ಸೋಮವಾರ, ಜೂನ್ 14, 2021
20 °C

`ಹರ್ಷೋತ್ಸವ' ಪ್ರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಹರ್ಷ' ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯು ಪ್ರತಿವರ್ಷ `ಹರ್ಷೋತ್ಸವ' ಆಚರಿಸುತ್ತಾ ಬಂದಿದ್ದು, ಅದು `ಶಾಪಿಂಗ್ ಹಬ್ಬ'ವಾಗಿ ರೂಪುಗೊಂಡಿದೆ. ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಿರುವ `ಹರ್ಷೋತ್ಸವ' ಏಪ್ರಿಲ್ 28ರವರೆಗೆ ನಡೆಯಲಿದೆ.ಇಲ್ಲಿ ಪ್ರಸಿದ್ಧ ಬ್ರ್ಯಾಂಡ್‌ಗಳಾದ ಗೋದ್ರೇಜ್, ಒನಿಡಾ, ವೋಲ್ಟಾಸ್, ಐಎಫ್‌ಬಿ, ವರ್ಲ್‌ಪೂಲ್, ಸೋನಿ, ಪ್ಯಾನಸೋನಿಕ್, ತೋಶಿಬಾ, ಎಲ್.ಜಿ, ಸ್ಯಾಮ್‌ಸಂಗ್, ಬಾಶ್, ವಿಡಿಯೋಕಾನ್ ಮತ್ತು ಹೈಯರ್ ಮೊದಲಾದ ಕಂಪೆನಿಗಳ ಅತ್ಯಾಧುನಿಕ ಗೃಹೋಪಕರಣಗಳು ವಿಶಾಲ ಶ್ರೇಣಿಯಲ್ಲಿ ಲಭ್ಯವಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಲಾಭದಾಯಕ ಕೊಡುಗೆಗಳೊಂದಿಗೆ ದೊರೆಯಲಿರುವುದು ವಿಶೇಷ.ಅಂತರರಾಷ್ಟ್ರೀಯ ಖ್ಯಾತಿಯ ಬ್ರ್ಯಾಂಡ್‌ನ ಉತ್ಪನ್ನಗಳನ್ನು ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ನೀಡುವುದು ಹರ್ಷದ ವಿಶೇಷತೆಯಾದರೆ, ಖರೀದಿಸಿದ ಉಪಕರಣಗಳನ್ನು ಗ್ರಾಹಕರ ಮನೆಗೆ ತಲುಪಿಸುವುದು ಮತ್ತೊಂದು ವಿಶೇಷ. ಹರ್ಷೋತ್ಸವದ ಆಕರ್ಷಕ ವಿನಿಮಯ ಕೊಡುಗೆಗಳು, ವಿಶಿಷ್ಟ ಕಾಂಬೋ ಕೊಡುಗೆಗಳು, ವಿಶೇಷ ರಿಯಾಯಿತಿಗಳು, ಉಚಿತ ಉಡುಗೊರೆಗಳು ಗ್ರಾಹಕರಿಗೆ ಹೆಚ್ಚಿನ ಸಂತಸವನ್ನು ನೀಡಲಿದೆ.ಅಲ್ಲದೇ, ಈ ಬಾರಿ ಲಕ್ಕಿ ಡ್ರಾದಲ್ಲಿ 10 ಮೈಕ್ರೋವೇವ್ ಒವನ್‌ಗಳು, 10 ಪ್ಯಾನಸೋನಿಕ್ ಅಟೋಮ್ಯೋಟಿಕ್ ಎಲೆಕ್ಟ್ರಿಕ್ ಕುಕ್ಕರ್ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಗ್ರಾಹಕರ ಶಾಪಿಂಗ್‌ಗೆ ಹೊಸ ರಂಗೇರಿಸಲಿದೆ.`ವಿಶ್ವ ವಿಖ್ಯಾತ ಬ್ರ್ಯಾಂಡ್‌ಗಳ ಉತ್ಕೃಷ್ಟ ವಸ್ತು ವೈವಿಧ್ಯಗಳ ವಿಶಾಲ ಶ್ರೇಣಿಯೇ ಹರ್ಷೋತ್ಸವದಲ್ಲಿದ್ದು, ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ಆಯ್ಕೆ ಮಾಡುವ ಅವಕಾಶವನ್ನು ಕಲ್ಪಿಸಿವೆ' ಎನ್ನುತ್ತಾರೆ ಹರ್ಷದ ಮಾರ್ಕೆಟಿಂಗ್ ಡೈರೆಕ್ಟರ್ ಹರೀಶ್ ಕುಮಾರ್. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.