ಶನಿವಾರ, ಜನವರಿ 18, 2020
26 °C

ಸೋಮವಾರ, 16-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡೊನೀಸಿಯ ನೌಕೆಗಳ ಮೇಲೆ ಡಚ್ ಗುಂಡಿನ ದಾಳಿ

ದಿ ಹೇಗ್, ಜ. 15-  ಪಶ್ಚಿಮ ನ್ಯೂಗಿನಿಯ ದಕ್ಷಿಣ ತೀರ ಪ್ರದೇಶದಲ್ಲಿ ಗಸ್ತು ಮಾಡುತ್ತಿರುವ ಡಚ್ ಯುದ್ಧ ನೌಕೆಗಳು ಇಂದು ಡಚ್ ನೀರಿನಲ್ಲಿದ್ದುವೆಂದು ಹೇಳಲಾದ ಇಂಡೊನೀಸಿಯದ ಮೋಟರ್ ಟಾರ್ಪೆಡೊ ಹಡಗುಗಳ ಮೇಲೆ ಗುಂಡು ಹಾರಿಸಿದವೆಂದು ಡಚ್ ವಾರ್ತಾಸಂಸ್ಥೆ “ಹಾಲೆಂಡಿಯ” ಇಂದು ರಾತ್ರಿ ವರದಿ ಮಾಡಿತು.ಟೀಕೆ ಅಸಂಗತ

ಮುಂಬೈ, ಜ. 15- “ನೆಹರೂ” ಅವರ ನೀತಿಗಳೆಲ್ಲಾ ಸರಿಯಾಗಿವೆಯೆಂದೂ, ಆದರೆ ರಕ್ಷಣಾ ಸಚಿವ ಶ್ರಿ ವಿ.ಕೆ. ಮೆನನ್‌ರು ಆ ನೀತಿಗಳನ್ನು ವಿದ್ರೂಪಗೊಳಿಸಲು ಪ್ರಯತ್ನಿಸುತ್ತಿರುವರೆಂದೂ ಯಾರೇ ಹೇಳಿದರೂ ಅದು ಪೂರ್ಣವಾಗಿ ವಂಚನೆಯೆಂದು ಪ್ರಧಾನಿ ನೆಹರೂ ಇಂದು ಇಲ್ಲಿ ನುಡಿದರು.

ಪ್ರತಿಕ್ರಿಯಿಸಿ (+)