ಬುಧವಾರ, ಜನವರಿ 29, 2020
26 °C

ಸ್ಫೋಟ: 15 ಗುಡಿಸಲುಗಳು ಬೆಂಕಿಗೆ ಆಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಚ್‌ಎಎಲ್‌ ಸಮೀಪದ ಮುನೇಕೊಳಾಲ ಕೊಳೆಗೇರಿಯಲ್ಲಿ ಮಂಗಳವಾರ ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟಗೊಂಡು ಸುಮಾರು 15 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ.ಕೊಳೆಗೇರಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಹೆಚ್ಚಾಗಿ ವಾಸವಿದ್ದರು. ಗುಡಿಸಲೊಂದರಲಿದ್ದ 5 ಕೆ.ಜಿ ತೂಕದ ಸಿಲಿಂಡರ್‌  ಮಧ್ಯಾಹ್ನ ಎರಡು ಗಂಟೆ ಸುಮಾರಿ­ಗೆ ಸ್ಫೋಟಗೊಂಡು ಗುಡಿಸಲಿಗೆ ಬೆಂಕಿ ಹೊತ್ತಿ­ಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆ ಅಕ್ಕಪಕ್ಕದ ಗುಡಿಸಲುಗಳಿಗೂ ವ್ಯಾಪಿಸಿದೆ. ಘಟನೆ ವೇಳೆ ಗುಡಿಸಲುಗಳಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ವಿಷಯ ತಿಳಿದ ಕೂಡಲೇ ನಾಲ್ಕು ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದು ಗಂಟೆ ಕಾರ್ಯಾ­ಚರ­ಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗುಡಿಸಲುಗಳ ಪಕ್ಕದಲ್ಲೇ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕವಿದೆ. ರಾಶಿ­ಯಾಗಿ ಬಿದ್ದಿ­ರುವ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡಿದ್ದರೆ ಬೆಂಕಿ ನಂದಿಸುವುದು ಕಷ್ಟವಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)