ಮಂಗಳವಾರ, ಮೇ 18, 2021
24 °C

ಸ್ಪೇನ್ ಟೊಮ್ಯಾಟೊ ಹಬ್ಬಕ್ಕೆ ರಾಜ್ಯದ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಐಎಎನ್‌ಎಸ್): ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಈ ವಾರಾಂತ್ಯದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಸ್ಪೇನ್ ಮೂಲದ ಪರಸ್ಪರ ಟೊಮ್ಯಾಟೊಗಳಲ್ಲಿ ಹೊಡೆದಾಡುವ `ಟೊಮ್ಯಾಟೊ~ ಹಬ್ಬವನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.ಈ ಕುರಿತು ಬೆಂಗಳೂರು ಹಾಗೂ ಮೈಸೂರಿನ ಪೊಲೀಸರಿಗೆ ನಿರ್ದೇಶನ ನೀಡಿರುವ ಮುಖ್ಯಮಂತ್ರಿ ಸದಾನಂದಗೌಡರು ಟೊಮ್ಯಾಟೊ ಹಬ್ಬಕ್ಕೆ ಅನುಮತಿ ನೀಡಬಾರದೆಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪರಸ್ಪರ ಟೊಮ್ಯಾಟೊಗಳ ಮೂಲಕ ಹೊಡೆದಾಡುವ ಟೊಮ್ಯಾಟೊ ಹಬ್ಬ ನಮ್ಮ ಸಂಸ್ಕೃತಿಗೆ ವಿರುದ್ದ ಹಾಗೂ ಇದರಿಂದ ಪೌಷ್ಠಿಕಾಂಶಯುಕ್ತ ಟೊಮ್ಯಾಟೊಗಳನ್ನು ವ್ಯರ್ಥವಾಗಿ ನಾಶಪಡಿಸಿದಂತಾಗುತ್ತದೆ ಎಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.ಪ್ರವಾಸಿ ಸಂಸ್ಥೆ ಗೊಇಬಿಬೊ ಹಾಗೂ ಉಡುಪು ಉದ್ಯಮ ಕಿಲ್ಲರ್ ಜೀನ್ಸ್ ಸಂಸ್ಥೆಗಳು ಏರ್ಪಡಿಸಲು ಉದ್ದೇಶಿಸಿದ್ದ ಟೊಮ್ಯಾಟೊ ಹಬ್ಬಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ನಿರ್ದೇಶಕರಾದ ಸುನೀಲ್ ಕುಮಾರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.