ಚಿಕ್ಕಂದಿನ ನಿಮ್ಮ ಆಸಕ್ತಿ ಹಾಗೂ ಶಿಕ್ಷಣದ ಕುರಿತು ಹೇಳಿ.
ನಾನು ತುಂಬಾ ಚಿಕ್ಕವಳಿದ್ದಾಗಿನಿಂದಲೂ ಆರೋಗ್ಯ, ಸೌಂದರ್ಯದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದೆ. ಅದಕ್ಕೆ ಕಾರಣ ಅಮ್ಮನಿರಬಹುದು. ಅವರು ಯೋಗ ಮಾಡುತ್ತಿದ್ದರು. ನನಗೂ ಯೋಗಾಭ್ಯಾಸದಲ್ಲಿ ಆಸಕ್ತಿ ಮೂಡಿಸಿದ್ದು ಅವರೇ. ಅಲ್ಲದೆ ಬದುಕಿಗೆ ಫಿಟ್ನೆಸ್ ಎಷ್ಟು ಮುಖ್ಯ ಹಾಗೂ ಅದೇ ಉತ್ತಮ ಬದುಕಿಗೆ ಹೇಗೆ ಬುನಾದಿ ಆಗಬಲ್ಲದು ಎಂಬುದನ್ನು ಅಮ್ಮನಿಂದ ಅಂದೇ ಕಲಿತಿದ್ದೆ.

ಕೋಲ್ಕತ್ತ ಮೂಲದ ನಾನು ದೆಹಲಿಯಲ್ಲಿ ಪಾಲಿಟೆಕ್ನಿಕ್ ಅಭ್ಯಸಿಸಿದೆ. ನಂತರ ಜರ್ಮನಿಯಲ್ಲಿ ಸೌಂದರ್ಯ ಕಾಳಜಿ, ಫಿಟ್ನೆಸ್, ಫುಡ್ ಅಂಡ್ ನ್ಯೂಟ್ರಿಶಿಯನ್ ಹಾಗೂ ತ್ವಚೆಯ ಕಾಳಜಿ ಕುರಿತು ಅಭ್ಯಾಸ ಮಾಡಿದೆ. ನಂತರ 1989ರಲ್ಲಿ ಭಾರತದ ಮೊದಲ ಟ್ರಾನ್ಸ್ಫಾರ್ಮೇಶನ್ ಕೇಂದ್ರ ವಿಎಲ್ಸಿಸಿಯನ್ನು ಪ್ರಾರಂಭಿಸಿದೆ. ತೂಕ ನಿರ್ವಹಣೆ, ತ್ವಚೆ ಹಾಗೂ ಕೂದಲು ಚಿಕಿತ್ಸೆಯನ್ನೊಳಗೊಂಡ ಇಂಥ ಕೇಂದ್ರ ಭಾರತೀಯ ಮಾರುಕಟ್ಟೆಗೆ ಹೊಸತನದ ಲೇಪನ ಮಾಡಿತ್ತು.

