ಹಸ್ಸಿ ಕೈಬಿಟ್ಟಿದ್ದಕ್ಕೆ ಸ್ಟೀವ್ ಆಕ್ರೋಶ

7

ಹಸ್ಸಿ ಕೈಬಿಟ್ಟಿದ್ದಕ್ಕೆ ಸ್ಟೀವ್ ಆಕ್ರೋಶ

Published:
Updated:

ಮೆಲ್ಬರ್ನ್ (ಐಎಎನ್‌ಎಸ್):  ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡದಿಂದ ಮೈಕ್ ಹಸ್ಸಿ ಅವರನ್ನು ಕೈಬಿಟ್ಟಿದ್ದಕ್ಕೆ ಮಾಜಿ ನಾಯಕ ಸ್ಟೀವ್ ವಾ ಅವರು ಆಯ್ಕೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹಸ್ಸಿ ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದಲ್ಲಿರಬೇಕಿತ್ತು’ ಎಂದು ಅವರು ಹೇಳಿದ್ದಾರೆ.  ಹಸ್ಸಿ ಅವರು ಸ್ನಾಯುಸೆಳೆತದಿಂದ ಸುಧಾರಿಸಿಕೊಂಡಿದ್ದು ದೇಶಿ ಕ್ರಿಕೆಟ್‌ನಲ್ಲಿ ಆಡುತ್ತಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ  ಈ ಪ್ರತಿಕ್ರಿಯೆ ನೀಡಿದ್ದಾರೆ.ತಂಡಕ್ಕೆ ಆಯ್ಕೆಯಾದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಲು ಫಿಟ್ ಆಗಿರುವುದಾಗಿ ಹಸ್ಸಿ ಹೇಳಿದ್ದರು. ‘ತುಂಬಾ ಕೆಟ್ಟದಾಗಿ ಆಡಿದಲ್ಲಿ ಮಾತ್ರ ಕ್ವಾರ್ಟರ್ ಫೈನಲ್ ಪ್ರವೇಶ ತಪ್ಪಿ ಹೋಗಬಹುದು. ಆದರೆ ಕ್ವಾರ್ಟರ್ ಫೈನಲ್ ತುಂಬಾ ಮಹತ್ವದ್ದು. ಅಲ್ಲಿಂದ ಮೂರು ಪಂದ್ಯ ಜಯಿಸಿದರೆ ವಿಶ್ವಕಪ್ ನಿಮ್ಮದಾಗಲಿದೆ’ ಎಂದು ಸ್ಟೀವ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry