ಭಾನುವಾರ, ಜೂನ್ 13, 2021
22 °C

ಸೋತು ಸುಣ್ಣವಾದ ಕಾಂಗ್ರೆಸ್ಸಿಗರ ಹತಾಶ ನಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದ ಎಲ್ಲ ವಾರ್ಡ್‌ಗಳಲ್ಲಿ ಕಳೆದ 50 ವರ್ಷಗಳಲ್ಲಿ ಕಾಣದಂತಹ  ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಜನತೆ ಇಲ್ಲಿನ ಜನಪ್ರತಿನಿಧಿಗಳ ಸೇವಾ ಕಾರ್ಯಗಳನ್ನು ಮೆಚ್ಚಿದ್ದಾರೆ. ಆದರೂ, ಕಾಂಗ್ರೆಸ್ಸಿಗರು ಮಾಡಲು ಕೆಲಸವಿಲ್ಲದೆ ವಿನಾಕಾರಣ ಪ್ರತಿ ವಾರ್ಡ್‌ನಲ್ಲಿ ಪಾದಯಾತ್ರೆ ಹಮ್ಮಿಕೊಂಡು, ಕೆಲಸಗಳೇ ನಡೆದಿಲ್ಲ ಎಂದು ಹೇಳುತ್ತಿರುವುದು ಹತಾಶ ಪ್ರಕ್ರಿಯೆಯಾಗಿದೆ ಎಂದು ಉಪ ಮೇಯರ್ ಶಶಿಕಲಾ ಪ್ರತಿಕ್ರಿಯಿಸಿದ್ದಾರೆ.ಮಾಜಿ ಸಚಿವರಾದ ಜಿ.ಜನಾರ್ದನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿ ಬಳ್ಳಾರಿಯನ್ನು ಬೆಂಗಳೂರು ಮಾದರಿ ಯಲ್ಲಿ ಅಭಿವೃದ್ಧಿಪಡಿಸಲು ಮುಂದಾ ಗಿದ್ದಾರೆ. ಅದರ ಫಲವೇ ಇದೀಗ ನಗರದ 17 ಪ್ರಮುಖ ರಸ್ತೆಗಳು ಅಭಿವೃದ್ಧಿ ಯಾಗಿದ್ದು, ಉದ್ಯಾನಗಳೂ ರೂಪು ಗೊಂಡಿವೆ. ಎಲ್ಲ ಬಡಾವಣೆಗಳ ರಸ್ತೆ ಗಳೂ ಅಭಿವೃದ್ಧಿಯಾಗಿವೆ. ಶೌಚಾ ಲಯ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

 

ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಶಾಸಕ ಜಿ. ಸೋಮಶೇಖರ ರೆಡ್ಡಿ ಕುಡಿಯುವ ನೀರು ಪೂರೈಕೆಗಾಗಿ ವಿಶೇಷ ಯೋಜನೆಗಳನ್ನು ಆರಂಭಿಸಿದ್ದಾರೆ. ಕಾಂಗ್ರೆಸ್ ಮುಖಂಡ, ಆಗಿನ ಮುಖ್ಯಮಂತ್ರಿ  ಎಸ್.ಎಂ. ಕೃಷ್ಣ ವಿಧಾನಸಭೆಯಲ್ಲೇ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಇದೀಗ ರೂ 98 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿಯ ಯೋಜನೆ ಜಾರಿಗೆ ತರಲಾಗಿದೆ. ಎಲ್ಲ ಸಮುದಾಯದ ಜನರಿಗೆ ಸಮುದಾಯ ಭವನ, ಆಸರೆ ಮನೆ, ನಿವೇಶನದ ಪಟ್ಟಾ ವಿತರಣೆ ಸೇರಿದಂತೆ ನಿರಂತರ ಜನ ಸಂಪರ್ಕ ದೊಂದಿಗೆ ಜನಪ್ರತಿನಿಧಿಗಳು ಸ್ಪಂದಿಸು ತ್ತಿದ್ದಾರೆ.

 

ಇತ್ತೀಚೆಗೆ ನಡೆದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪ ಚುನಾ ವಣೆಯೇ ಇದಕ್ಕೆ ಉದಾಹರಣೆ.  ತಮ್ಮ ಅಧಿಕಾರದ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಆದ್ಯತೆಯನ್ನೇ ನೀಡದ ಕಾಂಗ್ರೆಸ್ ಪಕ್ಷದವರು ಇದೀಗ ಈ ರೀತಿ ಆರೋಪ ಮಾಡುತ್ತಿರುವುದರಲ್ಲಿ ಹುರುಳಿಲ್ಲ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.