ಈ ಕ್ಷೇತ್ರವನ್ನು ಆಯ್ದುಕೊಳ್ಳಲು ಕಾರಣ? ಸ್ಫೂರ್ತಿ ಯಾರು?
ಅಪ್ಪ ಅಮ್ಮ ವೈಯಕ್ತಿಕ ನಿರ್ಧಾರ ಹಾಗೂ ಸ್ವಾತಂತ್ರ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು. ಒಮ್ಮೆ ಅಪ್ಪನೊಂದಿಗೆ ಜರ್ಮನಿಗೆ ತೆರಳಿದ್ದೆ. ಅಲ್ಲಿ ಹೆಲ್ತ್ ಸೆಂಟರ್ ಒಂದನ್ನು ನಡೆಸುತ್ತಿದ್ದ ಅಪ್ಪನ ಸ್ನೇಹಿತರ ಪರಿಚಯವಾಯಿತು. ಅವರಲ್ಲಿ ಒಬ್ಬರು ನ್ಯೂಟ್ರಿಶನಿಸ್ಟ್ ಹಾಗೂ ಇನ್ನೊಬ್ಬರು ಕಾಸ್ಮೆಟಾಲಾಜಿಸ್ಟ್. ಆ ದಂಪತಿ ಬ್ಯೂಟಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ನನ್ನ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿದರು. ಅದೂ ಅಲ್ಲದೆ ಪತಿ ಮುಖೇಶ್ ಕೂಡ ನನ್ನ ನಿರ್ಧಾರವನ್ನು ಪ್ರೋತ್ಸಾಹಿಸಿದರು. ಹಾಗೆ ವಿಎಲ್ಸಿಸಿ ಹುಟ್ಟುಹಾಕಿದೆ. ಸಮಾಜಕ್ಕೆ ಇದರಿಂದ ಸಹಾಯವಾಗಬೇಕು ಹಾಗೂ ಎಲ್ಲಾ ವರ್ಗದ ಜನರಿಗೆ ಈ ಸೇವೆ ಸಿಗಬೇಕು ಎಂಬುದು ನನ್ನ ಕನಸಾಗಿತ್ತು.

ಫಿಟ್ನೆಸ್ ಎಷ್ಟು ಮುಖ್ಯ? ಈ ವಿಷಯದಲ್ಲಿ ಭಾರತೀಯ ಮಹಿಳೆಯರ ತಿಳಿವಳಿಕೆ ಕುರಿತು ಹೇಳಿ.
ಆರೋಗ್ಯವಾಗಿರುವುದು ಹಾಗೂ ಫಿಟ್ನೆಸ್ ಕಾಯ್ದುಕೊಳ್ಳುವುದು ಬಹುದೊಡ್ಡ ಸಂಪತ್ತು ಎನ್ನುವುದು ನನ್ನ ಅಭಿಪ್ರಾಯ. ಇನ್ನೊಂದು ಖುಷಿಯ ವಿಷಯ ಏನೆಂದರೆ ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಪ್ರಾರಂಭಿಸಿದ್ದಾರೆ. ದೊಡ್ಡ ನಗರಗಳಲ್ಲಷ್ಟೇ ಅಲ್ಲ, ಚಿಕ್ಕಚಿಕ್ಕ ಪಟ್ಟಣಗಳಲ್ಲಿರುವವರೂ ಹೆಚ್ಚು ಜಾಗರೂಕರಾಗುತ್ತಿರುವುದು ಖುಷಿಯ ವಿಷಯ.

ಸೌಂದರ್ಯಕ್ಕೆ ನೀವು ಕೊಡುವ ವ್ಯಾಖ್ಯಾನ ಏನು?
ನಮ್ಮತನದ ಉತ್ತಮ ಸ್ಥಿತಿಯೇ ನನ್ನ ಪ್ರಕಾರ ಸೌಂದರ್ಯ. ಸೌಂದರ್ಯ ಹಾಗೂ ಫಿಟ್ನೆಸ್ ಆರೋಗ್ಯ ಕಾಪಾಡುವುದಷ್ಟೇ ಅಲ್ಲದೆ ಆತ್ಮವಿಶ್ವಾಸವನ್ನೂ ದುಪ್ಪಟ್ಟು ಮಾಡಬಲ್ಲುದು.

ತ್ವಚೆ ಹಾಗೂ ಕೂದಲು ರಕ್ಷಣೆಯ ಸರಳ ನಿಯಮಗಳೇನು?
ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡುವುದು. ಹೀಗಾಗಿ ನಿಯಮಿತವಾದ ಹಾಗೂ ಆರೋಗ್ಯಯುತವಾದ ಆಹಾರ ಕ್ರಮ, ಜೊತೆಗೆ ವ್ಯಾಯಾಮ, ರಾತ್ರಿ ಚೆನ್ನಾಗಿ ನಿದ್ರಿಸುವುದು, ಒತ್ತಡ ನಿರ್ವಹಣೆಯ ಪಟ್ಟುಗಳನ್ನು ಪಾಲಿಸಿದರೆ ಫಿಟ್ನೆಸ್ ಕಾಯ್ದುಕೊಳ್ಳುವುದು ಕಷ್ಟವೇನಲ್ಲ. ಬೇಸಿಗೆ ಕಾಲದಲ್ಲಿ ಇವುಗಳೊಂದಿಗೆ ಕ್ಲೆನ್ಸರ್, ಟೋನರ್ ಹಾಗೂ ನಿದ್ದೆಗೆ ಮುನ್ನ ತ್ವಚೆಗೆ ವಾಟರ್ ಬೇಸ್ಡ್ ಮಾಯಿಸ್ಚರೈಸರ್ ಬಳಸುವುದು ಉತ್ತಮ.

