ಸೋಮವಾರ, ಆಗಸ್ಟ್ 10, 2020
24 °C

`ಹತ್ತು ಕೋಟಿ ವೆಚ್ಚದಲ್ಲಿ ಅಟಲ್ ಶಾಲೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಹತ್ತು ಕೋಟಿ ವೆಚ್ಚದಲ್ಲಿ ಅಟಲ್ ಶಾಲೆ'

ರೋಣ: ಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ರೋಣದಲ್ಲಿ 22 ಎಕರೆ ಪ್ರದೇಶದಲ್ಲಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಸುವ್ಯವಸ್ಥಿತವಾಗಿ ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಯನ್ನು ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.ಅವರು ಸೋಮವಾರ ಪಟ್ಟಣದ ಗುಲಗಂಜಿ ಮಠದ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಘ ಬೆಂಗಳೂರ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈಗಾಗಲೇ ವಾಜಪೇಯಿ ವಸತಿ ಶಾಲೆಯ ಭವ್ಯ ಕಟ್ಟಡವನ್ನು ನಿರ್ಮಿಸಲು  ರೋಣ ಮತ್ತು ಅಬ್ಬಿಗೇರಿ ರಸ್ತೆಯಲ್ಲಿ 22 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಖರೀದಿ ಪ್ರಕ್ರಿಯೆ ನಡೆದಿದೆ. ಸದ್ಯದಲ್ಲಿಯೇ ಕಟ್ಟಡ ಕಾಮ ಗಾರಿ ಪ್ರಾರಂಭಿಸಲಾಗುವುದು. ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸ ಲಾಗುವುದು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ಕೊಡಬೇಕು ಎಂಬ ಉದ್ದೇಶದಿಂದ  ಹಲವಾರು ಕಾರ್ಯ ಕ್ರಮಗಳನ್ನು ಜಾರಿಗೆ ತರುತ್ತಿದೆ. ಜವಾಹರ ವಸತಿ ಶಾಲೆ, ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ ವಸತಿ ಶಾಲೆಗಳಂತೆಯೇ ವಾಜಪೇಯಿ ವಸತಿ ಶಾಲೆ ಬಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲಿದೆ. ಇದರ ಸದುಪಯೋಗವನ್ನು ಗ್ರಾಮೀಣ ಬಡ ವಿದ್ಯಾರ್ಥಿಗಳ ಪಡೆದು ಕೊಳ್ಳಬೇಕು ಎಂದರು.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವೀರ ಮಲ್ಲಪ್ಪ ಪೂಜಾರ ಮಾತನಾಡಿ,  ಪ್ರಸಕ್ತ ಸಾಲಿನಲ್ಲಿ 40 ಗಂಡು 40 ಹೆಣ್ಣು ಮಕ್ಕಳು ವಸತಿ ಶಾಲೆಯಲ್ಲಿ ಕಲಿ ಯಲಿದ್ದಾರೆ. ಮುಂಬರುವ ವರ್ಷಗಳಲ್ಲಿ 6ನೇ ತರಗತಿಯಿಂದ ಪಿ.ಯು.ಸಿ ವರೆಗೆ 560 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲಿದ್ದಾರೆ  ಎಂದರು.ಸಾನಿಧ್ಯ ವಹಿಸಿದ್ದ ಗುಲಗಂಜಿ ಮಠದ ಗುರಪಾದ ಸ್ವಾಮೀಜಿ, ಜಿ.ಪಂ ಸದಸ್ಯ ಡಾ.ಆರ್.ಬಿ.ಬಸವರಡ್ಡಿ, ತಾಪಂ ಸದಸ್ಯೆ ಗಾಯತ್ರಿ ನಾಗನೂರ, ಶಫೀಕ ಮೂಗನೂರ, ಮಲ್ಲಯ್ಯ ಮಹಾ ಪುರುಷಮಠ ಮಾತನಾಡಿದರು.ತಾ.ಪಂ ಅಧ್ಯಕ್ಷೆ ಲಲಿತಾ ಪೂಜಾರ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಸದಸ್ಯರಾದ ಅಂದಪ್ಪ ಬಿಚ್ಚೂರ, ರೇಣುಕಾ ಹಟ್ಟಿ ಮನಿ, ಮಾಲಾನಬೀ ಗಡಾದ, ಮುಖಂಡರಾದ ಧಶರಥ ಗಾಣಿಗೇರ, ವೀರಣ್ಣ ಸೊನ್ನದ, ಮುತ್ತಣ್ಣ ಸಂಗಳದ, ವಿ.ಆರ್.ಗುಡಿಸಾಗರ, ಮಂಜುನಾಥ ಹಾಳಕೇರಿ, ಶಿವಪ್ಪ ಕರಲಿಂಗಣ್ಣವರ, ದಾವಲಸಾಬ ಚಿನ್ನೂರ, ತೋಟಪ್ಪ ನವಲಗುಂದ, ಜಯಶ್ರೀ ನವಲಗುಂದ ಸೇರಿದಂತೆ ಮುಂತಾದವರು ಉಪಸ್ಥಿತ ರಿದ್ದರು. ಬಸವರಾಜ ನಿರೂಪಿಸಿದರು. ವೈಶಾಲಿ ಸೊಲ್ಲಾಪೂರ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.