ಸೋಮವಾರ, ಜನವರಿ 27, 2020
17 °C

ಸ್ವದೇಶಿ ಉತ್ಪಾದನೆಗೆ ಭದ್ರ ತಳಪಾಯ ಅಗತ್ಯ: ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಲೆಕ್ಟ್ರಾನಿಕ್ಸ್‌ ಮತ್ತು ದೂರಸಂಪರ್ಕ ವಲಯದಲ್ಲಿ ಹೆಚ್ಚಾಗುತ್ತಿರುವ ಆಮದು ಪ್ರಮಾಣ­ವನ್ನು ನಿಯಂತ್ರಿಸುವುದಕ್ಕಾಗಿ ಈ ಕ್ಷೇತ್ರ­ದಲ್ಲಿ ಸ್ವದೇಶಿ ಉತ್ಪಾದನೆಗೆ ಭದ್ರ ಅಡಿಪಾಯ ಹಾಕುವ ಅಗತ್ಯವಿದೆ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.ಇಲ್ಲಿ ನಡೆದ ‘ಇಂಡಿಯಾ ಟೆಲಿಕಾಂ–2013’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್‌, ‘2020ರ ವೇಳೆಗೆ ದೇಶವು 30,000 ಕೋಟಿ ಡಾಲರ್‌ (₨18.6 ಲಕ್ಷ ಕೋಟಿ) ಮೊತ್ತದ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಆಮದು ಮಾಡಿಕೊಳ್ಳಲಿದೆ ಎನ್ನಲಾಗಿದೆ. ಇದು ರಾಷ್ಟ್ರವು ಆಮದು­ಮಾಡಿ­ಕೊಳ್ಳಲಿರುವ ಪೆಟ್ರೋಲಿಯಂ ಉತ್ಪನ್ನಗಳ ಮೌಲ್ಯಕ್ಕಿಂತ ಹೆಚ್ಚು’ ಎಂದು ಸಿಂಗ್‌ ಹೇಳಿದರು.

ಪ್ರತಿಕ್ರಿಯಿಸಿ (+)