ಮಂಗಳವಾರ, ಜನವರಿ 28, 2020
17 °C

ಸ್ಫೋಟ: ಒಂದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಫಾಲ (ಐಎಎನ್‌ಎಸ್):  ಮಣಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿಧಾನಸಭಾ ಸ್ಪೀಕರ್ ಅವರ ನಿವಾಸದ ಹೊರಗೆ ಭಾನುವಾರ ಸಂಜೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.ಐ.ಹೇಮಚಂದ್ರ ಸಿಂಗ್ ಅವರ ಮನೆ ಹೊರಗೆ ಸಂಜೆ 6.15ರ ಸುಮಾರಿಗೆ ಈ ಘಟನೆ ನಡೆದಿದೆ. ಇದೊಂದು ಸುಧಾರಿತ ಸ್ಫೋಟಕ ಸಾಧನವಾಗಿತ್ತು ಎಂದು ಆರಂಭಿಕ ವರದಿಗಳು ಹೇಳಿವೆ. ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ನಡೆದ ಮೂರನೇ ಸ್ಫೋಟ ಇದಾಗಿದೆ.ಇದೇ ತಿಂಗಳ 6ರಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿತ್ತು. 10ರಂದು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಕೆ.ಜೋಯ್ ಕಿಶನ್ ಅವರ ಮನೆ ಹೊರಗೆ ಉಗ್ರರು ಗ್ರೆನೇಡ್ ಸ್ಫೋಟಿಸಿದ ಪರಿಣಾಮ ಮೂವರು ಗಾಯಗೊಂಡಿದ್ದರು.

ಪ್ರತಿಕ್ರಿಯಿಸಿ (+)