ಗುರುವಾರ , ಜೂನ್ 24, 2021
29 °C

ಸ್ಮಾರ್ಟ್‌ಫೋನ್:ಅಪ್ಲಿಕೇಷನ್ಸ್ ಬಳಕೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಮಾರ್ಟ್‌ಫೋನ್:ಅಪ್ಲಿಕೇಷನ್ಸ್ ಬಳಕೆ ಹೆಚ್ಚಳ

ಅಗ್ಗದ ದರದ ಸ್ಮಾರ್ಟ್‌ಫೋನ್ ಲಭ್ಯತೆಯಿಂದ ದೇಶದ ಗ್ರಾಮೀಣ ಭಾಗದ ಮೊಬೈಲ್ ಬಳಕೆದಾರರರು ಆನ್‌ಲೈನ್ ವಿಡಿಯೊ, ಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಗೂಗಲ್ ನಡೆಸಿದ ಸಮೀಕ್ಷೆ ತಿಳಿಸಿದೆ. ದೇಶದ ಸುಮಾರು 40 ದಶಲಕ್ಷದಷ್ಟು ದೂರವಾಣಿ ಗ್ರಾಹಕರು ಮೊಬೈಲ್ ಮೂಲಕವೇ ಅಂತರ್ಜಾಲ ಸೌಲಭ್ಯ ಪಡೆಯುತ್ತಿದ್ದಾರೆ. ಇದರ ಜತೆಗೆ ಹಲವು ಮೌಲ್ಯವರ್ಧಿತ ಸೇವೆಗಳನ್ನು ಪಡೆಯಲು ವಾರದಲ್ಲಿ ಸರಾಸರಿ 30 ದಶಲಕ್ಷದಷ್ಟು ಅಪ್ಲಿಕೇಷನ್ಸ್‌ಗಳು ಡೌನ್‌ಲೋಡ್ ಆಗುತ್ತಿವೆಯಂತೆ.  18ರಿಂದ 29 ವರ್ಷ ವಯಸ್ಸಿನವರು ಹೆಚ್ಚಾಗಿ ಸ್ಮಾರ್ಟ್‌ಫೋನ್ ಮೂಲಕ ಅಪ್ಲಿಕೇಷನ್ಸ್ ಡೌನ್‌ಲೋಡ್ ಮಾಡಿಕೊಂಡು ಚಿತ್ರ, ವಿಡಿಯೊ ತುಣುಕುಗಳನ್ನು ನೋಡುತ್ತಾರೆ ಎಂದು ಗೂಗಲ್ ಮತ್ತು `ಐಪಿಎಸ್‌ಒಎಸ್~ ಸಂಸ್ಥೆ ನಡೆಸಿದ ಜಂಟಿ ಸಮೀಕ್ಷೆ ಅಂಕಿ ಅಂಶಗಳು ಬಹಿರಂಗಪಡಿಸಿವೆ.  ಅಗ್ಗದ ಬೆಲೆಯಲ್ಲಿ ಗರಿಷ್ಠ ಗುಣಮಟ್ಟದ ತಾಂತ್ರಿಕ ಸೌಲಭ್ಯಗಳಿರುವ ಸ್ಮಾರ್ಟ್‌ಫೋನ್‌ಗಳು ಯುವಜನರ ಕೈಗೆಟುಕುತ್ತಿವೆ. ಇದು ಅಪ್ಲಿಕೇಷನ್ಸ್ ಡೌನ್‌ಲೋಡ್ ಹೆಚ್ಚಲು ಕಾರಣ ಎನ್ನುತ್ತಾರೆ ಅರ್ನೆಸ್ಟ್ ಅಂಡ್ ಯಂಗ್ ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥ ಅಮಿತ್ ಸಚ್‌ದೇವ್.ಸದ್ಯ ದೇಶದಲ್ಲಿ ರೂ.5 ಸಾವಿರ ದರಕ್ಕೆ ಸ್ಮಾರ್ಟ್‌ಫೋನ್ ಗಳು ಲಭಿಸುತ್ತಿದೆ. ಅದರಲ್ಲೂ ಮೂರನೆಯ ತಲೆಮಾರಿನ ತರಂಗಾಂತರ ಸೇವೆ (3ಜಿ) ಜನಪ್ರಿಯತೆಯಿಂದ ಮೊಬೈಲ್ ಮೌಲ್ಯವರ್ಧಿತ ಸೇವೆಗಳ ಬಳಕೆಯೂ ಹೆಚ್ಚಾಗಿದೆ. ಮನರಂಜನೆಗೆ ಸಂಬಂಧಿಸಿದ ಅಪ್ಲಿಕೇಷನ್ಸ್ ಡೌನ್‌ಲೋಡ್ ಮಾಡಿಕೊಳ್ಳುವರ ಸಂಖ್ಯೆ ಹೆಚ್ಚಿದೆ. ಇದನ್ನು ಹೊರತುಪಡಿಸಿದರೆ ಸಾಮಾಜಿಕ ಸಂವಹನ ತಾಣ ಮತ್ತು ಉದ್ಯೋಗ ಮಾಹಿತಿ ತಾಣಗಳ  ಸಂಪರ್ಕ ಸಾಧಿಸುವ   ಅಪ್ಲಿಕೇಷನ್ಸ್‌ಗಳಿಗೆ ಗರಿಷ್ಠ ಬೇಡಿಕೆ ಇದೆ. ಐ.ಟಿ ಸಲಹಾ ಸಂಸ್ಥೆ ಸೈಬರ್ ಮೀಡಿಯಾ ನಡೆಸಿದ ಸಮೀಕ್ಷೆ ಪ್ರಕಾರ 2011ರಲ್ಲಿ ದೇಶದಲ್ಲಿ ಸ್ಮಾರ್ಟ್ ಫೋನ್‌ಗಳ ಮಾರಾಟ ಶೆ 87ರಷ್ಟು ಹೆಚ್ಚಾಗಿದ್ದು, 11 ದಶಲಕ್ಷಗಳಷ್ಟಾಗಿದೆ. ಒಂದೇ ವರ್ಷದಲ್ಲಿ 30ಕ್ಕೂ ಹೆಚ್ಚು ಕಂಪೆನಿಗಳು 150 ಹೆಚ್ಚು ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.