ದಾವಣಗೆರೆ: ಅಲ್ಲಿ ಸದಾ ಗಡಿಬಿಡಿಯ ವಾತಾವರಣ. ಪ್ರತಿನಿತ್ಯ ಭತ್ತದ ಚೀಲ ಹೊತ್ತು ತರುವ ನೂರಾರು ಲಾರಿ, ಟ್ರ್ಯಾಕ್ಟರ್ಗಳು. ಕಾರ್ಮಿಕರಿಗೆ ಭತ್ತದ ಚೀಲ ಇಳಿಸಿ, ತೂಕದ ಯಂತ್ರದ ಮೇಲಿರಿಸುವ ಧಾವಂತ. ‘ಈ ಭತ್ತದ ಲೋಡ್ ತುಂಬಾ ಚೆನ್ನಾಗಿದೆ, ಈ ಭತ್ತ ಇನ್ನೂ ಸ್ವಲ್ಪ ಒಣಗಬೇಕಿತ್ತು’ ಎಂಬ ಆರೋಪ– ಹೊಗಳಿಕೆಯ ನುಡಿಗಳು, ಅಲ್ಲಿ ನೋಡೋ ಹಲ್ಲಿಂಗ್ ಸರಿಯಾಗಿ ನಡೆಯುತ್ತಿಲ್ಲ ಎಂದು ಗದರುವ ಮಾಲೀಕ... ಈಗ ಅಲ್ಲಿ ಇದ್ಯಾವುದೂ ಇಲ್ಲ!

ದಾವಣಗೆರೆಯ ಕೈಗಾರಿಕಾ ಪ್ರದೇಶದ ಅಕ್ಕಿ ಗಿರಣಿಗಳಲ್ಲಿ ಈಗ ನೀರವ ಮೌನ. ಯಂತ್ರಗಳ ಶಬ್ದವಿಲ್ಲ; ಕಾರ್ಮಿಕರ ಗಡಿಬಿಡಿ ಇಲ್ಲ. – ಅದಕ್ಕೆ ಕಾರಣ ಸರ್ಕಾರದ ಲೆವಿ ನೀತಿ ವಿರೋಧಿಸಿ ಅಕ್ಕಿ ಗಿರಣಿ ಬಂದ್ ಆಗಿರುವುದು. ಬಂದ್ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಗಿರಣಿ ಕೆಲಸವನ್ನೇ ನಂಬಿದ್ದ ಕಾರ್ಮಿಕರು ಹಳ್ಳಿಯ ಹಾದಿ ಹಿಡಿದಿದ್ದಾರೆ. ಹೊರ ರಾಜ್ಯದಿಂದ ಬಂದ ಕಾರ್ಮಿಕರು ರೈಲನ್ನೇರಿ ತಮ್ಮ ಊರಿನತ್ತ ಹೊರಟಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಇರುವ ಗಿರಣಿ ಕಾರ್ಮಿಕರ ಮನೆಗಳಿಗೆ ಬೀಗ ಹಾಕಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ 124 ಅಕ್ಕಿ ಗಿರಣಿಗಳಿವೆ. ನಗರದ ಕೈಗಾರಿಕಾ ಪ್ರದೇಶದಲ್ಲಿಯೇ 50ಕ್ಕೂ ಹೆಚ್ಚು ಗಿರಣಿಗಳಿದ್ದು, ಪ್ರತಿ ಗಿರಣಿಯಲ್ಲೂ 30ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಳೆದೆರಡು ದಿನಗಳಿಂದ ದುಡಿಯುವ ಕೈಗಳಿಗೆ ಕೆಲಸ ಇಲ್ಲದಾಗಿದೆ. ಚಾಲಕರು, ಕ್ಲೀನರ್ಸ್ ರಸ್ತೆಬದಿಯಲ್ಲಿ ಸಾಲಾಗಿ ಲಾರಿ ನಿಲ್ಲಿಸಿದ್ದ ದೃಶ್ಯ ಕೈಗಾರಿಕಾ ಪ್ರದೇಶದಲ್ಲಿ ಕಂಡುಬಂತು.

‘ಹಮಾಲಿಗಳು, ಕಸ ಗುಡಿಸುವ ಸಿಬ್ಬಂದಿ ಅತಂತ್ರರಾಗಿದ್ದಾರೆ. ರಾಜ್ಯದ 1,865 ಗಿರಣಿಗಳಲ್ಲಿ 35 ಸಾವಿರ ಮಂದಿ ಗಿರಣಿಯ ಉದ್ಯೋಗ ನಂಬಿ ಬದುಕು ಸಾಗಿಸುತ್ತಿದ್ದಾರೆ. ದಾವಣಗೆರೆಯಲ್ಲಿ 5 ಸಾವಿರ ಕಾರ್ಮಿಕರಿದ್ದಾರೆ. ಮಿಲ್ಗಳು ಆಧುನೀಕರಣಗೊಂಡ ಬಳಿಕ ನಿತ್ಯವೂ ನೂರಾರು ಮಂದಿಗೆ ಕೆಲಸ ದೊರೆಯುತ್ತಿತ್ತು’ ಎಂದು ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಖಜಾಂಚಿ ಕೋಗುಂಡಿ ಬಕ್ಕಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ 5 ವರ್ಷಗಳಿಂದ ವೀರ್ಹನುಮಾನ್ ರೈಸ್ಮಿಲ್ನಲ್ಲಿ ಕೆಲಸ ಮಾಡುತ್ತಿರುವೆ. ನಿತ್ಯ ₨ 250ರಿಂದ ₨ 300 ಸಂಪಾದನೆ ಆಗುತ್ತಿತ್ತು. ಅದೇ ಹಣದಿಂದ ಅಕ್ಕಿ, ಬೇಳೆ, ಹಾಲು ಖರೀದಿ ಮಾಡಬೇಕಾಗಿತ್ತು. ಸರ್ಕಾರ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಬಾರದು. ಅವರ ಬದುಕು ಕಸಿದುಕೊಳ್ಳಬಾರದು. ಎಲ್ಲ ರೀತಿಯಲ್ಲೂ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗಿತ್ತು.

ಮಂಗಳೂರು, ಉಡುಪಿ, ಕುಂದಾಪುರ, ಹರಪನಹಳ್ಳಿ, ಬಳ್ಳಾರಿ, ಚಿತ್ರದುರ್ಗ, ಬಿಹಾರದಿಂದ ಬಂದು ಇಲ್ಲಿನ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಗಿರಣಿ ಕಾರ್ಮಿಕ ಮಾರುತಿ ನಾಯ್ಕ ನೋವು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.