ಶುಕ್ರವಾರ, ಜೂನ್ 18, 2021
23 °C

ಸ್ಕ್ವಾಷ್‌: ಜೋಷ್ನಾಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆನಾಂಗ್‌, ಮಲೇಷ್ಯಾ (ಪಿಟಿಐ): ಭಾರತದ ಜೋಷ್ನಾ ಚಿಣ್ಣಪ್ಪ ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಲು ಕಂಡಿದ್ದಾರೆ.ಮಂಗಳವಾರ ನಡೆದ ಆರಂಭಿಕ ಸುತ್ತಿನ ಪಂದ್ಯದಲ್ಲಿ ವಿಶ್ವ ರ್‍್ಯಾಂಕಿಂಗ್‌ ನಲ್ಲಿ 19ನೇ ಸ್ಥಾನ ಹೊಂದಿರುವ  ಭಾರತದ ಆಟಗಾರ್ತಿ 7–11, 7–11, 11–9, 2–11ರಲ್ಲಿ ನಾಲ್ಕನೇ ರ್‍್ಯಾಂಕಿಂಗ್‌ನಲ್ಲಿರುವ  ಇಂಗ್ಲೆಂಡ್‌ನ ಅಲಿಸನ್‌ ವಾಟರ್ಸ್‌ ಎದುರು ನಿರಾಸೆ ಅನುಭವಿಸಿದರು.ಪಂದ್ಯದ ಮೊದಲ ಎರಡು ಗೇಮ್‌ಗಳಲ್ಲಿ ಭಾರತದ ಆಟಗಾರ್ತಿ ತೋರಿದ ತೀವ್ರ ಪೈಪೋಟಿಯ ಹೊರ ತಾಗಿಯೂ  ಎದುರಾಳಿ  ವಾಟರ್ಸನ್‌ ಗೆಲುವು ತಮ್ಮದಾಗಿಸಿ ಕೊಂಡರು.ಮೊದಲ ಎರಡು ಗೇಮ್‌ಗಳಲ್ಲಿ ಎದುರಾದ ನಿರಾಸೆಯನ್ನು ಮರೆಮಾಚು ವಂತೆ ಆಡಿದ ಜೋಷ್ನಾ 11–9ರಲ್ಲಿ ಮೂರನೇ ಗೇಮ್‌ಅನ್ನು ತಮ್ಮ ಕೈವಶ ಮಾಡಿಕೊಂಡರು. ಆದರೆ ನಾಲ್ಕನೇ ಗೇಮ್‌ನಲ್ಲಿ ಪಾರಮ್ಯ ಮೆರೆದ ಇಂಗ್ಲೆಂಡ್‌ ಆಟಗಾರ್ತಿ ಪಂದ್ಯ ಗೆದ್ದು ಸಂಭ್ರಮಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.