ಶುಕ್ರವಾರ, ಏಪ್ರಿಲ್ 3, 2020
19 °C

ಸ್ಮಶಾನ ಭೂಮಿಯಲ್ಲಿ ನಿವೇಶನ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿನಗರ:  ಮಾಜಿ ಕ್ರಿಕೆಟ್‌ ಆಟಗಾರ ಕೀರ್ಮಾನಿ ಅವರ ಸಹೋ ದರನ ನಿವೇಶನ ಚಂದ್ರ ಲೇಔಟ್‌ನ ಐಟಿಐ ಬಡಾವಣೆಯ ದಲಿತರ ಸ್ಮಶಾನದಲ್ಲಿರುವುದು ಕಂಡು ಬಂದಿದ್ದು,  ಈ ಬಗ್ಗೆ  ಪರಿಶೀಲನೆ ನಡೆಸಲಾಗುವುದು ಎಂದು  ಮೇಯರ್‌ ಬಿ.ಎಸ್‌. ಸತ್ಯನಾ ರಾಯಣ ತಿಳಿಸಿದರು.ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಐಟಿಐ ಹೌಸಿಂಗ್‌ ಸೊಸೈಟಿಯಿಂದ ಈ ನಿವೇಶನವನ್ನು ದಲಿತರ ರುದ್ರಭೂಮಿಯಲ್ಲಿ ಹಂಚಿಕೆ ಮಾಡಿರುವುದು  ಕಂಡುಬಂದಿದ್ದು  ಸರ್ವೇ ಮತ್ತು ಸಂಬಂಧಪಟ್ಟ ದಾಖ ಲೆಗಳನ್ನು ಪರಿಶೀಲಿಸಿ ವರದಿ ನೀಡು ವಂತೆ ಕಂದಾಯ ಇಲಾಖೆಯ ಅಧಿಕಾ ರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಸೊಸೈಟಿಯವರು ಕೀರ್ಮಾನಿ ಸಹೋದರನಿಗೆ ನಾಲ್ಕುಸಾವಿರ ಚದರ ಅಡಿಯ ನಿವೇಶನವನ್ನು  ದಲಿತರ ರುದ್ರಭೂಮಿ ಜಾಗದಲ್ಲಿ ಮಂಜೂರು ಮಾಡಿದ್ದಾರೆ. ಈ ಬಗ್ಗೆ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿ ಸಿದ್ದಾರೆ. ಸಮಗ್ರ ಪರಿಶೀಲನೆಯ ನಂತರವಷ್ಟೆ  ಸತ್ಯ ಬೆಳಕಿಗೆ ಬರಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)