ಚೆನ್ನೈ (ಪಿಟಿಐ): ತಮಿಳುನಾಡು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದರೂ ಎಐಎಡಿಎಂಕೆಯು ಮಿತ್ರ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆಗೆ ಇನ್ನೂ ಪ್ರಯತ್ನ ನಡೆಸಿದ್ದು ರಾಜ್ಯದ ರಾಜಕೀಯ ಚಿತ್ರಣ ಸ್ಪಷ್ಟವಾಗಿಲ್ಲ.ಒಂದೆಡೆ ಡಿಎಂಡಿಕೆಯು ಸ್ಪರ್ಧಿಸಬೇಕಾದ ಕ್ಷೇತ್ರಗಳು ಇನ್ನೂ ಖಚಿತವಾಗಿಲ್ಲ ಮತ್ತೊಂದೆಡೆ ಎಂಡಿಎಂಕೆಯು ಮೈತ್ರಿಕೂಟದಿಂದ ಹೊರಬಂದಿದೆ.

ಆಡಳಿತಾರೂಢ ಡಿಎಂಕೆಯು ತನ್ನ ಮಿತ್ರಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆಯನ್ನು ಪೂರ್ಣಗೊಳಿಸಿದ್ದು ಡಿಎಂಕೆ 119 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಕಾಂಗ್ರೆಸ್ಗೆ 63 ಸ್ಥಾನಗಳನ್ನು, ಪಿಎಂಕೆಗೆ 30 ಸ್ಥಾನಗಳನ್ನು, ವಿಸಿಕೆಗೆ 10 ಸ್ಥಾನಗಳನ್ನು, ಕೊಂಗು ನಾಡು ಮುನ್ನೇತ್ರ ಕಚ್ಚಿಗೆ ಏಳು, ಐಯುಎಂಎಲ್ಗೆ ಮೂರು ಮತ್ತು ಮೂವೆಂದರ್ ಮುನ್ನೇತ್ರ ಕಳಗಂ ಮತ್ತು ಪಿಎಂಕೆಗೆ ತಲಾ ಒಂದು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.

ಡಿಎಂಕೆ ಈಗಾಗಲೇ 199 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದರೆ, ಹಿರಿಯ ಕಾಂಗ್ರೆಸ್ಸಿಗರು ತಮ್ಮ ಬೆಂಬಲಿಗರಿಗೆ ಟಿಕೆಟ್ ದೊರಕಿಸಿಕೊಡಲು ನವದೆಹಲಿಗೆ ತೆರಳಿದ್ದಾರೆ. ಮೈತ್ರಿಕೂಟದ ಇತರ ಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಹೆಸರಿಸಿವೆ.ಈಗಾಗಲೇ 160 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಎಐಎಡಿಎಂಕೆ ಶನಿವಾರ ಈ ಪಟ್ಟಿಯನ್ನು ಹಿಂದಕ್ಕೆ ಪಡೆದಿದ್ದು ಹೊಸ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

ಎಐಎಡಿಂಕೆಯು ಡಿಎಂಡಿಕೆಗೆ 41 ಸ್ಥಾನಗಳನ್ನು, ಸಿಪಿಎಂಗೆ 12 ಸ್ಥಾನಗಳನ್ನು, ಸಿಪಿಐಗೆ 10 ಸ್ಥಾನಗಳನ್ನು, ಮುಸ್ಲಿಂ ಬೆಂಬಲಿತ ಮಣಿತ ನೇಯ ಮಕ್ಕಳ್ ಕಚ್ಚಿಗೆ ಮೂರು, ನಟ ಶರತ್ಕುಮಾರ್ ಅವರ ಅಖಿಲ ಭಾರತ ಸಮುತ್ವ ಕಚ್ಚಿಗೆ ಎರಡು, ಅಖಿಲ ಭಾರತ ಮೂವೆಂದರ್ ಮುನ್ನೇತ್ರ ಕಳಗಂ, ಆರ್ಪಿಐ ಮತ್ತು ಕೊಂಗು ಇಳಗಿನರ್ ಪೆರ್ವೈಗೆ ತಲಾ ಒಂದು ಸ್ಥಾನ ಬಿಟ್ಟುಕೊಟ್ಟಿದೆ.

ಬಿಜೆಪಿಯು ಜನತಾಪಕ್ಷ ಮತ್ತು ಜೆಡಿಯು ಜತೆ ಹೊಂದಾಣಿಕೆ ಮಾಡಿಕೊಂಡಿದ್ದು ತೃತೀಯ ರಂಗ ರಚನೆಗೆ ಯತ್ನಿಸಿದೆ.ಮುಖ್ಯಮಂತ್ರಿ ಸ್ಥಾನದ ಪ್ರಮುಖ ಸ್ಪರ್ಧಿಗಳಾದ ಎಂ. ಕರುಣಾನಿಧಿ ಮತ್ತು ಜಯಲಲಿತಾ ಅವರು ತಮ್ಮ ತವರು ಪ್ರದೇಶಗಳಿಂದ ಸ್ಪರ್ಧಿಸಲು ಬಯಸಿದ್ದಾರೆ. ಕರುಣಾನಿಧಿ ಅವರು ಸ್ವಕ್ಷೇತ್ರ ತಿರುವಾರೂರ್ನಿಂದ ಸ್ಪರ್ಧಿಸಲಿದ್ದರೆ, ಜಯಲಲಿತಾ ಅವರು ಶ್ರೀರಂಗಂನಿಂದ ( ಜಯಲಲಿತಾ ಅವರ ಪೂರ್ವಜರು ಮೈಸೂರಿನಿಂದ ವಲಸೆ ಬಂದು ನೆಲೆಸಿದ ಸ್ಥಳ) ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.