ಗುರುವಾರ , ಮೇ 6, 2021
23 °C

ಸ್ನೂಕರ್: ಅರ್ಜುನ್, ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎ.ಆರ್. ಅರ್ಜುನ್ ಇಲ್ಲಿ ಆರಂಭವಾದ 36ನೇ ವರ್ಷದ ಬಿ.ಎಸ್. ಸಂಪತ್ ಸ್ಮಾರಕ ಸ್ನೂಕರ್ ಟೂರ್ನಿಯ ಮೊದಲ ಪಂದ್ಯದಲ್ಲಿ 2-1ರಲ್ಲಿ ಪ್ರಣವ್ ಪ್ರಭಾಕರ್ ಎದುರು ಗೆಲುವು ಪಡೆದು ಶುಭಾರಂಭ ಮಾಡಿದರು.ಸೋಮವಾರ ನಡೆದ ಪಂದ್ಯದ ಎರಡನೆಯ ಫ್ರೇಮ್‌ನಲ್ಲಿ ಅರ್ಜುನ್ 86-80ರಲ್ಲಿ ಸೋಲು ಕಂಡರು. ಮೊದಲ ಹಾಗೂ ಕೊನೆಯ ಫ್ರೇಮ್‌ನಲ್ಲಿ ಕ್ರಮವಾಗಿ 111-77 ಮತ್ತು 99-72ರಲ್ಲಿ ಪ್ರಣವ್ ಎದುರು ಜಯಿಸಿದರು.ದಿನದ ಇತರ ಪಂದ್ಯಗಳಲ್ಲಿ ರವಿವರ್ಮ 2-0ರಲ್ಲಿ ಬಾಲಾಜಿ ರೆಡ್ಡಿ ಮೇಲೂ, ಜಿ. ವಿಶ್ವನಾಥ್ 2-1ರಲ್ಲಿ ಗಿರೀಶ್ ಬಾಬು ವಿರುದ್ಧವೂ, ಉಮಾದೇವಿ 2-0ರಲ್ಲಿ ಮಹಮ್ಮದ್ ಅಲಿ ಮೇಲೂ, ಆದಿತ್ಯ ರಣಾವತ್ 2-1ರಲ್ಲಿ ಎ. ದೀಪಕ್ ವಿರುದ್ಧವೂ, ಕೃಷ್ಣಕಾಂತ್ 2-0ರಲ್ಲಿ ಎಚ್.ಎಸ್. ನೀಲಕಂಠನ್ ಮೇಲೂ, ಜಿ. ಎಲ್ಜಿನ್ 2-1ರಲ್ಲಿ ಜೈಪ್ರಕಾಶ್ ವಿರುದ್ಧವೂ, ಎಸ್.ಎನ್. ಕುಶಾಲ್ 2-0ರಲ್ಲಿ ಎಚ್.ಇ. ಆನಂದ್ ಮೇಲೂ ಜಯ ಸಾಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.