ಶನಿವಾರ, ಮೇ 8, 2021
27 °C

ಸ್ಥಾಯಿ ಸಮಿತಿ ಅಧ್ಯಯನ; ಪ್ರವಾಸಕ್ಕೆ 20.54 ಕೋಟಿ ಖರ್ಚು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡುವ ಸಲುವಾಗಿ ರಚಿಸಲಾಗಿರುವ ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರುಗಳಿಗೆ ಕಳೆದ ಮೂರು ವರ್ಷಗಳಲ್ಲಿ ಸ್ವದೇಶ ಹಾಗೂ ವಿದೇಶ ಅಧ್ಯಯನ ಪ್ರವಾಸಗಳಿಗೆ ಮತ್ತು ಭತ್ಯೆಗಳ ಸಲುವಾಗಿ ಒಟ್ಟು 20.54 ಕೋಟಿ ರೂಪಾಯಿ ಖರ್ಚು ಮಾಡಿರುವ ಸಂಗತಿಯು ಮಾಹಿತಿ ಹಕ್ಕು ಕಾಯ್ದೆಯಿಂದ ಬೆಳಕಿಗೆ ಬಂದಿದೆ.`ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ 13ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದ ನಂತರ ಮೂರು ವರ್ಷಗಳ ಅವಧಿಯಲ್ಲಿ ವಿಧಾನ ಮಂಡಲದ ವಿವಿಧ ಸಮಿತಿ ಸದಸ್ಯರಾದ ಶಾಸಕರ ಅಧ್ಯಯನ ಪ್ರವಾಸ ಮತ್ತು ಭತ್ಯೆಗಳಿಗೆ ಒಟ್ಟು ರೂ 19,46,95,831   ಖರ್ಚು ಮಾಡಲಾಗಿದೆ.

 

ಅದೇ ರೀತಿ ಸಮಿತಿಯ ಜೊತೆಗೆ ಅಧ್ಯಯನ ಪ್ರವಾಸ ಕೈಗೊಂಡ ಅಧಿಕಾರಿಗಳ ವಿವಿಧ ಭತ್ಯೆಗಳಿಗಾಗಿ ರೂ 1,07,51,206 ಖರ್ಚು ಮಾಡಲಾಗಿದೆ~ ಎಂದು ವಿಧಾನ ಮಂಡಲದ ಕಾರ್ಯದರ್ಶಿಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ವಿವರ ನೀಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.