ಶುಕ್ರವಾರ, ಜನವರಿ 24, 2020
21 °C

ಸ್ತ್ರೀ ಸಮಾನತೆ ನೀಡಿದ ಶರಣರು: ತೋಂಟದ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬಡತನ, -ಹಸಿವು ನೀಗಲು ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕವೇ ದಿವ್ಯೌಷಧ ವಾಗಿದೆ ಎಂದು ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಶಿವಾನಂದ ನಗರದಲ್ಲಿರುವ ಬಸವಮಂಟಪ ದಲ್ಲಿ  ಬಸವದಳದ 20 ನೇ ವಾರ್ಷಿಕೋತ್ಸವ ಅಂಗವಾಗಿ ಬಸವ ತತ್ವದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿ ದರು.ಜನಸಾಮಾನ್ಯರಿಂದ ದೂರವಾಗಿದ್ದ ದೇವ ರನ್ನು ಮತ್ತು ಧರ್ಮವನ್ನು ಜನಮುಖಿ ಯಾಗಿಸಿ ಪರಿಚಯಿಸಿದರು ಶರಣರು.  ಜಾತಿ, ವರ್ಗ, ಭೇದ ರಹಿತ ಸಮಾಜ ನಿರ್ಮಾಣದ ಜೊತೆಗೆ ಮಾಯೆ ಎಂದು ಜರೆಯುತ್ತಿದ್ದ ಸ್ತ್ರೀಯರಿಗೆ ಸಮಾನತೆ ನೀಡಿದರು.  ಬಸವಣ್ಣ ಧರ್ಮಸ್ಥಾಪಕ ನಾದರೆ, ವಚನಗಳೇ ಧರ್ಮಶಾಸ್ತ್ರಗಳಾಗಿವೆ ಎಂದು ಸ್ವಾಮೀಜಿ  ಪ್ರತಿಪಾದಿಸಿದರು.ಬಸವ ನವಲಿಂಗ ಶರಣರು ಮಾತ ನಾಡಿ, ಬಸವೇಶ್ವರರು ಮೊದಲು ಬೋಧಿಸಿದ್ದೇ ಕಾಯಕ ನಂತರದ ಸ್ಥಾನಗಳಲ್ಲಿ ಧರ್ಮ ಹಾಗೂ ಕೊನೆಗೆ ದೇವರನ್ನು ಕುರಿತ ತತ್ವ ಬಸವತತ ್ವವಾಗಿದೆ. ಜೀವನೋದ್ಧಾರಕ್ಕೆ ಕಾಯಕ, ಜೀವನ ಮುಕ್ತಿಗೆ ದಾಸೋಹ ಹಾಗೂ ಮಾನವನ ಆತ್ಮೋದ್ಧಾರಕ್ಕೆ ಶಿವಯೋಗ ಎಂಬುದನ್ನು ಬಸವಣ್ಣ ಬೋಧಿಸಿದರು.ಬಸವದಳ ಅಧ್ಯಕ್ಷ ಎಂ.ಬಿ.ಲಿಂಗಧಾಳ ಸುಶ್ರಾವ್ಯವಾಗಿ ವಚನ ಹಾಡಿದರು. ಬಸವಕೇಂದ್ರದ ಅಧ್ಯಕ್ಷ ಎಂ.ಎ. ಹಂಚನಾಳ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನ ಗೌಡ್ರ, ಶರಣ ಸಾಹಿತ್ಯ ಪರಿಷತ್  ಜಿಲ್ಲಾ ಘಟಕದ ಅಧ್ಯಕ್ಷ ಅ.ಓಂ. ಪಾಟೀಲ, ಸಂಶಿಯ ಶಿಕ್ಷಕ  ಮೃತ್ಯುಂಜಯ ಜಡಿಮಠ, ನಗರಸಭೆ ಸದಸ್ಯ ಅನಿಲ ಗರಗ, ಎಸ್.ಎಚ್. ಶಿವನಗೌಡ್ರ, ಹಿರಿಯರಾದ ಎನ್.ಬಿ. ನೀಲಗುಂದ ಮಠ   ಹಾಜರಿದ್ದರು.ಬಸವ ನವಲಿಂಗ ಶರಣರಿಂದ ಷಟಸ್ಥಲ ಧ್ವಜಾರೋಣ, ಸಾಮೂಹಿಕ ವಚನ ಪಠಣ ದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಬಸವದಳ ಕಾರ್ಯದರ್ಶಿ ವಿ.ಕೆ.ಕರಿ ಗೌಡ್ರ ಸ್ವಾಗತಿಸಿದರು.   ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ   ನಿರೂಪಿಸಿದರು.   ಗೌರಕ್ಕ ಬಡಿಗಣ್ಣ ವರ ವಂದಿಸಿದರು. ಇದೇ 24 ರವರೆಗೆ ಪ್ರತಿನಿತ್ಯ ಸಂಜೆ 6 ರಿಂದ 7.-30 ರವರೆಗೆ ಬಸವತತ್ವದರ್ಶನ ಪ್ರವಚನ ನಡೆಯಲಿದೆ.

ಪ್ರತಿಕ್ರಿಯಿಸಿ (+)