ರಾಜ್ಯ ಸರ್ಕಾರದ ಭ್ರಷ್ಟತೆಯ ಮುಖಕ್ಕೆ ಈಗ ಮಹಾಲೇಖಪಾಲರೂ (ಸಿಎಜಿ) ಕನ್ನಡಿ ಹಿಡಿದಿದ್ದಾರೆ. ರಾಜ್ಯ ಗೃಹಮಂಡಳಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಜಲಸಂಪನ್ಮೂಲ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಸ್ವಂತ ಇಲ್ಲವೇ ಗುತ್ತಿಗೆದಾರರಿಗೆ ಲಾಭ ಉಂಟು ಮಾಡುವ ಉದ್ದೇಶದಿಂದಲೇ ಅಕ್ರಮ ಮತ್ತು ಅವ್ಯವಹಾರ ನಡೆಸಿವೆ ಎಂಬ ಗಂಭೀರ ಆರೋಪಗಳು ವಿಧಾನಸಭೆಯಲ್ಲಿ ಮಂಡಿಸಲಾದ 2010ರ ಸಿಎಜಿ ವರದಿಯಲ್ಲಿವೆ.

ಇವುಗಳಲ್ಲಿ ಕೆಲವು ಆರೋಪಗಳು ಹಳೆಯವು. ಈ ಆರೋಪಗಳನ್ನು ವಿರೋಧಪಕ್ಷಗಳು ಮಾಡಿದಾಗ ಅದನ್ನು ‘ರಾಜಕೀಯ ಪ್ರೇರಿತ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ತಳ್ಳಿಹಾಕಿದ್ದರು. ಈಗ ರಾಜ್ಯದ ಬೊಕ್ಕಸಕ್ಕೆ ಹಲವಾರು ಕೋಟಿ ರೂಪಾಯಿ ನಷ್ಟವನ್ನುಂಟು ಮಾಡಿದ ಹಣಕಾಸಿನ ದುರ್ವ್ಯವಹಾರಗಳನ್ನು ಸಾಂವಿಧಾನಿಕ ಸಂಸ್ಥೆಯಾದ ಸಿಇಜಿಯೇ ಬಯಲು ಮಾಡಿದೆ.

ಇದು ಕೂಡಾ ಹಿಂದಿನ ಸಿಇಜಿ ವರದಿಗಳಂತೆ ಸರ್ಕಾರಿ ಕಪಾಟು ಸೇರಿ ದೂಳು ಹಿಡಿದುಹೋಗುವ ಎಲ್ಲ ಸಾಧ್ಯತೆಗಳೂ ಇವೆ. ಯಾಕೆಂದರೆ ವರದಿಯನ್ನು ಸಲ್ಲಿಸಿದ ನಂತರ ಅದರ ಕೆಲಸ ಮುಗಿದುಹೋಗುತ್ತದೆ. ಈ ವರದಿಗಳನ್ನು ವಿರೋಧಪಕ್ಷಗಳ ಸದಸ್ಯರೇ ಅಧ್ಯಕ್ಷರಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಪರಿಶೀಲನೆ ಮಾಡಿ ಇನ್ನೊಂದು ವರದಿಯನ್ನು ನೀಡುತ್ತದೆ.

ಈ ವರದಿಗಳನ್ನು ಎತ್ತಿಕೊಂಡು ವಿರೋಧ ಪಕ್ಷಗಳು ಒಂದಷ್ಟು ದಿನ ಗದ್ದಲ ಎಬ್ಬಿಸುತ್ತವೆ. ಇದರ ಹೊರತಾಗಿ ಸಿಎಜಿ-ಪಿಎಸಿ ವರದಿಗಳು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತಹ ತಾರ್ಕಿಕ ಅಂತ್ಯ ಕಂಡಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.

