ಶನಿವಾರ, ಜನವರಿ 25, 2020
16 °C

ಸೋಮವಾರ, 2–12–1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿಯಿಂದ ನಾಗಾಲ್ಯಾಂಡ್ ಉದ್ಘಾಟನೆ

ಕೊಹಿಮಾ, ಡಿ. 1– ಭಾರತ ಗಣರಾಜ್ಯದಲ್ಲಿ ಹದಿನಾರನೇ ರಾಜ್ಯವಾಗಿ ಅವತರಿಸುತ್ತಿರುವ ನಾಗಾಲ್ಯಾಂಡ್‌ ರಾಜ್ಯದ ಉದ್ಘಾಟನೆ ಇಂದು ಇಲ್ಲಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ರವರಿಂದ ನೆರವೇರಿತು. ವರ್ಣರಂಜಿತ ಉಡುಪು ಧರಿಸಿದ ನಾಗಾ ಪುರುಷರು, ಮಹಿಳೆಯರು, ಮಕ್ಕಳು, ಸುಮಾರು ಹತ್ತು ಸಹಸ್ರಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.ಭಾರತದ ಮತ್ತೊಂದು ರಾಕೆಟ್‌ ಪ್ರಯೋಗ

ಜೈಪುರ, ಡಿ. 1– ಅಂತರಿಕ್ಷದ ಶಾಂತಿಯುತ ಸಂಶೋಧನೆಗಾಗಿ ಭಾರತವು ಮತ್ತೊಂದು ರಾಕೆಟ್‌ ಅನ್ನು ಜನವರಿಯಲ್ಲಿ ಪ್ರಯೋಗಿಸಬ­ಹುದೆಂದು ಭಾರತದ ಅಂತರಿಕ್ಷ ಸಂಶೋಧನಾ ಸಮಿತಿಯ ಅಧ್ಯಕ್ಷ ಡಾ. ವಿಕ್ರಂ ಸಾರ ಭಾಯ್‌ ವರದಿಗಾರರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)