ಶನಿವಾರ, ಮೇ 28, 2022
26 °C

ಸೋನಾಕ್ಷಿ ಈಸ್ ಬೆಸ್ಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಲೂಟೆರಾ' ಚಿತ್ರದಲ್ಲಿ ಮಗಳು ಸೋನಾಕ್ಷಿ ಸಿನ್ಹಾ ನಟನೆಯನ್ನು ನೋಡಿದ ಶತ್ರುಘ್ನ ಸಿನ್ಹಾ ಮೂಕವಿಸ್ಮಿತರಾಗಿದ್ದಾರಂತೆ. ಇದೇ ವೇಳೆ `ಈಸ್ಟ್ ಆರ್ ವೆಸ್ಟ್ ಸೋನಾಕ್ಷಿ ಈಸ್ ಬೆಸ್ಟ್!' ಅನ್ನುವ ಅಭಿಮಾನದ ಬಿರುದನ್ನೂ ಆಕೆಗೆ ನೀಡಿದ್ದಾರೆ. ಅಲ್ಲದೆ ಮುಂದೆ ತಮ್ಮ ಮಗಳಿಂದ ನಟನೆಯ ಪಾಠ ಹೇಳಿಸಿಕೊಳ್ಳುವ ಕುರಿತು ಯೋಚನೆ ಮಾಡಿದ್ದಾರಂತೆ.“ಲೂಟೆರಾ ಚಿತ್ರದಲ್ಲಿ ಸೋನಾಕ್ಷಿ ಅದ್ಭುತವಾಗಿ ನಟಿಸಿದ್ದಾರೆ. ಅಭಿನಯದಲ್ಲಿ ಸಾಕಷ್ಟು ಪಳಗಿದ್ದಾಳೆ. ಆಕೆ ತೆರೆಯ ಮೇಲೆ ತನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ರೀತಿ ಅದ್ಭುತ. ಸೋನಾಕ್ಷಿ ಅಭಿನಯದ ಗುಟ್ಟನ್ನು ನಾನು ತಿಳಿದುಕೊಳ್ಳಬೇಕು. ಹಾಗೆಯೇ, ಆಕೆಯಿಂದ ನಾನು ನಟನೆಯ ಪಾಠ ಹೇಳಿಸಿಕೊಳ್ಳಬೇಕು ಅಂತ ಅನಿಸಿದೆ' ಎಂದು ಸೋನಾಕ್ಷಿಯ ಮೇಲೆ ಹೊಗಳಿಕೆಯ ವರ್ಷಧಾರೆ ಸುರಿಸಿದ್ದಾರೆ ಹಿರಿಯ ನಟ ಶತ್ರುಘ್ನ ಸಿನ್ಹಾ.ಅಂದಹಾಗೆ, ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಬಗ್ಗೆ ಈ ಪರಿ ಹೊಗಳಿದ್ದು `ಲೂಟೆರಾ' ಚಿತ್ರದ ಸಂತೋಷ ಕೂಟದಲ್ಲಿ. ಈ ಕೂಟದಲ್ಲಿ `ಲೂಟೆರಾ' ಚಿತ್ರದ ಇಡೀ ತಂಡ ಭಾಗವಹಿಸಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.