ಭಾನುವಾರ, ಮಾರ್ಚ್ 7, 2021
22 °C
ಮಿನುಗು ಮಿಂಚು

ಹರಪ್ಪ ನಾಗರಿಕತೆಯ ಪಳೆಯುಳಿಕೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪ್ಪ ನಾಗರಿಕತೆಯ ಪಳೆಯುಳಿಕೆಗಳು

ಹಿಂದೂ ಕಣಿವೆ ನಾಗರಿಕತೆ ಎಂದರೇನು?

ಆಧುನಿಕ ಪಾಕಿಸ್ತಾನ ಹಾಗೂ ವಾಯುವ್ಯ ಭಾರತದ ಹಿಂದೂ ನದಿ ಕಣಿವೆಯ ಪ್ರಾಚೀನ ನಾಗರಿಕತೆಯನ್ನು ‘ಹಿಂದೂ ಕಣಿವೆ ನಾಗರಿಕತೆ’ ಎಂದು ಗುರ್ತಿಸಲಾಗುತ್ತದೆ.ಇದನ್ನು ‘ಹರಪ್ಪ ಸಂಸ್ಕೃತಿ’ ಎಂದೂ ಕರೆಯುತ್ತಾರೆ. ಈ ನಾಗರಿಕತೆ ಬೆಳೆದುಬಂದ ಸ್ಥಳಗಳ ಉತ್ಖನನವು 1920ರ ದಶಕದಲ್ಲಿ ನಡೆದಿತ್ತು.

ಹರಪ್ಪ ಸಂಸ್ಕೃತಿ ಇದ್ದ ನಗರಗಳು ಯಾವುವು?

ಹಿಂದೂ ನಾಗರಿಕತೆ ಬೆಳೆದು ಬಂದ 1000ಕ್ಕೂ ಹೆಚ್ಚು ನಗರಗಳನ್ನು ಪತ್ತೆ ಮಾಡಲಾಯಿತು. ಹರಪ್ಪ ಹಾಗೂ ಮೊಹೆಂಜೊದಾರೊ ಅವುಗಳಲ್ಲಿ ಮುಖ್ಯವಾದವು. ಈ ನಗರಗಳು ಪಾಕಿಸ್ತಾನದಲ್ಲಿವೆ.ಭಾರತದಲ್ಲಿ ಹಿಂದೂ ನದಿ ಕಣಿವೆ ನಾಗರಿಕತೆ ಬೆಳೆದ ನಗರಗಳಲ್ಲಿ ಗುಜರಾತ್‌ನ ಧೋಲಾವೀರ, ಲೋಥಲ್‌, ರಾಜಸ್ಥಾನದ ಕಾಲೀಬಂಗನ್‌ ಹಾಗೂ ಹರಿಯಾಣದ ರಾಖೀಗಢಿ ಪ್ರಮುಖವಾದವು.

ಈ ನಾಗರಿಕತೆಯ ವೈಶಿಷ್ಟ್ಯವೇನು?

ನಗರಗಳು ವ್ಯವಸ್ಥಿತ ರೀತಿಯ ಯೋಜನೆ, ವಾಸ್ತುಶಿಲ್ಪದಿಂದ ಗಮನ ಸೆಳೆಯುತ್ತವೆ. ಇಟ್ಟಿಗೆಯಲ್ಲಿ ನಿರ್ಮಿತವಾದ ಸಾಲುಸಾಲು ಮನೆಗಳು, ಹಗೇವುಗಳು, ಕೋಟೆಗಳು, ಸ್ಮಶಾನಗಳು, ಬೃಹತ್‌ ಸ್ನಾನದ ಗೃಹಗಳು ಎಲ್ಲವೂ ಅಲ್ಲಿದ್ದವು.ಉತ್ತಮ ಚರಂಡಿ ವ್ಯವಸ್ಥೆಯೂ ಅಲ್ಲಿತ್ತೆನ್ನುವುದು ವಿಶೇಷ. ಮಡಕೆಗಳನ್ನು ಮಾಡುವ ಹಾಗೂ ಲೋಹದ ಮೂರ್ತಿಗಳನ್ನು ತಯಾರಿಸುವ ಕುಶಲ ಕಲೆಯೂ ಆ ಕಾಲದ ಜನರಿಗೆ ಗೊತ್ತಿತ್ತು ಎನ್ನುವುದು ಉತ್ಖನನದಿಂದ ಸ್ಪಷ್ಟವಾಯಿತು. ಆಗ ವಸ್ತುಗಳನ್ನು ಅಳೆಯುವ ಮಾನದಂಡಗಳನ್ನೂ ಕಂಡುಕೊಂಡಿದ್ದರು.

ಯಾವ್ಯಾವ ಕುಶಲ ವಸ್ತುಗಳು ಪತ್ತೆಯಾದವು?

ಮುದ್ರೆಗಳು, ಬೊಂಬೆಗಳು, ಒಡವೆಗಳು ಹಾಗೂ ಮಡಕೆಗಳ ಪಳೆಯುಳಿಕೆಗಳು ಪತ್ತೆಯಾದವು. ‘ಪ್ರೀಸ್ಟ್‌ ಕಿಂಗ್‌’ (ಪೂಜಾರಿ ದೊರೆ) ಹೆಸರಿನ ಗಡ್ಡಧಾರಿ ವ್ಯಕ್ತಿಯ ಮೂರ್ತಿಯೂ ಸಿಕ್ಕಿತು. ‘ಡಾನ್ಸಿಂಗ್‌ ಗರ್ಲ್‌’ (ನೃತ್ಯಗಾತಿ) ಹೆಸರಿನ ಮೂರ್ತಿಯೂ ದೊರೆಯಿತು.

ಆ ನಾಗರಿಕತೆ ಪತನವಾದದ್ದು ಯಾಕೆ?

ವಿಜ್ಞಾನಿಗಳ ಪ್ರಕಾರ ಕ್ರಿ.ಪೂ. 1900ರ ಹೊತ್ತಿಗೆ ನಾಗರಿಕತೆಯ ಅವನತಿ ಪ್ರಾರಂಭವಾಯಿತು. ನೆರೆ, ಬರದಂತಹ ಪ್ರಕೃತಿ ವಿಕೋಪಗಳಿಂದ ಅಪಾರ ಸಂಖ್ಯೆಯಲ್ಲಿ ಸಾವು ಸಂಭವಿಸಿತು.ಮುಂಗಾರು ಕ್ಷೀಣಿಸಿದ್ದರಿಂದ ನದಿಗಳಲ್ಲಿ ನೀರು ಇಲ್ಲದಂತಾಗಿ ಜನರು ಈ ನಗರಗಳನ್ನು ತೊರೆದರು ಎಂದು ಇತ್ತೀಚೆಗೆ ಪತ್ತೆಯಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.