ಮಂಗಳವಾರ, ಜೂನ್ 15, 2021
27 °C

ಹಳ್ಳಿಮನೆಯಲ್ಲಿ ಯುಗಾದಿ ಊಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿಮನೆಯಲ್ಲಿ ಯುಗಾದಿ ಊಟ

ಮಲ್ಲೇಶ್ವರದಲ್ಲಿರುವ ಹಳ್ಳಿಮನೆಯಲ್ಲಿ ಗುರುವಾರ ಮತ್ತು ಶುಕ್ರವಾರ ಯುಗಾದಿಯ ಸಂಭ್ರಮ ಗರಿಗೆದರಲಿದೆ. ಗ್ರಾಹಕರಿಗೆ ವಿಶೇಷ ಹಬ್ಬದೂಟವನ್ನು ಉಣಬಡಿಸಲು ಹಳ್ಳಿಮನೆ ಸಜ್ಜುಗೊಂಡಿದೆ. ಬಗೆಬಗೆಯ ಭಕ್ಷ್ಯ, ಸಿಹಿ ತಿಂಡಿ, ಕಜ್ಜಾಯಗಳು ಬಾಯಲ್ಲಿ ನೀರೂರಿಸುತ್ತವೆ.ದ್ರಾಕ್ಷಿ ಗೊಜ್ಜು, ಗೇರು ಬೀಜದ ಪಾಯಸ, ಮಂಗಳೂರು ಸೌತೆ ಹುಳಿ, ಮಲೆನಾಡು ತಿಳಿಸಾರು, ಶಾವಿಗೆ ಪುಳಿಯೋಗರೆ, ಉಡುಪಿ ಸಾರು, ಅನಾನಸ್, ಬಾಸುಮತಿ ಅಕ್ಕಿಯ ಕೇಸರಿಬಾತ್, ಶುಂಠಿ ಪೇಡ ಇದೇ ಮೊದಲಾದ ಭಕ್ಷ್ಯಗಳು ಗ್ರಾಹಕರಿಗೆ ಹಬ್ಬದೂಟದಲ್ಲಿ ಅನಿಯಮಿತ ದೊರಕುತ್ತವೆ.

ಹಬ್ಬದೂಟದ (ಅನಿಯಮಿತ ಊಟ) ದರ ಹಿರಿಯರಿಗೆ 225 ರೂಪಾಯಿ, ಮಕ್ಕಳಿಗೆ 125 ರೂ. ಮಧ್ಯಾಹ್ನ 12.30ರಿಂದ 3.30ರವರೆಗೆ ಸಂಜೆ 7.00 ರಿಂದ 10.30ರವರೆಗೆ.ಹಬ್ಬದೂಟವನ್ನು ಪಾರ್ಸೆಲ್ ಮೂಲಕವು ಪಡೆದುಕೊಳ್ಳಬಹುದು. ವಿವರಗಳಿಗಾಗಿ ದೂರವಾಣಿ ಸಂಖ್ಯೆ 080 4113 9523/99457 61283 ಸಂಪರ್ಕಿಸಬಹುದು ಎನ್ನುತ್ತಾರೆ ಹಳ್ಳಿಮನೆ ವ್ಯವಸ್ಥಾಪಕ ನಿರ್ದೇಶಕ ನೀಲಾವರ ಸಂಜೀವ್‌ರಾವ್.ವೈಟ್ ಫೀಲ್ಡ್‌ನಲ್ಲಿ ಬೇವು ಬೆಲ್ಲದ ಸವಿ

ವೈಟ್‌ಫೀಲ್ಡ್‌ನಲ್ಲಿರುವ ಎಂಜಿಎಂ ಮಾರ್ಕ್ ಸಮೂಹದ ಹೋಟೆಲ್‌ನಲ್ಲಿಯೂ ಹಬ್ಬದೂಟವನ್ನು ಗುರುವಾರ ಆಯೋಜಿಸಲಾಗಿದೆ. ಮಾವು ಬೇವಿನ ತಳಿರು ತೋರಣ, ಬಾಳೆ ದಿಂಡಿನ ಸ್ವಾಗತ ಕಮಾನು ಊಟಕ್ಕೆ ಕರೆಯುತ್ತಿವೆ ಎಂದು ಹೋಟೆಲ್‌ನ ಅಮಿತ್ ಬಕ್ಷಿ ಆಹ್ವಾನ ನೀಡುತ್ತಿದ್ದಾರೆ.

