ನವದೆಹಲಿ (ಪಿಟಿಐ): ಯುವ ಆಟಗಾರ ಮಹೇಶ್ ಮಂಗಾಂವ್ಕರ್ ಸ್ಲೊವಾಕಿಯಾದ ರಾಜಧಾನಿ ಬ್ರಾಟಿ ಸ್ಲೊವಾದಲ್ಲಿ ನಡೆದ ಐಮೆಟ್ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ (ಪಿಎಸ್ಎ ವರ್ಲ್ಡ್ ಟೂರ್ ಚಾಲೆಂ ಜರ್–5) ಚಾಂಪಿಯನ್ ಆದರು.

ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪರ್ಧಿ ಎನಿಸಿದರು. ಐಮೆಟ್ ಸ್ಕ್ವಾಷ್ ಸೆಂಟ್ರಮ್ನಲ್ಲಿ ನಡೆದ ಫೈನಲ್ನಲ್ಲಿ ಮಹೇಶ್ 7–11, 11–8, 11–4, 6–11, 11–7ರಲ್ಲಿ ಹಾಲಿ ಚಾಂಪಿ ಯನ್ ಸ್ಕಾಟ್ಲೆಂಡ್ನ ಗ್ರೆಗ್ ಲೊಬನ್ ಅವರನ್ನು ಪರಾಭವಗೊಳಿಸಿದರು.

ವಿಶ್ವ ಸ್ಕ್ವಾಷ್ ರ್ಯಾಂಕಿಂಗ್ನಲ್ಲಿ 98ನೇ ಸ್ಥಾನದಲ್ಲಿರುವ ಮುಂಬೈನ ಆಟಗಾರ ಅಮೋಘ ಪ್ರದರ್ಶನ ತೋರಿದರು. 77 ನಿಮಿಷ ನಡೆದ ಈ ಹೋರಾಟದಲ್ಲಿ ಅವರು ಮೊದಲ ಸೆಟ್ನಲ್ಲಿ ಸೋಲು ಕಂಡರು. ಆದರೆ ತಕ್ಷಣವೇ ಚೇತರಿಸಿಕೊಂಡು ತಿರು ಗೇಟು ನೀಡುವಲ್ಲಿ ಯಶಸ್ವಿಯಾ ದರು. ಫೈನಲ್ ಹೋರಾಟ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಸಾಗಿತು.

‘ಫೈನಲ್ ಪಂದ್ಯಕ್ಕೆ ತಿರುವು ನೀಡಿದ್ದು ಎರಡನೇ ಸೆಟ್. ಅಂಗಳದಲ್ಲಿ ಉತ್ತಮ ಪಾದಚಲನೆ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ’ ಎಂದು 19 ವರ್ಷ ವಯಸ್ಸಿನ ಮಹೇಶ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಈ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದ ಅವರು ಸೆಮಿಫೈನಲ್ನಲ್ಲಿ 13–11, 11–8, 9–11, 7–11, 13–11ರಲ್ಲಿ ಜೆಕ್ ಗಣರಾಜ್ಯದ ಜಾನ್ ಕಾಕಾಲ್ ಎದುರು ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.