ಉದ್ಯಮದ ಪ್ರಾರಂಭದ ದಿನಗಳ ಸವಾಲು ಹೇಗಿತ್ತು?
ಪ್ರಾರಂಭದ ದಿನದ ಸವಾಲು ಎಂದರೆ ಜನರ ಮನೋಭಾವ. ಆಗತಾನೆ ಜನರು ಬ್ಯೂಟಿ ಪಾರ್ಲರ್ಗಳ ಮೊರೆಹೋಗಲು ಪ್ರಾರಂಭಿಸಿದ್ದರು. ಆದರೆ ವಿಎಲ್ಸಿಸಿಯಂಥ ಟ್ರಾನ್ಸ್ಫಾರ್ಮೇಶನ್ ಕೇಂದ್ರ ತೀರಾ ಹೊಸದಾಗಿತ್ತು. ಸೌಂದರ್ಯ ಹಾಗೂ ಫಿಟ್ನೆಸ್ಗೆ ಸಂಬಂಧಿಸಿದ ಎಲ್ಲಾ ರೀತಿಯ ಸೇವೆ ನೀಡುವ ಈ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಅರಿವು ಮೂಡಿಸುವುದು ತುಸು ಕಷ್ಟವೆನಿಸಿತು. ಅದೂ ಅಲ್ಲದೆ ಮಹಿಳಾ ಉದ್ಯಮಿಗಳು ಕಡಿಮೆ ಇದ್ದುದರಿಂದ ಹೂಡಿಕೆದಾರರನ್ನು ಒಪ್ಪಿಸುವುದು ಒಂದು ಸವಾಲಾಗಿತ್ತು. ತಾಳ್ಮೆ ಹಾಗೂ ಕಠಿಣ ಪರಿಶ್ರಮವೇ ನನ್ನ ಕನಸನ್ನು ನನಸು ಮಾಡಿದ್ದು.

ಮನೆಮಂದಿಯ ಬೆಂಬಲ ಹೇಗಿದೆ?
ಈ ಯಶಸ್ಸಿಗೆ ಮುಖ್ಯವಾಗಿ ಕಾರಣರಾದದ್ದು ಪತಿ, ಅತ್ತೆ ಹಾಗೂ ಮಾವ. ಪ್ರಾರಂಭದ ದಿನಗಳಲ್ಲಿ ಎಲ್ಲವನ್ನೂ ಅವರೇ ನಿಭಾಯಿಸುತ್ತಿದ್ದರು. ಅಲ್ಲದೆ ಎರಡು ಹೆಣ್ಣುಮಕ್ಕಳೂ ನನ್ನ ಒತ್ತಡವನ್ನು ಅರ್ಥೈಸಿಕೊಂಡು ಸಹಕರಿಸಿದರು. ಇದೇ ಬೆಂಬಲದಿಂದಲೇ ಕಂಪೆನಿ 14 ದೇಶಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. 5000 ಕೆಲಸಗಾರರಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರೇ. ಅಲ್ಲದೆ ನಮ್ಮ ‘ದಿ ವಿಎಲ್ಸಿಸಿ ಇನ್ಸ್ಟಿಟ್ಯೂಟ್ ಆಫ್ ಬ್ಯೂಟಿ ಅಂಡ್ ನ್ಯೂಟ್ರಿಶಿಯನ್’ ಸಂಸ್ಥೆ ನೇಪಾಳ ಹಾಗೂ ಭಾರತದಾದ್ಯಂತ 60 ಕ್ಯಾಂಪಸ್ಗಳನ್ನು ಹೊಂದಿದೆ.

