ನವದೆಹಲಿ (ಪಿಟಿಐ): ಪ್ರಭಾವಿ ಪ್ರದರ್ಶನ ನೀಡಿದ ಸೈನಾ ನೆಹ್ವಾಲ್ ಅವರು ಸ್ವಿಟ್ಜರ್ಲೆಂಡ್ನಲ್ಲಿ ನಡೆದ ವಿಲ್ಸನ್ ಸ್ವಿಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹೈದರಾಬಾದಿನ ಆಟಗಾರ್ತಿ 21-13, 21-14 ರಲ್ಲಿ ದಕ್ಷಿಣ ಕೊರಿಯಾದ ಜಿ ಹ್ಯುನ್ ಸುಂಗ್ ಅವರನ್ನು ಮಣಿಸಿದರು. ಪ್ರಬಲ ಸ್ಮ್ಯಾಷ್ ಹಾಗೂ ಆಕರ್ಷಕ ಡ್ರಾಪ್ಗಳ ಮೂಲಕ ಮಿಂಚಿದ ಸೈನಾ 43 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಸೈನಾ ಅವರು ವೃತ್ತಿ ಜೀವನದಲ್ಲಿ ಪಡೆದ ಐದನೇ ಸೂಪರ್ ಸೀರಿಸ್ ಪ್ರಶಸ್ತಿ ಇದಾಗಿದೆ. ಮಾತ್ರವಲ್ಲ ಅವರಿಗೆ ಪ್ರಸಕ್ತ ವರ್ಷ ದೊರೆತ ಮೊದಲ ಸೂಪರ್ ಸೀರಿಸ್ ಪ್ರಶಸ್ತಿ ಇದು.

ಎರಡನೇ ಶ್ರೇಯಾಂಕ ಪಡೆದಿದ್ದ ಭಾರತದ ಆಟಗಾರ್ತಿ ಮೊದಲ ಸೆಟ್ನಲ್ಲಿ ಒಂದು ಹಂತದಲ್ಲಿ 6-7 ರಲ್ಲಿ ಹಿನ್ನಡೆ ಅನುಭವಿಸಿದ್ದರು. ಬಳಿಕ ಸತತ ಏಳು ಪಾಯಿಂಟ್ ಕಲೆಹಾಕಿ 13-7 ರಲ್ಲಿ ಮೇಲುಗೈ ಪಡೆದರು. ಅದೇ ಮುನ್ನಡೆಯನ್ನು ಉಳಿಸಿಕೊಂಡು ಸೆಟ್ ಗೆದ್ದರು. ಎರಡನೇ ಸೆಟ್ನ ಆರಂಭದಲ್ಲೇ 7-3 ರಲ್ಲಿ ಮುನ್ನಡೆ ಪಡೆದ ಸೈನಾ ಬಳಿಕ ಹಿಂದಿರುಗಿ ನೋಡಲಿಲ್ಲ. ಒಂದೊಂದೇ ಪಾಯಿಂಟ್ ಕಲೆಹಾಕಿ ಗೆಲುವಿನತ್ತ ಮುನ್ನಡೆದರು.

ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯದ ಯೂನ್ ಜುನ್ ಬೇ ವಿರುದ್ಧ ಪ್ರಯಾಸದ ಗೆಲುವು ಪಡೆದಿದ್ದ ಸೈನಾ ಫೈನಲ್ನಲ್ಲಿ ಯಾವುದೇ ಹಂತದಲ್ಲೂ ಎದುರಾಳಿಗೆ ಮೇಲುಗೈ ಸಾಧಿಸುವ ಅವಕಾಶ ನೀಡಲಿಲ್ಲ.

ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿಯನ್ನು ಕೊರಿಯಾದ ಜುಂಗ್ ಯುನ್ ಮತ್ತು ಮಿನ್ ಜುಂಗ್ ಕಿಮ್ ತಮ್ಮದಾಗಿಸಿಕೊಂಡರು. ಫೈನಲ್ನಲ್ಲಿ ಅವರು 21-12, 21-13 ರಲ್ಲಿ ತಮ್ಮದೇ ದೇಶದ ಕ್ಯುಂಗ್ ಯುನ್ ಜುಂಗ್ ಹಾಗೂ ಹ ನಾ ಕಿಮ್ ಎದುರು ಜಯ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.