ಭಾನುವಾರ, ಏಪ್ರಿಲ್ 11, 2021
30 °C

ಸ್ತ್ರೀಪರ ಕಾನೂನು ಬಲಪಡಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮಹಿಳೆಯರ ವೈಯಕ್ತಿಕ ಕಾನೂನು ಹಾಗೂ ನಾಗರಿಕ ಕಾನೂನಿನ ಮೇಲೆ ಪ್ರಭಾವ ಬೀರುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ’ ಎಂದು ಕೆನಡಾ ಕಾರ್ಲ್‌ಟನ್ ವಿಶ್ವವಿದ್ಯಾಲಯದ ಪ್ರೊ. ವನಜಾ ಧ್ರುವರಾಜನ್ ಅವರು ಅಭಿಪ್ರಾಯಪಟ್ಟರು.ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದರು.

‘ಸ್ತ್ರೀಪರವಾದ ಹಲವಾರು ಕಾನೂನುಗಳಿದ್ದರೂ ನಿಜಜೀವನದಲ್ಲಿ ಅವು ನೆರವಿಗೆ ಬರುತ್ತಿಲ್ಲ. ಸರ್ಕಾರ ನೀತಿ ನಿರೂಪಣೆ ಮಾಡುವಾಗ ಮಹಿಳೆಯರ ಧ್ವನಿಯನ್ನು ಪರಿಗಣಿಸುತ್ತಿಲ್ಲ. ಭಾರತವು ಪ್ರಪಂಚದಲ್ಲಿಯೇ ಅತಿ ಹೆಚ್ಚು ಶ್ರೀಮಂತರನ್ನು ಹೊಂದಿದ್ದು, ಇಲ್ಲಿನ ನೀತಿಗಳು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುತ್ತಿವೆ. ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ಮೂಲಕ ಕಂದಕ ನಿರ್ಮಿಸಿವೆ’ ಎಂದು ವಿಷಾದಿಸಿದರು.‘ಮಹಿಳಾ ಸಮಾನತೆ ಬಗ್ಗೆ ಮಾತನಾಡುವ ಸಮಾಜದಲ್ಲಿ ಪ್ರತಿ ವರ್ಷ 8500 ಮಹಿಳೆಯರು ವರದಕ್ಷಿಣಿ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ.  ಮಹಿಳೆಯರಿಗೆ ಬೇಕಿರುವುದು ಆತ್ಮಗೌರವ’ ಎಂದು ಮುಖ್ಯ ಅತಿಥಿಯಾಗಿದ್ದ ವೈದ್ಯ ಡಾ.ಅನುಪಮಾ ಎಚ್.ಎಸ್. ಹೇಳಿದರು.ಮಹಿಳೆಯರು ತಾವು ಸುಧಾರಣೆ ಆಗುವುದರ ಜೊತೆಗೆ ತಮ್ಮೊಂದಿಗೆ ಇರುವವರನ್ನೂ ಬೆಳಸಬೇಕು ಎಂದು ಕುಲಪತಿ ಪ್ರೊ.ಗೀತಾ ಬಾಲಿ ಹೇಳಿದರು.ಪ್ರಶಸ್ತಿ ಪ್ರದಾನ:ಪತ್ರಕರ್ತೆ ಕೆ.ಎಚ್. ಸಾವಿತ್ರಿ ಅವರಿಗೆ ‘ಶ್ರೀ ಎಸ್.ಎಫ್. ಉಪ್ಪಿನ ಐಎಸ್‌ಎಫ್ ಅತ್ಯುತ್ತುಮ ಪತ್ರಕರ್ತೆ ಪ್ರಶಸ್ತಿ’ ಹಾಗೂ ಎ.ಆರ್.ಸುಧಾಮಣಿ ಅವರಿಗೆ ‘ಈರಮ್ಮ ನಾಗಪ್ಪ ಮುನವಳ್ಳಿ ಅತ್ಯುತ್ತಮ ಮಹಿಳಾ ಸಾಧಕಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.ಕುಲಸಚಿವ ಡಾ.ಎಸ್.ಎ. ಖಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾನ್ವಿತ 29 ವಿದ್ಯಾರ್ಥಿನಿಯರಿಗೆ ವಿಜಾಪುರ ನಗರಸಭೆಯಿಂದ 1.35 ಲಕ್ಷ ರೂ ಚೆಕ್  ವಿತರಿಸಲಾಯಿತು. ಪೌರಾಯುಕ್ತ  ರಾಜಶೇಖರ, ಸಹ ಪ್ರಾಧ್ಯಾಪಕ ಡಾ.ಎಂ.ಬಿ. ದಿಲ್‌ಷಾದ್ ಸ್ವಾಗತಿಸಿದರು. ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ಆರ್. ಸುನಂದಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪಿ.ಜಿ. ತಡಸದ, ಡಾ.ಓಂಕಾರ ಕಾಕಡೆ ಕಾರ್ಯಕ್ರಮ ನಿರೂಪಿಸಿದರು. ಡಾ.ವಿ.ವಿ. ಮಳಗಿ ವಂದಿಸಿದರು.

****

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.