ಸೌಂದರ್ಯ ಹಾಗೂ ಫ್ಯಾಷನ್ ಕ್ಷೇತ್ರದ ಭವಿಷ್ಯವೇನು?
ಸೌಂದರ್ಯ ಹಾಗೂ ಆರೋಗ್ಯ ಕ್ಷೇತ್ರದ ಸದ್ಯದ ಪರಿಸ್ಥಿತಿಯ ಪ್ರಕಾರ ₨ 70 ಸಾವಿರ ಕೋಟಿಯಷ್ಟು ವಹಿವಾಟಿದೆ. ಪ್ರತಿ ವರ್ಷ ಶೇ 18–20ರಷ್ಟು ಪ್ರಗತಿ ಕಾಣುತ್ತಿದೆ. ಜನಸಾಮಾನ್ಯರಲ್ಲಿ ಜಾಗೃತಿ ಮೂಡುತ್ತಿರುವುದೇ ಈ ಎಲ್ಲಾ ಅಭಿವೃದ್ಧಿಗೆ ಕಾರಣ.

ಮುಂದಿನ ಯೋಜನೆಗಳು?
ಬೇರೆ ದೇಶಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಿಎಲ್ಸಿಸಿ ಹಾಗೂ ನಾವು ತಯಾರಿಸುವ ಉತ್ಪನ್ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಮನಸ್ಸಿದೆ. ಅಲ್ಲದೆ ಮಧ್ಯ ಪ್ರಾಚ್ಯ, ದಕ್ಷಿಣ ಪ್ರಾಚ್ಯ, ಏಷ್ಯಾ ಹಾಗೂ ಪಶ್ಚಿಮ ಆಫ್ರಿಕಾದೆಡೆಗೆ ನಮ್ಮ ಕಂಪೆನಿಯನ್ನು ವಿಸ್ತರಿಸಬೇಕೆಂದಿದ್ದೇನೆ. ಬ್ಯೂಟಿ ಹಾಗೂ ವೆಲ್ನೆಸ್ ಕ್ಷೇತ್ರದ ಅಧ್ಯಕ್ಷೆಯಾಗಿದ್ದು, ಸೌಂದರ್ಯ ಹಾಗೂ ಆರೋಗ್ಯ ಕ್ಷೇತ್ರದ ಉತ್ತಮ ವೃತ್ತಿಪರರು ಭಾರತೀಯರನ್ನಾಗಿಸುವ ಬಯಕೆ ಹೊಂದಿದ್ದೇನೆ.

ಬೆಂಗಳೂರಿನಲ್ಲಿ ನಿಮ್ಮ ಅನುಭವ ಹೇಗಿದೆ?
ಈ ನಗರಕ್ಕೆ ಯಾವತ್ತೂ ವಿಶೇಷವಾದ ಸ್ಥಾನ ನೀಡಿದ್ದೇನೆ. ಇಲ್ಲಿಯೇ ಎಂಟು ವಿಎಲ್ಸಿಸಿ ವೆಲ್ನೆಸ್ ಸೆಂಟರ್ ಹಾಗೂ ವಿಎಲ್ಸಿಸಿ ಸಂಸ್ಥೆ ಇವೆ. ಅಲ್ಲದೆ ವಿಎಲ್ಸಿಸಿ ಉತ್ಪನ್ನ ಬೆಂಗಳೂರಿನ ಎಲ್ಲ ಮುಖ್ಯ ಮಳಿಗೆಗಳಲ್ಲಿ ಲಭ್ಯವಿದೆ. ಈ ನಗರದಿಂದ ವಿಎಲ್ಸಿಸಿಗೆ ಸಿಕ್ಕ ಪ್ರೀತಿ ಬಣ್ಣಿಸಲಾರದಂಥದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.