ಹಾಕಿ: ಆರ್‌ಬಿಐಗೆ ಜಯ

ಸೋಮವಾರ, ಮೇ 27, 2019
29 °C

ಹಾಕಿ: ಆರ್‌ಬಿಐಗೆ ಜಯ

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಆರ್‌ಬಿಐ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಪ್ರಯಾಸದ ಗೆಲುವು ಪಡೆದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆರ್‌ಬಿಐ 3-2ಗೋಲುಗಳಿಂದ ಕೂರ್ಗ್ ಬ್ಲ್ಯೂಸ್ ಹಾಕಿ ಸಂಸ್ಥೆ ತಂಡವನ್ನು ಮಣಿಸಿತು.ಜಿಲಾನಿ (19), ಕಿಶೋರ್ (47) ಹಾಗೂ ಫೆಡ್ರಿಕ್ ದಾಸ್ (52) ನಿಮಿಷಗಳಲ್ಲಿ ಗೋಲು ಗಳಿಸಿ ಆರ್‌ಬಿಐ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೂರ್ಗ್ ಬ್ಲ್ಯೂಸ್‌ನ ಸುರೇಶ್ ಸಾರಂಗ್ (8) ಮತ್ತು ಕೆ.ಕೆ. ಸೆಲ್ವನ್ (33) ನಿಮಿಷದಲ್ಲಿ ಗೋಲು ಗಳಿಸಿದರಾದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ.ಬುಧವಾರದ ಪಂದ್ಯಗಳು: ಬಿಎಸ್‌ಎನ್‌ಎಲ್-ಸೀನರ್ಜಿ ಸ್ಪೋರ್ಟ್ಸ್ ಕ್ಲಬ್ (ಮಧ್ಯಾಹ್ನ 2.30) ಹಾಗೂ ಡಿವೈಎಸ್‌ಎಸ್-ಪೋಸ್ಟಲ್ (ಸಂಜೆ 4ಕ್ಕೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry