ಚಾಮರಾಜನಗರ: ಬಿಸಿಲಿನ ಧಗೆ ಹೆಚ್ಚುತ್ತಲೇ ಇದೆ. ಮಳೆ ಕೂಡ ಮುನಿಸು ತೋರಿದ್ದಾನೆ. ಜಿಲ್ಲಾ ಕೇಂದ್ರದ ವ್ಯಾಪ್ತಿ ಸ್ವಚ್ಛತೆಯೂ ಕಣ್ಮರೆಯಾಗಿದೆ. ಇದರ ಪರಿಣಾಮ ನಾಗರಿಕರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.

ನಗರದ ವ್ಯಾಪ್ತಿಯ ರಸ್ತೆಬದಿ, ಮಾರುಕಟ್ಟೆ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿದರೆ ಅನೈರ್ಮಲ್ಯ ಸೃಷ್ಟಿಯಾಗಿರುವುದು ಕಣ್ಣಿಗೆ ರಾಚುತ್ತದೆ. ಎಲ್ಲೆಡೆ ತೆರೆದ ಚರಂಡಿ ವ್ಯವಸ್ಥೆಯಿದೆ. ಇದರ ಪರಿಣಾಮ ನೈರ್ಮಲ್ಯ ಹದಗೆಟ್ಟಿದೆ. ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ನಗರಸಭೆ ಕಚೇರಿಯ ಅಕ್ಕಪಕ್ಕ ತೆರೆದ ಚರಂಡಿಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ತೆಗೆಯುವ ಕೆಲಸ ನಡೆದಿಲ್ಲ. ಇದು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.

ಮಾಂಸ, ಮೀನು, ಹಣ್ಣು, ಸಿಹಿ-ತಿಂಡಿ ತೆರೆದಿಟ್ಟುಕೊಂಡು ಮಾರಾಟ ಮಾಡುವುದು ಈಗ ಸಾಮಾನ್ಯ. ಗಾಜಿನ ಪೆಟ್ಟಿಗೆಯಲ್ಲಿಟ್ಟುಕೊಂಡು ಮಾರಾಟ ಮಾಡುವುದು ಅಪರೂಪ. ಕುರಿ, ಆಡು ವಧೆ ಮಾಡುವ ಮೊದಲು ಪಶುವೈದ್ಯರಿಂದ ಪರೀಕ್ಷಿಸಿ ದೃಢಪಡಿಸಿಕೊಳ್ಳುವುದು ಕಡ್ಡಾಯ. ನಗರಸಭೆಯ ಈ ನಿಯಮಾವಳಿಗಳಿಗೆ ಅಂಗಡಿ ಮಾಲೀಕರು ಮನ್ನಣೆ ನೀಡುತ್ತಿದ್ದಾರೆಯೇ? ಎಂಬುದು ಯಕ್ಷಪ್ರಶ್ನೆ.

ಹೋಟೆಲ್, ಕಸಾಯಿಖಾನೆ ಅಂಗಡಿ ಮಾಲೀಕರು ಸಾಂಕ್ರಾಮಿಕ ರೋಗ ಹರಡದಂತೆ ಮುಂಜ್ರಾಗ್ರತೆ ವಹಿಸಬೇಕೆಂದು ಪ್ರಕಟಣೆ ನೀಡಿ ಕೈತೊಳೆದುಕೊಳ್ಳುವುದರಲ್ಲಿಯೇ ನಗರಸಭೆ ಆಡಳಿತ ಮಗ್ನವಾಗಿದೆ.

ವಾಸ್ತವವಾಗಿ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರೀಕ್ಷಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂಬುದು ನಾಗರಿಕರ ಆರೋಪ.

ಜಿಲ್ಲಾ ಕೇಂದ್ರದ ಬಹಳಷ್ಟು ಹೋಟೆಲ್ಗಳಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಸಂಜೆ ವೇಳೆ ಫುಟ್ಪಾತ್ಗಳಲ್ಲಿ ಕರಿದ ತಿಂಡಿ-ತಿನಿಸು, ಕಬಾಬ್ ಇತ್ಯಾದಿ ಮಾರಾಟ ಮಾಡುವುದು ನಡೆಯುತ್ತಿದೆ. ತಳ್ಳುವ ಗಾಡಿಗಳಲ್ಲಿ ಆಹಾರ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುವುದು ಹೆಚ್ಚು. ಆದರೆ, ವ್ಯಾಪಾರಿಗಳು ಗ್ರಾಹಕರಿಗೆ ಶುದ್ಧವಾದ ನೀರು ಪೂರೈಸುವುದು ಕಡಿಮೆ. ಹಣತೆತ್ತ ನಾಗರಿಕರು ರೋಗರು ಜಿನಗಳಿಗೂ ತುತ್ತಾ ಗುವಂತಾಗಿದೆ.

ಸೊಳ್ಳೆ ಕಾಟ: ಇಂದಿಗೂ ನಗರದ ವ್ಯಾಪ್ತಿ ಸೊಳ್ಳೆ ಹಾವಳಿ ತಡೆಗೆ ಸ್ಥಳೀಯ ಆಡಳಿತ ಸೂಕ್ತ ಕ್ರಮಕೈಗೊಂಡಿಲ್ಲ. ಕಲ್ಮಷ ನೀರು ಹೊರಹೋಗದ ಪರಿಣಾಮ ಚರಂಡಿಗಳು ಸೊಳ್ಳೆ ಉತ್ಪತ್ತಿಯ ತಾಣಗಳಾಗುತ್ತಿವೆ. ಸಂಜೆ ವೇಳೆ ಧೂಮೀಕರಣಕ್ಕೆ ಕ್ರಮವಹಿಸಿಲ್ಲ. ಇದು ನಾಗರಿಕರಿಗೆ ಚಿಂತೆಗೀಡು ಮಾಡಿದೆ. ಚಿಕುನ್ಗುನ್ಯಾ, ಡೆಂಗೆ ಜ್ವರ ಭೀತಿಯೂ ಕಾಡುತ್ತಿದೆ.

`ಜಿಲ್ಲಾ ಕೇಂದ್ರದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಕೂಡ ಪೂರೈಕೆಯಾಗುತ್ತಿಲ್ಲ. ಪೂರೈಕೆಯಾಗುವ ನೀರು ಶುದ್ಧವಾಗಿರುವುದಿಲ್ಲ. ಪ್ರತಿನಿತ್ಯ ಸ್ವಚ್ಛತೆಯೂ ನಡೆಯುತ್ತಿಲ್ಲ. ಕನಿಷ್ಠ ಚರಂಡಿ ಸ್ವಚ್ಛತೆಗೂ ಸ್ಥಳೀಯ ಆಡಳಿತ ಮುಂದಾಗಿಲ್ಲ. ಹೀಗಾಗಿ, ಸೊಳ್ಳೆ ಕಾಟ ಹೆಚ್ಚಿ ರಾತ್ರಿವೇಳೆ ತೊಂದರೆ ಅನುಭವಿಸುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೊದಲು ಸ್ವಚ್ಛತೆ ಬಗ್ಗೆ ನಾಗರಿಕರಿಗೆ ತಿಳಿವಳಿಕೆ ಮೂಡಿಸಬೇಕು. ಜತೆಗೆ, ನೈರ್ಮಲ್ಯ ಕಾಪಾಡಲು ಒತ್ತು ನೀಡಬೇಕು~ ಎಂದು ಒತ್ತಾಯಿಸುತ್ತಾರೆ ಗ್ರಾಹಕ ಅವಿನಾಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.