ಸೋಮಣ್ಣ ಪರಿಷತ್ತಿನ ಸಭಾನಾಯಕ

ಗುರುವಾರ , ಜೂಲೈ 18, 2019
26 °C

ಸೋಮಣ್ಣ ಪರಿಷತ್ತಿನ ಸಭಾನಾಯಕ

Published:
Updated:

ಬೆಂಗಳೂರು:  ವಿಧಾನ ಪರಿಷತ್ತಿನ ಸಭಾನಾಯಕರಾಗಿ ವಸತಿ ಸಚಿವ ವಿ. ಸೋಮಣ್ಣ ನೇಮಕಗೊಂಡಿದ್ದಾರೆ. ಇವರ ನೇಮಕವನ್ನು ಸಭಾಪತಿ ಡಿ.ಎಚ್. ಶಂಕರಮೂರ್ತಿ ಗುರುವಾರ ಪರಿಷತ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದರು.ಸಭಾನಾಯಕರಾಗಿದ್ದ ಸಚಿವ ಡಾ.ವಿ.ಎಸ್. ಆಚಾರ್ಯ ಅವರ ನಿಧನದ ನಂತರ ಈ ಸ್ಥಾನ ತೆರವಾಗಿತ್ತು.

 ಬಳಿಕ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಅವರು ಸಭಾನಾಯಕರಾಗಿದ್ದರು. ಗೌಡರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಕಾರಣ, ತೆರವಾದ ಸ್ಥಾನಕ್ಕೆ ಸೋಮಣ್ಣ ಅವರನ್ನು ನೇಮಕ ಮಾಡಲಾಗಿದೆ.ವಿಮಲಾಗೌಡ   ಉಪ ಸಭಾಪತಿ


ವಿಧಾನ ಪರಿಷತ್ತಿನ ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿಯ ವಿಮಲಾಗೌಡ ಅವಿರೋಧವಾಗಿ  ಆಯ್ಕೆಯಾಗಲಿದ್ದಾರೆ.ಗುರುವಾರ  ಅವರೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಶುಕ್ರವಾರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry