ಸುತ್ತಲೂ ಬತ್ತದ ಗದ್ದೆ, ಅಡಿಕೆ, ತೆಂಗಿನ ತೋಟಗಳ ಹಸಿರಿನಿಂದ ಸುತ್ತುವರಿದ ಚನ್ನಗಿರಿ ತಾಲ್ಲೂಕಿನ ವಿಶಿಷ್ಟ ಗ್ರಾಮ ತ್ಯಾವಣಿಗೆ. ಭದ್ರಾನಾಲೆ ಹಾಗೂ ಸೂಳೆಕೆರೆ ನೀರಿನ ಸೌಲಭ್ಯದಿಂದಾಗಿ ಗ್ರಾಮದ ಜಮೀನುಗಳು ಸಮೃದ್ಧ ಫಸಲು ನೀಡುವ ಮೂಲಕ ಇಲ್ಲಿನ ರೈತರ ಬದುಕು ಹಸನುಗೊಳಿಸಿವೆ.

ಒಂದು ಪಟ್ಟಣ ಹೊಂದಿರುವ ಬಹುತೇಕ ಸೌಲಭ್ಯ ಹೊಂದಿರುವ ಬಸವಾಪಟ್ಟಣ-2 ಹೋಬಳಿಯ ಸ್ಥಾನ ಪಡೆದಿರುವ ಈ ಗ್ರಾಮ 2010-11ನೇ ಸಾಲಿನ `ನಿರ್ಮಲ ಗ್ರಾಮ~ ಪುರಸ್ಕಾರಕ್ಕೆ ಪಾತ್ರವಾಗಿದೆ. 2009ರಿಂದ ಸುವರ್ಣ ಗ್ರಾಮೋದಯ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ್ಙ 1.11 ಕೋಟಿ ವೆಚ್ಚದಲ್ಲಿ ರಸ್ತೆ, ಬಾಕ್ಸ್ ಚರಂಡಿ, ಸಮುದಾಯ ಭವನ ಮತ್ತಿತರ ಮೂಲಸೌಕರ್ಯ ಕಲ್ಪಿಸಲಾಗಿದೆ. ಪ್ರತಿ ಮನೆಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಅಡಿ ್ಙ 80-90 ಲಕ್ಷದ ಹಲವು ಕಾಮಗಾರಿ ಕೈಗೊಳ್ಳಲಾಗಿದೆ.

ಸುಮಾರು 13 ಸಾವಿರ ಜನಸಂಖ್ಯೆ
, 38 ಸ್ತ್ರೀಶಕ್ತಿ ಸಂಘಗಳನ್ನು ಹೊಂದಿರುವ ಸುತ್ತಲ 20-25 ಗ್ರಾಮಗಳ ಪ್ರಮುಖ ವಾಣಿಜ್ಯ-ವ್ಯಾಪಾರ ಕೇಂದ್ರವಾಗಿರುವ ತ್ಯಾವಣಿಗೆ ಜಿಲ್ಲಾ ಕೇಂದ್ರ ದಾವಣಗೆರೆಯಿಂದ 26 ಹಾಗೂ ತಾಲ್ಲೂಕು ಕೇಂದ್ರ ಚನ್ನಗಿರಿಯಿಂದ 34 ಕಿ.ಮೀ. ದೂರದಲ್ಲಿದೆ. ಪ್ರಾಥಮಿಕ ಆರೋಗ್ಯ, ನಾಡ ಕಚೇರಿ, ಪೊಲೀಸ್ ಉಪ ಠಾಣೆ, ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು. ಎರಡು ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಉರ್ದು ಶಾಲೆ, 5 ಅಂಗನವಾಡಿ ಕೇಂದ್ರಗಳು, ಪಶು ಆಸ್ಪತ್ರೆ, ಕೃಷಿ ಫಾರಂ, ಬಾಲಕರ ವಿದ್ಯಾರ್ಥಿನಿಲಯ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್, ನೀರಾವರಿ ಇಲಾಖೆ ಎಂಜಿನಿಯರ್ ಕಚೇರಿ, ಬೆಸ್ಕಾಂ ಕಚೇರಿ ಇಲ್ಲಿವೆ.

ಪೆಟ್ರೋಲ್ ಬಂಕ್, ವಿವಿಧ ಕಂಪೆನಿಗಳ ಮೊಬೈಲ್ ಟವರ್, ಆರೋಗ್ಯ ಕವಚ-108 ವಾಹನ ಸೌಲಭ್ಯವೂ ಇಲ್ಲಿನ ಜನರಿಗೆ ದೊರೆಯುತ್ತಿದೆ.

ಪರಿಶಿಷ್ಟ ವರ್ಗ, ಲಿಂಗಾಯತ ಹಾಗೂ ಕುರುಬ ಸಮಾಜದ ಜನರು ಬಹುಸಂಖ್ಯಾತರಾಗಿದ್ದು, ಮುಸ್ಲಿಮರೂ ಸೇರಿದಂತೆ ಹತ್ತು ಹಲವು ಜಾತಿ-ಜನಾಂಗದ ಜನರು ಸೌಹಾರ್ದ ಬದುಕು ಸಾಗಿಸುತ್ತಿದ್ದಾರೆ. ವೀರಭದ್ರೇಶ್ವರ ಹಾಗೂ ಆಂಜನೇಯ ಗ್ರಾಮದ ಪ್ರಮುಖ ದೇವರು. ಪ್ರತಿ ವರ್ಷ ಯುಗಾದಿಯ ದಿನ ಇಲ್ಲಿ ಆಂಜನೇಯ ಸ್ವಾಮಿಯ ಮುಳ್ಳೋತ್ಸವ, ವೀರಭದ್ರಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಬೆಟ್ಟದ ಮಲ್ಲೇಶ್ವರ, ಕಾಳಮ್ಮ, ದುರ್ಗಮ್ಮ, ಮೈಲಾರಲಿಂಗೇಶ್ವರ ಮತ್ತಿತರ ದೇವಾಲಯಗಳೂ ಇಲ್ಲಿವೆ.

17 ಸದಸ್ಯ ಬಲದ ಗ್ರಾಮ ಪಂಚಾಯ್ತಿಗೆ ತ್ಯಾವಣಿಗೆ ತಾಂಡಾ, ಮಿಯಾಪುರ ಸೇರಿವೆ. ರಾಜ್ಯ ಪ್ರಶಸ್ತಿ ಪುಸರ್ಕೃತ ನಿವೃತ್ತ ಶಿಕ್ಷಕ ಮಲ್ಲೇಶಪ್ಪ, ಸ್ವಾತಂತ್ರ್ಯ ಹೋರಾಟಗಾರ ಜಯದೇವಪ್ಪ, ಹಾಲಪ್ಪ, ರೈತ ಮುಖಂಡ ಟಿ.ಎಸ್. ಜಯದೇವ್, ಜಿ.ಪಂ. ಮಾಜಿ ಸದಸ್ಯ ಗೋವಿಂದಸ್ವಾಮಿ, ಆದರ್ಶ ಶಿಕ್ಷಕ ಹೊನ್ನಪ್ಪ, ಕವಯತ್ರಿ ಸುಕನ್ಯಾ ಇದೇ ಗ್ರಾಮದವರು.

ಇಷ್ಟೆಲ್ಲ ಇದ್ದರೂ ಗ್ರಾಮದಲ್ಲಿ ಇಲ್ಲಗಳ ಪಟ್ಟಿಯೂ ಸಾಕಷ್ಟಿದೆ. ನಾಡಕಚೇರಿ, ಪೊಲೀಸ್ ಉಪ ಠಾಣೆ, ಪಶು ಆಸ್ಪತ್ರೆಗಳಿಗೆ ಸ್ವಂತ ಕಟ್ಟಡವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ಕೃಷಿ ಫಾರಂ ಸಾಕಷ್ಟು ಜಮೀನು ಹೊಂದಿದ್ದರೂ ಸದುಪಯೋಗವಾಗುತ್ತಿಲ್ಲ. ವಿವಿಧ ಯೋಜನೆಗಳಲ್ಲಿ ಸಾಕಷ್ಟು ಕಾಮಗಾರಿ ಕೈಗೊಳ್ಳಲಾಗಿದ್ದರೂ ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಕಾಣಿಸುತ್ತದೆ. ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಗ್ರಾಮದ ಕೆಲವರು ಇನ್ನೂ ಗುಡಿಸಲನ್ನೇ ಆಶ್ರಯಿಸಿದ್ದಾರೆ.

ಗ್ರಾಮದ ಇತಿಹಾಸ
ಕ್ರಿ.ಶ. 992ರಲ್ಲಿ ಕಲ್ಯಾಣಿ ಚಾಲುಕ್ಯರ ದೊರೆ ತೈಲಪ ಬರೆಸಿದ ಶಾಸನ ಇಲ್ಲಿದೆ. ಇದು ತಾಲ್ಲೂಕಿನ ಪ್ರಥಮ ಶಾಸನ ಎಂಬ ಪ್ರತೀತಿಯೂ ಇದೆ. ಇಲ್ಲಿ ಪ್ರಾಚೀನ ಶಿವದೇವಾಲಯ, ಬೀರಲಿಂಗೇಶ್ವರ ದೇವಾಲಗಳಿವೆ. ಇಲ್ಲಿನ ಬೆಟ್ಟದ ಮಲ್ಲೇಶ್ವರ ದೇವಾಲಯದಲ್ಲಿ ಸಿದ್ಧರು ತಂಗುತ್ತಿದ್ದ ಬಗ್ಗೆ ಐತಿಹ್ಯವಿದೆ. ಅದಕ್ಕೆ ಪೂರಕವಾಗಿ ಸಿದ್ದರ ಮಠಗಳಿವೆ. ಕೇರಳದ ಮ್ಯೂಸಿಯಂನಲ್ಲಿ ಇಲ್ಲಿನ ಬನಶಂಕರಿ ದೇವಾಲಯದ ತಾಳೆಗರಿ ಇದ್ದು, ಅದು ರಾಜರು ನಿಧಿ ಹಾಗೂ ಆಯುಧ ಇಟ್ಟ ಬಗ್ಗೆ ಮಾಹಿತಿ ನೀಡುತ್ತದೆ. ಹನುಮಪ್ಪ ದೇವಾಲಯದಲ್ಲಿ ಭಗ್ನಗೊಂಡ ಚನ್ನಕೇಶವಮೂರ್ತಿ ಇದ್ದು, ಈ ಗ್ರಾಮ ಹೊಯ್ಸಳರ ಆಳ್ವಿಕೆಗೆ, ನಂತರ ಪಾಳೇಗಾರರ ಆಳ್ವಿಕೆಗೆ ಒಳಪಟ್ಟ ಬಗ್ಗೆ ಕುರುಹು ಒದಗಿಸುತ್ತದೆ.

