ಶನಿವಾರ, ಜನವರಿ 25, 2020
28 °C
ಹುಲಿ ಗಣತಿ: ಸೊಂಪಾದ ಕಾಡಿನಲ್ಲಿ ಹುಲಿರಾಯನ ಹುಡುಕಾಟ

ಸ್ವಯಂಸೇವಕರ ಉತ್ಸಾಹ ಇಮ್ಮಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ  ಕಳೆದ ಮೂರು ದಿನಗಳಿಂದ ನಡೆಯುತಿರುವ ರಾಷ್ಟ್ರೀಯ ಹುಲಿ ಗಣತಿ ಕಾರ್ಯಕ್ರಮ ಮುಂದುವರಿದಿದೆ. ಇಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ  ಓಂಕಾರ ವಲಯದಲ್ಲಿ ಗುರುವಾರ  ತೌಳನೆರೆ ಕ್ಯಾಂಪ್ ಬಳಿ ತೆರಳುತ್ತಿದ್ದಾಗ ಸುಮಾರು 8.10ರ ಸಮಯದಲ್ಲಿ ಅದೇ ತಾನೇ ಮೂಡಿರುವಂತಹ ಹುಲಿ ಹಾಗೂ ಚಿರತೆಯ ಹೆಜ್ಜೆ ಗುರುತುಗಳು ಕಂಡುಬಂದಿವೆ ಎಂದು ಮೈಸೂರು ಮೂಲದ ಸ್ವಯಂ ಸೇವಕಿ ಭಾನು ಮೋಹನ್‌ ಪತ್ರಿಕೆಗೆ ಮಾಹಿತಿ ನೀಡಿದರು.ಕರಡಿಗಳ ಲದ್ದಿ ಕೂಡ ಇಂದಿನ ಗಣತಿಯಲ್ಲಿ ದೊರೆತಿದೆ ಎಂದು ಅವರು ತಿಳಿಸಿದರು. ಹುಲಿ ಗಣತಿಗೆ ಆಗಮಿಸಿರುವ ಸ್ವಯಂ ಸೇವಕರಿಗೆ ಕೆಲವು ಕಡೆ ಆನೆಗಳ ದರ್ಶನವಾಗಿದ್ದು  ಜಿಂಕೆ, ಕಡವೆ, ಗುಳ್ಳೆನರಿ, ಕಾಡು ಕೋಳಿ ಮತ್ತು ವಿವಿಧ ಬಗೆಯ ಪಕ್ಷಿಗಳನ್ನು ನೋಡಿ  ಖುಷಿಯಾಗಿದೆ ಎಂದು ಸ್ವಯಂ ಸೇವಕರು ತಿಳಿಸಿದರು.ಭಾನು, ಮೋಹನ್, ಮೈಸೂರು ಪರಿಸರ ಸಂರಕ್ಷಣಾ ಸಮಿತಿಯ ಎನ್‌ಜಿಓ ಮೊಹನ್, ಬೆಂಗಳೂರು ಐಟಿ ಕಂಪನಿಯ ಧ್ರುವ, ಬೆಂಗಳೂರು ಕಾಫಿಸ್ಟಾಪ್ ರೆಸ್ಟೋರೆಂಟ್‌ನ ನೌಕರ ರಾಘವೇಂದ್ರ, ಅರಣ್ಯ ವೀಕ್ಷಕ ಸಂತೋಷ್‌, ಮೈಸೂರಿನ ಮಂದೀಪ್  ಮುಂತಾದವರು ಬರಗಿ ಬಳಿಯ ಮಾರಮ್ಮ ದೇವಸ್ಥಾನದ ಬಳಿ ಗಣತಿ ಕಾರ್ಯದಲ್ಲಿ ತೊಡಗಿದ್ದರು.ಮಲೆ ಮಹದೇಶ್ವರದಲ್ಲೂ ಗಣತಿ

ಕೊಳ್ಳೇಗಾಲ: ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ 12 ಬೀಟ್‌ಗಳಲ್ಲಿ ಗುರುವಾರ ಹುಲಿಗಣತಿ ನಡೆಯಿತು.

ಚಂಗಡಿ, ಪೊನ್ನಾಚಿ ಅರಣ್ಯದಲ್ಲಿ ತಲಾ ಒಂದು ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಮಜುಗುಳಿಸೋನೆ, ಅರೆಹಳ್ಳ, ವಡಕೆ ಅರಣ್ಯ, ಆಲರೆಹಳ್ಳ, ಎಲ್‌ಕೆಎಂ 9ರಿಂದ 10 ನಾಯಿಗಳ ಹೆಜ್ಜೆಗುರುತು ಪತ್ತೆಯಾಗಿದೆ. ಕಾವೇರಿ ವನ್ಯಜೀವಿಧಾಮದಲ್ಲಿ 45 ದಾರಿಗಳಲ್ಲಿ ಹುಲಿ ಹುಡುಕಾಟ ನಡೆಸಲಾಗಿದ್ದು ಹುಲಿಗಳ ಚಲನವಲನ, ಹುಲಿ ಹೆಜ್ಜೆಗುರುತುಗಳು ಹಾಗೂ ಬೇಟೆ ಪ್ರಾಣಿಗಳಾದ ಕರಡಿ, ಕಾಡುನಾಯಿಗಳ ಹೆಜ್ಜೆಗುರುತು ಪತ್ತೆಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ತಿಳಿಸಿದರು.ತಾಲ್ಲೂಕಿನ ಕೌದಳ್ಳಿ, ಹನೂರು ವ್ಯಾಪ್ತಿಯ ಅರಣ್ಯ ಪ್ರದೇಶ ಸೇರಿದಂತೆ ಮಳವಳ್ಳಿ ತಾಲ್ಲೂಕು ವ್ಯಾಪ್ತಿಯ ಭೀಮೇಶ್ವರಿ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಹುಡುಕಾಟ ನಡೆಸಲಾಯಿತು.

ಪ್ರತಿಕ್ರಿಯಿಸಿ (+)