ಸ್ಪರ್ಧೆ: ಶಂಕರ್‌ಗೆ ಪ್ರಥಮ ಬಹುಮಾನ

7

ಸ್ಪರ್ಧೆ: ಶಂಕರ್‌ಗೆ ಪ್ರಥಮ ಬಹುಮಾನ

Published:
Updated:
ಸ್ಪರ್ಧೆ: ಶಂಕರ್‌ಗೆ ಪ್ರಥಮ ಬಹುಮಾನ

ಕುಷ್ಟಗಿ: ಇಳಕಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಜಲದೃಶ್ಯ’ ವಿಭಾಗದಲ್ಲಿ ತಾಲ್ಲೂಕಿನ ದೋಟಿಹಾಳ ಗ್ರಾಮದ ಶಂಕರ ಪತ್ತಾರ ಅವರ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ.ಇಳಕಲ್ ವರ್ಣ ಆರ್ಟ್ ಗ್ರೂಪ್ ಎರಡನೇ ಕಲಾ ಹಬ್ಬದ ನಿಮಿತ್ತ ಈ ಸ್ಪರ್ಧೆ ಏರ್ಪಡಿಸಿತ್ತು. ಇಳಕಲ್‌ನ ವಿಜಯಮಹಾಂತ ಸ್ವಾಮೀಜಿ ಶಂಕರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ತಾಲ್ಲೂಕಿನ ಛಾಯಾಚಿತ್ರಗ್ರಾಹಕರ ಸಂಘದ ಗೌರವ ಅಧ್ಯಕ್ಷರಾಗಿರುವ ಶಂಕರ್‌ರ ಅನೇಕ ನಿಸರ್ಗಕ್ಕೆ ಸಂಬಂಧಿಸಿದ ಚಿತ್ರಗಳಿಗೆ ಈ ಹಿಂದೆಯೂ ಪ್ರಶಸ್ತಿಗಳು ಬಂದಿವೆ.ಪ್ರಶಸ್ತಿ ಪಡೆದ ಶಂಕರ್ ಅವರನ್ನು ತಾಲ್ಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry