ಸೋನಿಯಾ ಕ್ಷಮೆ ಯಾಚಿಸಿದ ಅಡ್ವಾಣಿ

7

ಸೋನಿಯಾ ಕ್ಷಮೆ ಯಾಚಿಸಿದ ಅಡ್ವಾಣಿ

Published:
Updated:

ನವದೆಹಲಿ (ಪಿಟಿಐ): ಬಿಜೆಪಿಯಿಂದ ನೇಮಕವಾದ ಕಾರ್ಯಪಡೆಯ ವರದಿಯಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪತಿ ದಿವಂಗತ ರಾಜೀವ್ ಗಾಂಧಿ ಅವರ ಖಾತೆಗಳೂ ಇವೆ ಎಂಬ ವಿಷಯ ನಮೂದಾಗಿರುವುದಕ್ಕೆ ಹಿರಿಯ ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ಸೋನಿಯಾ   ಕ್ಷಮೆ ಯಾಚಿಸಿದ್ದಾರೆ.ಭಾರತೀಯರು ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪುಹಣದ ರಹಸ್ಯ ಬಯಲಿಗೆಳೆಯಲು,ಹಣವನ್ನು ಮರಳಿ ದೇಶಕ್ಕೆ ತರುವ ಮಾರ್ಗೋಪಾಯ ಕಂಡುಕೊಳ್ಳಲು ಬಿಜೆಪಿ ಈ ಕಾರ್ಯಪಡೆ ರಚಿಸಿತ್ತು.. ಅದು ತನ್ನ  ಎರಡನೇ ವರದಿಯಲ್ಲಿ ಅದು ಸೋನಿಯಾ ಮತ್ತು ರಾಜೀವ್ ಗಾಂಧಿ ಅವರೂ ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂದು ಹೇಳಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry