ಶುಕ್ರವಾರ, ಮೇ 29, 2020
27 °C

ಸ್ವಾತಂತ್ರ್ಯ ಬಂದರೂ ದಕ್ಕದ ಹಕ್ಕು: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಸ್ವಾತಂತ್ರ್ಯ ಬಂದು ದಶಕಗಳು ಉರುಳಿದರು ದಲಿತರು ಹಕ್ಕುಗಳಿಗೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿರುವುದು  ವಿಷಾದನೀಯ ಎಂದು ದಸಂಸ (ಸಂಯೋಜಕ) ಜಿಲ್ಲಾ ಸಂಚಾಲಕ ಎನ್.ವಿಜಯಕುಮಾರ್ ಹೇಳಿದರು.ತಾಲ್ಲೂಕಿನ ಕವತನಹಳ್ಳಿ ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ  ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಜಯಂತಿ ಹಾಗೂ ಗ್ರಾಮದ ದಸಂಸ (ಸಂಯೋಜಕ) ಶಾಖೆ ಉದ್ಘಾಟಿಸಿ ಮಾತನಾಡಿದರು.ದಲಿತ ಸಮುದಾಯಗಳು ತಮ್ಮಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟಿತರಾಗಿ ಸರ್ಕಾರದಿಂದ ಬರುವ ಸೌಲಭ್ಯ ಪಡೆಯಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.ಜಿಲ್ಲಾ ಸಂಘಟನಾ ಸಂಯೋಜಕ ಮೆಕಾನಿಕ್ ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಡಿ.ಕೃಷ್ಣಪ್ಪ, ನಾರಾಯಣಗೌಡ, ಡಿ.ರಾಮಕೃಷ್ಣಪ್ಪ, ಕವತನಹಳ್ಳಿ ಗ್ರಾಮ ಶಾಖೆ ಸಂಯೋಜಕ ಕೆ.ಎಸ್.ಬಾಬು, ಸಂಘಟನಾ ಸಂಯೋಜಕ ಪ್ರಸಾದ್, ಶ್ರೀಕಂಠ, ಖಜಾಂಚಿ ಜಿ.ಮಣಿ, ಸಮಿತಿ ಸದಸ್ಯರಾದ ಎನ್.ವೆಂಕಟರಮಣ, ಆರ್.ಗಂಜೇಂದ್ರ  ಮತ್ತಿತರರು ಭಾಗವಹಿಸಿದ್ದರು.ಕಲಾವಿದ ನರಸಿಂಹ ದೊಮ್ಮಸಂದ್ರ ನರಸಿಂಹ ಶಾಲಾ ಮಕ್ಕಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಶನೇಶ್ವರ ಜಯಂತಿ

ಬಾಗೇಪಲ್ಲಿ: ಗಡಿದಂ ಶನಿಮಹಾತ್ಮ ದೇವಾಲಯದಲ್ಲಿ ಶನೇಶ್ವರ ಜಯಂತಿ ಮಂಗಳವಾರ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.