ಊರಿನ ಹೊರವಲಯದಲ್ಲಿ ಇದ್ದ ಈ ಗ್ರಾಮ ಈಗಿನ ಸ್ಥಳಕ್ಕೆ ತೆವಳಿಕೊಂಡು ಬಂತು ಎನ್ನುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತ್ಯಾವಣಿಗೆ ಎಂದು ಹೆಸರು ಬಂತು ಎನ್ನಲಾಗುತ್ತದೆ. ಇನ್ನೊಂದು ಮೂಲಗಳ ಪ್ರಕಾರ ಕುರುಬ ಜನಾಂಗದವರು ಬಂಡೆಯ ಮೇಲೆ ಜಾರಿಬಿಟ್ಟ ದುಡಿದ ಹಣ ಒಂದೆಡೆ ಸಂಗ್ರಹವಾಗಿತ್ತು ಅದನ್ನು `ತವನಿಧಿ~ ಎಂದು ಕರೆದರು. ಮುಂದೆ ಅದೇ ತ್ಯಾವಣಿಗೆ ಎಂದಾಗಿದೆ ಎನ್ನುವ ಪ್ರತೀತಿಯೂ ಇದೆ.

ಗ್ರಾಮಸ್ಥರ ನೋಟ: ಸುತ್ತಲ ಬಹುತೇಕ ಗ್ರಾಮಗಳ ಜನರು ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದು, ಆಸ್ಪತ್ರೆಗೆ ಅಗತ್ಯ ಇರುವ ವೈದ್ಯರನ್ನು ತುರ್ತಾಗಿ ನೇಮಿಸಬೇಕು. ಆಸ್ಪತ್ರೆ ಕಟ್ಟಡ ಶಿಥಿಲವಾಗಿದ್ದು, ಬೀಳುವಂತಿದೆ. ಕೂಡಲೇ ದುರಸ್ತಿ ಮಾಡಬೇಕು ಎಂದು ಗ್ರಾಮದ ಮುಖಂಡ ಜಿ.ಟಿ. ಶ್ರೀನಿವಾಸ್ ಒತ್ತಾಯಿಸುತ್ತಾರೆ.

ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೇ ಎಲ್ಲರೂ ಒಂದಾಗಿ ಬದುಕು ನಡೆಸುತ್ತಿದ್ದೇವೆ. ಇಂತಹ ಸಾಮರಸ್ಯ ಅಪರೂಪ ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ತಾ.ಪಂ. ಮಾಜಿ ಸದಸ್ಯ ಬಿ.ಎಚ್. ಹಾಲಪ್ಪ.

ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಮಂಜೂರಾದ ಮನೆಗಳನ್ನು ಬಡವರಿಗೆ ನೀಡದೇ ಅನುಕೂಲಸ್ಥರಿಗೆ ನೀಡುತ್ತಿದ್ದಾರೆ. ಉದ್ಯೋಗ ಖಾತ್ರಿಯಲ್ಲಿ ಯಂತ್ರಗಳ ಬಳಕೆಗೆ ಆದ್ಯತೆ ನೀಡಲಾಗಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಕೆಲಸ ದೊರೆಯುತ್ತಿಲ್ಲ. ನೀರಾವರಿ ಇಲಾಖೆಯಲ್ಲಿ ಪಾಳು ಬಿದ್ದಿರುವ ಜಾಗದಲ್ಲಿ ವಿವಿಧ ಇಲಾಖೆಗಳ ಕಟ್ಟಡ ಕಟ್ಟಬೇಕು ಎನ್ನುವುದು ರೈತ ಮುಖಂಡ ಟಿ.ಎಸ್. ಜಯದೇವ್ ಅವರ ಆಗ್ರಹ.
ಸುತ್ತಮುತ್ತಲ ಗ್ರಾಮಗಳಲ್ಲಿ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗದ ಕೂಲಿಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದು, ಪ್ರಥಮದರ್ಜೆ ಕಾಲೇಜು, ಡಿಪ್ಲೊಮಾ ಕಾಲೇಜು, ಬಾಲಕಿಯರ ವಿದ್ಯಾರ್ಥಿನಿಲಯಗಳ ಆವಶ್ಯಕತೆ ಇದೆ ಎನ್ನುತ್ತಾರೆ ಜಿ.ಪಂ. ಮಾಜಿ ಸದಸ್ಯ ಪಿ.ಸಿ. ಗೋವಿಂದಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.