ಸೋಮವಾರ, ಜನವರಿ 20, 2020
29 °C

ಸೋಮವಾರ, 19-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯಕೀಯ ಸೌಲಭ್ಯ ವಿಸ್ತರಣೆಗಾಗಿ ಧನಮೂಲಾಭಿವೃದ್ಧಿ

ನವದೆಹಲಿ, ಜ. 18
- ಆರೋಗ್ಯ ಸಮೀಕ್ಷೆ ಮತ್ತು ಯೋಜನಾ ಸಮಿತಿಯು ದೇಶದಲ್ಲಿನ ವೈದ್ಯಕೀಯ ಸೌಲಭ್ಯಗಳ ವಿಸ್ತರಣೆಗಾಗಿ ಇನ್ನಷ್ಟು ಹಣವನ್ನು ಕೂಡಿಸಲು ಮೂರು ಮಾರ್ಗಗಳನ್ನು ಶಿಫಾರಸು ಮಾಡಿದೆಯಲ್ಲದೆ ತೃತೀಯ ಯೋಜನೆಯಲ್ಲಿ ಆರೋಗ್ಯಕ್ಕಾಗಿ ನಿಗದಿ ಮಾಡಿರುವ ಹಣದ ಪ್ರಮಾಣದ ಮೂಲಭೂತ ಪುನರ್ವಿಮರ್ಶೆಯಾಗಬೇಕೆಂದು ಕರೆ ನೀಡಿದೆ.ಕಾಶ್ಮೀರ ವಿವಾದದ ಬಗ್ಗೆ ರಕ್ತಪಾತ ಸಂಭವ

ಕರಾಚಿ, ಜ. 18
- ಕಾಶ್ಮೀರ ವಿವಾದದ ಬಗ್ಗೆ ವಿಶ್ವರಾಷ್ಟ್ರ ಸಂಸ್ಥೆಯು ಖಚಿತವಾದ ನಿಲುವನ್ನು ತಾಳದೇ ಹೋದಲ್ಲಿ ಕಾಶ್ಮೀರದ ಪ್ರದೇಶದಲ್ಲಿ ಶಾಂತಿಗೆ ಧಕ್ಕೆಯುಂಟಾಗುತ್ತದೆಂದು ಪಾಕಿಸ್ತಾನದ ಪತ್ರಿಕೆಗಳು ಇಂದು ಎಚ್ಚರಿಕೆ ನೀಡಿದವು.

ಪ್ರತಿಕ್ರಿಯಿಸಿ (+)