ಸೋಮವಾರ, ಜನವರಿ 20, 2020
18 °C

ಸೋಮನಾಥಪುರದಲ್ಲಿ ಮಹಾಕೊಂಡೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ: ತಾಲ್ಲೂಕಿನ ಸೋಮನಾಥಪುರದ ಶ್ರೀ ಉಗ್ರನರಸಿಂಹಸ್ವಾಮಿ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಶನೇಶ್ವರಸ್ವಾಮಿಯವರ 16ನೇ ವರ್ಷದ ಮಹಾ ಕೊಂಡೋತ್ಸವ ಜನವರಿ 4 ರಂದು ಅದ್ದೂರಿಯಾಗಿ ನಡೆಯಲಿದೆ.ಶನೇಶ್ವರಸ್ವಾಮಿ, ಉಗ್ರನರಸಿಂಹಸ್ವಾಮಿ ಹಾಗೂ ಆದಿಶಕ್ತಿ ದುರ್ಗಾ ಪರಮೇಶ್ವರಿ ಸಂಯುಕ್ತಾಲಯಗಳ ಆವರಣದಲ್ಲಿ ಬಡಮಕ್ಕಳ ಉಚಿತ ಶಿಕ್ಷಣ ಹಾಗೂ ವಸತಿ ಶಾಲೆ ಮತ್ತು ಶಾಸಕರ ಅನುದಾನದಿಂದ ನೀಡಿರುವ ಕಿರು ನೀರು ಸರಬರಾಜು ಯೋಜನೆ ಪೂಜಾ ಮಹೋತ್ಸವವನ್ನು ಶಾಸಕ ಡಾ.ಎಚ್.ಸಿ. ಮಹಾದೇವಪ್ಪ ಉದ್ಘಾಟಿಸಲಿದ್ದಾರೆ. ಜಿಪಂ ಅಧ್ಯಕ್ಷೆ ಸುನೀತಾ ವೀರಪ್ಪಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾಕೊಂಡೋತ್ಸವ ಅಂಗವಾಗಿ ಶನೇಶ್ವರ ಸ್ವಾಮಿಗೆ ಎಳ್ಳೆಣ್ಣೆ ಅಭಿಷೇಕ, ಪಂಚಾಮೃತ ಅಭಿಷೇಕ, ಉಗ್ರನರಸಿಂಹಸ್ವಾಮಿಯವರಿಗೆ ವೈಕುಂಠ ಏಕಾದಶಿ ಅಂಗವಾಗಿ ಶ್ರೀಮಹಾ ಸುದರ್ಶನ ಹೋಮ ಏರ್ಪಡಿಸಲಾಗಿದೆ. ಇದೇ ವೇಳೆ ಕ್ಷೇತ್ರಪಾಲಕ ಪವಾಡ ಪುರುಷ ಸಣ್ಣಕ್ಕಿರಾಯಸ್ವಾಮಿ ದೇವಸ್ಥಾನದ ಬಸಪ್ಪ(ದೊಡ್ಡರಸಿನಕೆರೆ ಬಸವ) ನವರಿಗೆ ಪೂಜೆ ಸಲ್ಲಿಸಲಾಗುವುದು ಎಂದು ದೇವಾಲಯದ ಸಂಸ್ಥಾಪಕ ಅರ್ಚಕ ಎನ್. ಮಹಾದೇವಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)