ಗುರುವಾರ , ಸೆಪ್ಟೆಂಬರ್ 19, 2019
29 °C

ಸೋನಿ: ಆಕರ್ಷಕ ಕೊಡುಗೆ ಪ್ರಕಟ

Published:
Updated:

ಬೆಂಗಳೂರು: ಮುಂಬರುವ  ಹಬ್ಬಗಳ ಋತುವಿನಲ್ಲಿ  ರಾಜ್ಯದಲ್ಲಿ ಅಂದಾಜು ್ಙ 150 ಕೋಟಿಗಳಷ್ಟು ವಹಿವಾಟು ನಡೆಸುವ ಗುರಿ ನಿಗದಿಪಡಿಸಲಾಗಿದೆ ಎಂದು ಸೋನಿ ಇಂಡಿಯಾ ಪ್ರಕಟಿಸಿದೆ.ದೀಪಾವಳಿ ಮತ್ತಿತರ ಹಬ್ಬಗಳ ಸಂಭ್ರಮ ಹೆಚ್ಚಿಸಲು ಸೋನಿ ಸಂಸ್ಥೆಯು ತನ್ನ ವಿವಿಧ ಬಗೆಯ ಉತ್ಪನ್ನಗಳಾದ ಬ್ರಾವಿಯಾ ಫ್ಲ್ಯಾಟ್ ಟಿವಿ, ಸೈಬರ್ ಶ್ಯಾಟ್ ಕ್ಯಾಮರಾ, ಹ್ಯಾಂಡಿಕಾಮ್ ಮತ್ತು ಹೋಂ ಥೇಟರ್ ಸಿಸ್ಟಮ್‌ಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಿದೆ.  ರಾಜ್ಯದಲ್ಲಿನ ಮಳಿಗೆಗಳ ಸಂಖ್ಯೆಯನ್ನು  500ರಿಂದ 650ಕ್ಕೆ ಹೆಚ್ಚಿಸಲಾಗುವುದು ಎಂದು ಸಂಸ್ಥೆಯ ಹಿರಿಯ ಜನರಲ್ ಮ್ಯಾನೇಜರ್ ಸುನೀಲ್ ನಯ್ಯರ್, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕಳೆದ ವರ್ಷದ ವಹಿವಾಟಿಗೆ ಹೋಲಿಸಿದರೆ ಅಕ್ಟೋಬರ್ ತಿಂಗಳವರೆಗೆ  ಶೇ 44 ರಷ್ಟು ವಹಿವಾಟು ಹೆಚ್ಚಳದ ಗುರಿ ನಿಗದಿಪಡಿಸಲಾಗಿದೆ. ಕೆಲ ಉತ್ಪನ್ನಗಳಿಗೆ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ. ನಿರ್ದಿಷ್ಟ ಕ್ರೆಡಿಟ್ ಕಾರ್ಡ್ ಬಳಸಿ ಸೋನಿ ಸಂಸ್ಥೆಯ ಸರಕು ಖರೀದಿಸಿದರೆ ಆಕರ್ಷಕ  ಸಮಾನ ಮಾಸಿಕ ಕಂತು (ಇಎಎಂ) ಸೌಲಭ್ಯ ಕಲ್ಪಿಸಲಾಗುವುದು.  ಸೈಬರ್ ಶ್ಯಾಟ್ ಕ್ಯಾಮರಾಗಳಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರೂಪದರ್ಶಿಯಾಗಿದ್ದಾರೆ ಎಂದು ನಯ್ಯರ್ ಹೇಳಿದರು.

Post Comments (+)