ರಾಜ್ಯದಲ್ಲಿ ಮಾತ್ರವಲ್ಲ, ಕೇಂದ್ರದಲ್ಲಿಯೂ ಸಿಎಜಿಯದು ಇದೇ ಸ್ಥಿತಿ. ವರ್ಷಕ್ಕೆ ಸರಾಸರಿ ನೂರು ವರದಿಗಳನ್ನು ಸಿಎಜಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತದೆ. ಅವುಗಳಲ್ಲಿ ಹೆಚ್ಚಿನವು ಯಾರ ಗಮನಕ್ಕೂ ಬರದಂತೆ ಕಡತಗಳಲ್ಲಿ ಕಳೆದುಹೋಗುವುದೇ ಹೆಚ್ಚು.

ಇದಕ್ಕೆ ಇತ್ತೀಚಿನ ದಿನಗಳ ಏಕೈಕ ಅಪವಾದ 2ಜಿ ತರಂಗಾಂತರ ಹಗರಣ. ಸಿಎಜಿ ಬಯಲುಗೊಳಿಸಿದ ಈ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡ ಕಾರಣದಿಂದಾಗಿ ಕೇಂದ್ರ ಸಚಿವರೊಬ್ಬರು ವಿಚಾರಣೆಯನ್ನು ಎದುರಿಸುವಂತಾಗಿದೆ. ಸಂವಿಧಾನಬದ್ಧವಾಗಿ ರಚನೆಗೊಂಡರೂ ವಾಸ್ತವದಲ್ಲಿ ಸಿಎಜಿ ಹಲ್ಲಿಲ್ಲದ ಸಂಸ್ಥೆಯಾಗಿರುವುದೇ ಇದರ ನಿರಂತರ ವೈಫಲ್ಯಕ್ಕೆ ಕಾರಣ.

ಇದರ ಬಲವರ್ಧನೆಗೆ ಸಲಹೆ ನೀಡಲು ಹಿಂದೆ ರಚಿಸಲಾಗಿದ್ದ ಶಕಧರ್ ಸಮಿತಿ ಬಹಳ ಮುಖ್ಯವಾದ ಒಂದು ಶಿಫಾರಸು ಮಾಡಿತ್ತು. ಸಿಎಜಿ ವರದಿ ಸಲ್ಲಿಸಿದ ಮೂರು ತಿಂಗಳೊಳಗೆ ಸಂಬಂಧಿತ ಸರ್ಕಾರಿ ಇಲಾಖೆಗಳು ತಮ್ಮ ವಿವರಣೆಯ ಟಿಪ್ಪಣಿ ಮತ್ತು ಕೈಗೊಂಡ ಕ್ರಮಗಳ ವಿವರಗಳನ್ನೊಳೊಂಡ ವರದಿಯನ್ನು ಸಲ್ಲಿಸಬೇಕು ಎನ್ನುವುದು ಆ ಶಿಫಾರಸು.

ಈ ಶಿಫಾರಸು ಇದ್ದ ಶಕಧರ್ ಸಮಿತಿ ವರದಿಯನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಪ್ಪಿಕೊಂಡಿದ್ದರೂ ಅದನ್ನು ಈ ವರೆಗೆ ಅನುಷ್ಠಾನಕ್ಕೆ ತಂದಿಲ್ಲ. ಅದೇ ರೀತಿ ಸಿಎಜಿ ವರದಿಯಲ್ಲಿನ ಆರೋಪಗಳನ್ನು ಪ್ರಥಮ ಮಾಹಿತಿ ವರದಿಯಾಗಿ ಪರಿವರ್ತಿಸಿ ಸಿಬಿಐ ಇಲ್ಲವೇ ಭ್ರಷ್ಟಾಚಾರ ವಿರೋಧಿ ಇಲಾಖೆಯಿಂದ (ಎಸಿಬಿ) ತನಿಖೆಗೊಳಪಡಿಸಬೇಕು ಎನ್ನುವ ಸಲಹೆಯೂ ಚರ್ಚೆಯಲ್ಲಿದೆ. ಇಂತಹ ಕ್ರಮಗಳಿಂದ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಬೇಕೆಂಬ ಸಿಎಜಿ ಸ್ಥಾಪನೆಯ ಮೂಲ ಉದ್ದೇಶ ಈಡೇರಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.