕ್ತಿಕ ಹೊಣೆಗಾರಿಕೆ ಇಲ್ಲ. ಸಾಮೂಹಿಕ ಹೊಣೆಗಾರಿಕೆಯಲ್ಲಿ ಚುನಾ­ವಣೆ ಎದುರಿಸುತ್ತಿದ್ದೇವೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ನಾಯಕತ್ವದಲ್ಲಿ ಚುನಾವಣೆ ಎದುರಿ­ಸುತ್ತಿ­ರುವುದಾಗಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ತಮ್ಮ ಪುತ್ರ ಸಂತೋಷ್‌ ತುಮ­ಕೂರು ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿ­ಯಾಗಿದ್ದು ಸತ್ಯ. ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನವಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇನೆ. ಚುನಾ­ವಣೆಯನ್ನು ಸಮರ್ಥ­ವಾಗಿ ಎದುರಿಸಲಾಗುವುದು. ಜಿಲ್ಲೆಯ ಕೆಜಿಪಿ ಮುಖಂಡರು ಕಾಂಗ್ರೆಸ್‌ ಸೇರ್ಪಡೆ­ಯಾಗಿರುವು­ದ­ರಿಂದ ಪಕ್ಷದ ಬಲ ಹೆಚ್ಚಿದೆ ಎಂದರು.ಅಭ್ಯರ್ಥಿ ಎಸ್‌.ಪಿ.­ಮುದ್ದ­ಹನುಮೇ­ಗೌಡ ಮಾತನಾಡಿ, ಪಕ್ಷ­ದಲ್ಲಿ ಯಾವುದೇ ಭಿನ್ನಾಭಿಪ್ರಾಯ­ವಿಲ್ಲ. ತುರುವೇಕೆರೆಯಲ್ಲಿ ಮಾ. 24­ರಂದು ಕಾಂಗ್ರೆಸ್‌ ಕಾರ್ಯಕರ್ತರ ಸಮಾ­­ವೇಶ ನಡೆಯಲಿದೆ. ಈ ಸಂದರ್ಭ ಎಂ.ಡಿ.ಲಕ್ಷ್ಮೀ­ನಾರಾ­ಯಣ, ಮಸಾಲೆ ಜಯರಾಂ ಮುಂತಾದ­ವ­ರನ್ನು ಕಾರ್ಯಕರ್ತರ ಸಮ್ಮುಖದಲ್ಲೇ ಪಕ್ಷಕ್ಕೆ ಸ್ವಾಗತಿಸಲಾಗುವುದು. ಮಾ. 26ರಂದು ನಾಮ­ಪತ್ರ ಸಲ್ಲಿಸಲು ನಿರ್ಧರಿಸ­ಲಾಗಿದೆ ಎಂದು ತಿಳಿಸಿದರು.ವಿಧಾನ ಪರಿಷತ್‌ ಸದಸ್ಯ ಎಂ.ಡಿ.­ಲಕ್ಷ್ಮೀ­ನಾರಾಯಣ ಮಾತನಾಡಿ, ಪಕ್ಷಾತೀತ­ವಾಗಿ ನಾನು ವಿಧಾನ ಪರಿಷತ್‌ ಸದಸ್ಯನಾಗಿದ್ದು, ಕಾಂಗ್ರೆಸ್‌ ಸೇರಿರುವುದರಿಂದ ರಾಜೀನಾಮೆ ನೀಡು­­ವುದಿಲ್ಲ. ನನ್ನನ್ನು ವಿಧಾನ ಪರಿಷತ್‌ ಸದಸ್ಯನಾಗಿ ಮಾಡಲು ಮುಂದಾಗಿದ್ದು ಬಿ.ಎಸ್‌.­ಯಡಿ­ಯೂ­ರಪ್ಪ. ಮಾಡಿದ್ದು ರಾಜ್ಯಪಾಲರು. ಬಿಜೆಪಿಗೂ ನನಗೂ ಯಾವುದೇ ಸಂಬಂಧವಿಲ್ಲ. ಕೆಜೆಪಿಯ 2ನೇ ಹಂತದ ನಾಯಕರಿಗೆ ಬಿಜೆಪಿಯಲ್ಲಿ ಮನ್ನಣೆ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಬರು­ವಂತಾ­ಯಿತು ಎಂದು ಹೇಳಿದರು.ಹಿಂದೆ ಯಡಿಯೂರಪ್ಪ ಅವರನ್ನು ಗುರುವಾಗಿ ಸ್ವೀಕರಿಸಿದ್ದೆ. ಅವರಿಂದ ಅಧಿ­­ಕಾರವೂ ಸಿಕ್ಕಿತ್ತು. ಮುಂದೆ ಸಿದ್ದರಾಮಯ್ಯ ಅವರನ್ನು ಗುರುವಾಗಿ ಪರಿಗಣಿಸುತ್ತೇನೆ. ನನಗೆ ಕಾಂಗ್ರೆಸ್‌­ನಲ್ಲಿಯೂ ಸ್ಥಾನಮಾನ ದೊರೆಯುವ ನಿರೀಕ್ಷೆಯೂ ಇದೆ ಎಂದರು.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಷಫೀ­ಅಹ್ಮದ್‌, ಶಾಸಕ ಡಾ.ರಫೀಕ್‌­ಅಹ್ಮದ್‌, ಮುಖಂಡರಾದ ಮಸಾಲೆ ಜಯರಾಂ, ಎಚ್‌.ನಿಂಗಪ್ಪ, ದಿನಕರ್‌ ಮುಂತಾದವರು ಭಾಗವಹಿಸಿದ್ದರು.ಕೆಜೆಪಿ– ಕಾಂಗ್ರೆಸ್ ವಿಲೀನಕ್ಕೆ ಸಿದ್ಧತ

ಕೆಜೆಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲು ಸಿದ್ಧತೆ ನಡೆದಿತ್ತು. ಬಿ.ಎಸ್‌.ಯಡಿಯೂರಪ್ಪ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ಕಾರಣಾಂತರಗಳಿಂದ ಇದು ಈಡೇರಲಿಲ್ಲ. ಆನಂತರ ಬಿಜೆಪಿ ಜೊತೆ ವಿಲೀನ ಮಾಡಲಾಯಿತು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಡಿ.ಲಕ್ಷ್ಮೀ­ನಾರಾಯಣ ಬಹಿರಂಗ ಪಡಿಸಿದರು.

ಹೀಗಾಗಿ ಯಡಿಯೂರಪ್ಪ ಮಾರ್ಗದರ್ಶನದಲ್ಲಿಯೇ ನಾವು ಕಾಂಗ್ರೆಸ್‌ ಸೇರಿದಂತಾಗಿದೆ. ಬಿಜೆಪಿ ತ್ಯಜಿಸುವಾಗಲೇ ಯಡಿಯೂರಪ್ಪ ನನ್ನ ಮಾತು ಕೇಳಲಿಲ್ಲ. ಶೋಭಾ ಕರಂದ್ಲಾಜೆ ಮಾತು ಕೇಳಿ ಯಡಿಯೂರಪ್ಪ ಕೆಜೆಪಿ ಕಟ್ಟಿದರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.