ಶನಿವಾರ, ಏಪ್ರಿಲ್ 17, 2021
31 °C

ಹಜಾರೆಗೆ ಟ್ಯಾಗೋರ್ ಸ್ಮಾರಕ ಶಾಂತಿ ಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಐಪಿಎಂ): ಭ್ರಷ್ಟಾಚಾರ ವಿರೋಧಿ ಆಂದೋಲನದ ನಾಯಕ ಅಣ್ಣಾ ಹಜಾರೆ ಅವರಿಗೆ ಇದೀಗ ಇನ್ನೊಂದು ಗೌರವ ಸಂದಿದೆ. ಈ ಸಲದ ‘ಐಐಪಿಎಂ ರವೀಂದ್ರನಾಥ ಟ್ಯಾಗೋರ್ ಸ್ಮಾರಕ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ’ಗೆ ಅವರು ಭಾಜನರಾಗಿದ್ದಾರೆ. ಮ್ಯಾನೇಜ್‌ಮೆಂಟ್ ಗುರು ಅರಿಂದಮ್ ಚೌದರಿ ಅವರ ಐಐಪಿಎಂ ಶಿಕ್ಷಣ ಸಂಸ್ಥೆ ಸಮೂಹ ಸ್ಥಾಪಿಸಿರುವ ಈ ಪ್ರತಿಷ್ಠಿತ ಪ್ರಶಸ್ತಿಯು ರೂ 1 ಕೋಟಿ  ನಗದು, ಪ್ರಮಾಣ ಪತ್ರ ಒಳಗೊಂಡಿದೆ. ಇದರ ಜತೆಗೇ ಗ್ರಾಮೀಣ ಉದ್ಯಮಶೀಲತೆ ಮತ್ತು ವ್ಯವಹಾರ ಕುರಿತ ಹಣಕಾಸು ನೆರವು (ಫೆಲೋಶಿಪ್) ಯೋಜನೆಯನ್ನು ಕೂಡ ಐಐಪಿಎಂ ಘೋಷಿಸಿದೆ.

 

ಇದರಲ್ಲಿ ದೇಶದ ವಿವಿಧೆಡೆಯ 50 ಗ್ರಾಮೀಣ ಯುವಜನರನ್ನು ಆಯ್ಕೆ ಮಾಡಿ, ಅವರಿಗೆ ಉದ್ಯಮಶೀಲತೆ, ನಾಯಕತ್ವ ತರಬೇತಿ, ಮಾಸಿಕ 4000 ರೂಪಾಯಿ ಫೆಲೋಶಿಪ್ ನೀಡಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.