ಮಂಗಳವಾರ, ಮೇ 18, 2021
30 °C

ಹಂಪಿ: ಬಿರುಸಿನ ಸ್ವಯಂ ತೆರವು ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪಿ (ಹೊಸಪೇಟೆ): ಐತಿಹಾಸಿಕ ಹಂಪಿ ಕ್ಷೇತ್ರವು ಪರಂಪರೆಯ ಪಟ್ಟಿಗೆ ಸೇರಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ನಿವಾಸಿಗಳ ತೆರವಿಗೆ ಗಡುವು ಸಮೀಪಿಸುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ತಮ್ಮ ದಶಕಗಳ ಸಂಬಂಧವನ್ನು ಕಳಚಿಕೊಂಡು ಸ್ವಯಂ ತೆರವಿಗೆ ಮುಂದಾಗಿದ್ದಾರೆ.ನ್ಯಾಯಾಲಯದ ಆದೇಶದಂತೆ ಕಡ್ಡಾಯವಾಗಿ ಮನೆ, ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಲೇಬೇಕಾಗಿದೆ.  15 ದಿನಗಳ ಗಡುವು ನೀಡಿ ಭಾರತೀಯ ಪುರಾತತ್ವ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಇನ್ನೊಂದೆಡೆ ಕಡ್ಡಿರಾಮಪುರದ ಬಳಿ ಇಲಾಖೆ ನಿಗದಿಪಡಿಸಿ ಹಂಚಿಕೆ ಮಾಡಿಕೊಟ್ಟಿರುವ ನಿವೇಶನದ ಹಕ್ಕು ಪತ್ರ ಪಡೆದುಕೊಳ್ಳಿ ಎಂದು ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರವೂ ಸೂಚನೆ ನೀಡಿದೆ. ಇದೇ 29ರ ಒಳಗಾಗಿ ತಮ್ಮ ಅನುಕೂಲ ಸ್ಥಳಗಳಿಗೆ ತೆರಳಲು ನಿವಾಸಿಗಳು ಮುಂದಾಗಿದ್ದಾರೆ.`ಚಿಕ್ಕ ವಯಸ್ಸಿನಲ್ಲಿಯೇ ಹಂಪಿಗೆ ಬಂದು ಬದುಕು ಕಟ್ಟಿಕೊಂಡಿರುವ ನಮಗೆ ದಿಕ್ಕು ತೋಚದಂತಾಗಿದೆ. ಜೀವನದ ಕೊನೆಯ ದಿನಗಳಲ್ಲಿ ವಿರೂಪಾಕ್ಷೇಶ್ವರ ಆಶೀರ್ವಾದವಿಲ್ಲದ ಸ್ಥಳಕ್ಕೆ ಹೋಗಬೇಕಾಗಿದೆ~ ಎನ್ನುತ್ತಾರೆ ಗ್ರಾಮದ ಹಿರಿಯ ಶಿವಪ್ಪ ಗುತ್ತಲ.ಈ ನಡುವೆ ಒಟ್ಟು 328 ನಿವಾಸಿಗಳು ಹಾಗೂ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಚರಣೆ ಬಿರುಸಿನಿಂದ ಸಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.