ಮಂಗಳವಾರ, ಮೇ 11, 2021
20 °C

ಸ್ನೇಹಿತನ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಲ ನೀಡಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಒಂದನೇ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.ನಾಗಶೆಟ್ಟಿಹಳ್ಳಿ ನಿವಾಸಿ ರಘು (38) ಶಿಕ್ಷೆಗೆ ಗುರಿಯಾದವನು. 2007ರ ಫೆ.20 ರಂದು ತನ್ನ ಸ್ನೇಹಿತ ಗಣೇಶ ಅವರ ಜತೆ ಹಣಕಾಸಿನ ವಿಚಾರವಾಗಿ ಜಗಳವಾಡಿದ್ದ ರಘು, ಅದೇ ದಿನ ರಾತ್ರಿ ಗಣೇಶ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.ಆತನ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು ಎಂದ ಪೊಲೀಸರು ತಿಳಿಸಿದ್ದಾರೆ.ರಘು ಕೊಲೆ ಮಾಡಿರುವ ವಿಷಯ ಗೊತ್ತಿದ್ದರೂ ಆತನಿಗೆ ಮಹೇಶ್ ಅಲಿಯಾಸ್ ಮೋನಿ ಆಶ್ರಯ ನೀಡಿದ್ದನು.ಇಬ್ಬರೂ ಆರೋಪಿಗಳನ್ನು 2007ರ ಮಾ.27ರಂದು ವಿದ್ಯಾರಣ್ಯಪುರದಲ್ಲಿ ಬಂಧಿಸಿದ ಪೊಲೀಸರು, ಆರೋಪಿಗಳ ವಿರುದ್ಧ ಮೇ.17ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ತ್ವರಿತ ನ್ಯಾಯಾಲಯ ಮಹೇಶ್‌ರನ್ನು ನಿರಪರಾಧಿ ಎಂದು ಆದೇಶ ನೀಡಿ, ಆರೋಪಿ ರಘುವಿಗೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.