ಆಂಧ್ರ ಹಾಗೂ ಕರ್ನಾಟಕದ ಮಿಶ್ರ ಸಂಸ್ಕೃತಿಯ ಅಹಾರೋತ್ಸವ ಇದು.

 

ಕರ್ನಾಟಕದ ಒಬ್ಬಟ್ಟು, ಬಿಸಿಬೇಳೆಭಾತ್‌ನೊಂದಿಗೆ ಆಂಧ್ರದ ನೀಮ್‌ಪಚಡಿ, ಆರ್ತಿಕಾಯಂಪವೆಡು, ಟೊಮೊಟೊ ಪಪ್ಪು, ಮಿರಿಯಾಲ್ ಸಾರು, ಗುತ್ತಿ ಬೀರಕಾಯ ಮುಂತಾದ ಖಾದ್ಯಗಳನ್ನು ಮಧ್ಯಾಹ್ನದ ಬಫೆಗೆ ಸಿದ್ಧಪಡಿಸಲಾಗುತ್ತದೆ. ಬೆಲೆ 425 ರೂಪಾಯಿ. ಹೆಚ್ಚುವರಿ ತೆರಿಗೆಯೂ ಅನ್ವಯಿಸುತ್ತದೆ.ಸೌತ್‌ಇಂಡೀಸ್‌ನಲ್ಲಿ ಯುಗಾದಿ

ಯುಗಾದಿ ಹಬ್ಬಕ್ಕಾಗಿ ಸೌತ್‌ಇಂಡೀಸ್ ಶುಕ್ರವಾರ ಸ್ಪೆಶಲ್ ಬಫೆ ಲಂಚ್ ಅಣಿಗೊಳಿಸಿದೆ. ಹಬ್ಬಕ್ಕಾಗಿ ಬಾಣಸಿಗ ವೆಂಕಟೇಶ್ ಭಟ್ ವಿಶೇಷ ಮೆನು ಸಿದ್ಧಪಡಿಸಿದ್ದಾರೆ. ಇದೇ ಸೌತ್‌ಇಂಡೀಸ್‌ಗೆ ಭೇಟಿ ನೀಡಲು ವಿಶೇಷ ಕಾರಣ. ಹಬ್ಬಕ್ಕೆಂದು ರೆಸ್ಟೊರಾವನ್ನು ವಿಶೇಷವಾಗಿ ಸಿಂಗರಿಸಲಾಗಿದೆ.ಬೇವು-ಬೆಲ್ಲ, ಬದನೆಕಾಯಿ ಕೊದ್ದೇಲ್, ಕಂಚೋಲ್ ರಸ, ರಾಗಿ ರೊಟ್ಟಿ ಜತೆಗೆ ಹೋಳಿಗೆ ನಾಲಿಗೆ ರುಚಿ ತಣಿಸಲಿವೆ. ಊಟದ ಬೆಲೆ ರೂ.349. ಜತೆಗೆ ತೆರಿಗೆ ಕೂಡ ಅನ್ವಯಿಸುತ್ತದೆ. ಸ್ಥಳ: ಸೌತ್‌ಇಂಡೀಸ್, 840/ಎ, 100 ಅಡಿ ರಸ್ತೆ, ಇಂದಿರಾನಗರ, ಮಾಹಿತಿಗೆ: 4163 6363. 

ನಂ.147, 4ನೇ ಮಹಡಿ, ಶೆವ್ರಾನ್ ಹೋಟೆಲ್, ಪೊಲೀಸ್ ಕಮಿಷನರ್ ಕಚೇರಿ ಎದುರು, ಇನ್‌ಫೆಂಟ್ರಿ ರಸ್ತೆ. ಮಾಹಿತಿಗೆ: 4163 6362. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.