ಬೆಂಗಳೂರು: ಅನಂತಪುರದ ಆರ್ಡಿಟಿ ಇನ್ಕ್ಲೂಸಿವ್ ಹೈಸ್ಕೂಲ್ ತಂಡ ಇಲ್ಲಿ ಕೊನೆಗೊಂಡ ಜೂಡ್ ಫೆಲಿಕ್ಸ್ ಹಾಕಿ ಅಕಾಡೆಮಿ ಆಶ್ರಯದ ಅಂತರ ಶಾಲಾ ಹಾಕಿ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು.

ಕೆಎಸ್ಎಚ್ಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ನಲ್ಲಿ ಆರ್ಡಿಟಿ ತಂಡ 5-2 ಗೋಲುಗಳಿಂದ ರಾಷ್ಟ್ರೀಯ ಮಿಲಿಟರಿ ಶಾಲೆ ತಂಡವನ್ನು ಮಣಿಸಿತು. ಎರಡು ಗೋಲುಗಳನ್ನು ಗಳಿಸಿದ ಶ್ರೀರಂಗ (1 ಮತ್ತು 14ನೇ ನಿಮಿಷ) ಆರ್ಡಿಟಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇತರ ಗೋಲುಗಳನ್ನು ವೈ ಜಸ್ವಂತ್ (5), ಶಿವ (11) ಹಾಗೂ ಚರಣ್ ಕುಮಾರ್ (27) ತಂದಿತ್ತರು. ಮಿಲಿಟರಿ ಶಾಲೆ ತಂಡದ ಎರಡೂ ಗೋಲುಗಳನ್ನು ಶಶಿಕಿರಣ್ (20 ಮತ್ತು 23) ಗಳಿಸಿದರು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕೂಡಿಗೆ ಕ್ರೀಡಾ ಶಾಲೆ ತಂಡ 3-0 ರಲ್ಲಿ ಬಿಷಪ್ ಕಾಟನ್ಸ್ ಹೈಸ್ಕೂಲ್ ವಿರುದ್ಧ ಗೆಲುವ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.