ಗುರುವಾರ , ಮಾರ್ಚ್ 4, 2021
30 °C
ಜಲಮಂಡಳಿಗೆ ಎಂಜಿನಿಯರ್‌ಗಳಿಂದ ಅಧ್ಯಯನ ವರದಿ

ಸೋರಿಕೆ ತಡೆಗೆ ಸಿಂಗಪುರ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋರಿಕೆ ತಡೆಗೆ ಸಿಂಗಪುರ ಮಾದರಿ

ಬೆಂಗಳೂರು:  ಸಿಂಗಪುರದಲ್ಲಿ ಕುಡಿ ಯುವ ನೀರಿನ ನಿರ್ವಹಣೆಯ ಉತ್ತಮ ಅಂಶಗಳನ್ನು ನಗರದಲ್ಲೂ ಅಳವಡಿಸಿ ಕೊಳ್ಳಬೇಕು ಎಂದು ಜಲಮಂಡಳಿಯ ಎಂಜಿನಿಯರ್‌ ಗಳು ಹಾಗೂ ಅಧಿಕಾರಿ ಗಳು ಮಂಡಳಿಗೆ ಶಿಫಾರಸು ಮಾಡಿದ್ದಾರೆ.ಸಿಂಗಪುರದಲ್ಲಿ ಇತ್ತೀಚೆಗೆ ಸಮಗ್ರ ಜಲಸಂಪನ್ಮೂಲ ನಿರ್ವಹಣೆಯ ಕಾರ್ಯಾಗಾರ ನಡೆದಿತ್ತು. ಈ ಕಾರ್ಯಾ ಗಾರದಲ್ಲಿ ಮಂಡಳಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಅಲ್ಲಿನ ನೀರಿನ ನಿರ್ವಹಣಾ ವ್ಯವಸ್ಥೆಯ ಅಧ್ಯಯನ ನಡೆಸಿದ ಅಧಿಕಾರಿಗಳು ಮಂಡಳಿಗೆ ವರದಿ ಸಲ್ಲಿಸಿದ್ದಾರೆ. ಸಾಂಪ್ರದಾಯಿಕ ಬಲ್ಕ್ ಮೀಟರ್‌ಗಳು, ಗೃಹೇತರ ಬಳಕೆ ಹಾಗೂ ಬಹುಮಹಡಿ ಕಟ್ಟಡಗಳ ಮೀಟ ರ್‌ಗಳನ್ನು ಬದಲಿಸಿ ಸಂಯುಕ್ತ ಮೀಟರ್‌ ಗಳನ್ನು ಅಳವಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.  ಸಂಯುಕ್ತ ಮೀಟರ್‌ ಗಳಲ್ಲಿ ಎರಡು ಬಗೆಯ ಅಳತೆಯ ಮಾಪನಗಳು ಇರಲಿವೆ. ಇದು ನೀರಿನ ಹರಿವಿನ ಬಗ್ಗೆಯೂ ನಿಗಾ ಇಡಲಿದೆ. ನೀರಿನ ಹರಿಯುವಿಕೆ ಪ್ರಮಾಣ ಜಾಸ್ತಿ ಇದ್ದಾಗ ಉನ್ನತ ದರ್ಜೆಯ ಮೀಟರ್‌  ರೀಡಿಂಗ್‌ ಮಾಡಲಿದೆ. ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದಾಗ ಸಣ್ಣ ಮೀಟರ್‌ ಬಳಕೆಗೆ ಅವಕಾಶ ಇದೆ.  ಸಿಂಗ ಪುರ ಮಾದರಿಯನ್ನು ಅನುಷ್ಠಾನ ಮಾಡಿದರೆ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ 10ರಿಂದ 15ರಷ್ಟು ಕಡಿಮೆ ಆಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಮೀಟರ್‌ಗಳ ಪರೀಕ್ಷೆ ಮಾಡುವ ಪ್ರಯೋಗಾಲಯವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಅವರು ಶಿಫಾರಸು ಮಾಡಿದ್ದಾರೆ. ಈ ಪ್ರಯೋಗಾಲಯಕ್ಕೆ ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಬೇಕು ಹಾಗೂ ಪರಿಣಿತ ವ್ಯಕ್ತಿಗ ಳನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಗ್ರಾಹಕ ಸೇವಾ ವ್ಯವಸ್ಥೆಯನ್ನು ಸುಧಾರಿಸಬೇಕು. ದೂರು ಗಳ ಸ್ವೀಕಾರಕ್ಕೆ ಜಿಐಎಸ್ ನೆರವು ಪಡೆಯಬೇಕು. ಜಿಐಎಸ್‌ ಮ್ಯಾಪ್‌ ಸಮಸ್ಯೆ ಇರುವ ಪ್ರದೇಶ ವನ್ನು ನಿಖರ ವಾಗಿ ಗುರುತಿಸಿ ಅದನ್ನು ಎಂಜಿನಿಯರ್‌ ಗಳಿಗೆ ತಿಳಿಸಬೇಕು. ಸಮಸ್ಯೆ ಇತ್ಯರ್ಥವಾ ಗುವವರೆಗೆ ಇದರ ನೆರವು ಪಡೆಯ ಬೇಕು ಎಂದು ಅವರು ಹೇಳಿದ್ದಾರೆ.ವೃಷಭಾವತಿ ಕಾಲುವೆಯಲ್ಲಿ ಕೊಳಚೆ ನೀರಿನ ಪುನರ್‌ಬಳಕೆ ಹಾಗೂ ಪರ್ಯಾಯ ಮೂಲಗಳ ಬಳಕೆ ಸಂಬಂಧ  ಜಲಮಂಡಳಿಯು 2012ರ ಅಕ್ಟೋಬರ್‌ 9ರಂದು ಟೆಮಾಸೆಕ್‌ ಫೌಂಡೇಷನ್‌ ಹಾಗೂ ಸಿಂಗಪುರ ಕೋ ಅಪರೇಷನ್‌ ಎಂಟರ್‌ಪ್ರೈಸಸ್ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಈ ಯೋಜ ನೆಯನ್ನು  ₨4.5 ಕೋಟಿ ವೆಚ್ಚದಲ್ಲಿ ಕೈಗೆ ತ್ತಿಕೊಳ್ಳಲಾಗಿದ್ದು, ಸಿಂಗಪುರದ ಸಂಸ್ಥೆ ಶೇ 76 ಮೊತ್ತ ನೀಡಲಿದೆ. ಉಳಿದ ಮೊತ್ತವನ್ನು ಮಂಡಳಿ ಭರಿಸಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.