ಸೋಮವಾರ, ಮಾರ್ಚ್ 8, 2021
25 °C

ಸ್ಪೇನ್‌ನಲ್ಲಿ ಆರ್ಥಿಕ ಬಿಕ್ಕಟ್ಟು: ಜನರಿಂದ ಬೃಹತ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪೇನ್‌ನಲ್ಲಿ ಆರ್ಥಿಕ ಬಿಕ್ಕಟ್ಟು: ಜನರಿಂದ ಬೃಹತ್ ಪ್ರತಿಭಟನೆ

ಮ್ಯಾಡ್ರಿಡ್ (ಎಎಫ್‌ಪಿ): ಸ್ಪೇನ್‌ನಲ್ಲಿ ಕೆಲವು ದಿನಗಳಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳಿಂದ ಜರ್ಜರಿತರಾಗಿರುವ ಜನರು ಸರ್ಕಾರದ ಬಜೆಟ್ ಕಡಿತ ನಿರ್ಧಾರವನ್ನು ವಿರೋಧಿಸಿ ಭಾನುವಾರ ಬೃಹತ್ ರ‌್ಯಾಲಿ ನಡೆಸಿದರು.ನಗರದ ಹೊರವಲಯದಲ್ಲಿ ಸೇರಿದ್ದ ಸುಮಾರು 35ರಿಂದ 40 ಸಾವಿರ ಜನರು ಸಾಲುಗಳಲ್ಲಿ ನಗರ ದೊಳಗೆ ಪ್ರವೇಶಿಸಿ ಸಂಸತ್ ಎದುರು ಜಮಾಯಿಸಿದರು. ದೊಡ್ಡ ಮಟ್ಟದ ಜನರ ಗುಂಪನ್ನು ಎದುರಿಸಲು ವಿವಿಧ ಕಸರತ್ತು ನಡೆಸಿ ವಿಫಲ ರಾದರು. ಬ್ಯಾಂಕ್‌ಗಳು ಮತ್ತು ರಾಜಕಾರ ಣಿಗಳು ಹೇಳುವಂತೆ ದೇಶದ ಈ ಸ್ಥಿತಿಗೆ ನಿರುದ್ಯೋಗ ಸಮಸ್ಯೆ ಕಾರಣ ವಲ್ಲ. ಇದನ್ನು ತಾವು ಒಪ್ಪುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿ ದರು. ಆರ್ಥಿಕ ಹಿಂಜರಿತಕ್ಕೆ ಬ್ಯಾಂಕ್ ಹಾಗೂ ರಾಜಕಾರಣಿಗಳು ಕಾರಣ ಎಂದು ಅವರು ಆರೋಪಿಸಿದರು. ಈ ಬೃಹತ್ ರ‌್ಯಾಲಿಗೆ `ಇಂಡಿಗ್ನಂಟ್ಸ್~ ಎಂದು ಹೆಸರಿಡಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.