ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್ಎಎಲ್) ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್ಷಿಪ್ನಲ್ಲಿ ಶುಭಾರಂಭ ಮಾಡಿದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಚ್ಎಎಲ್ 2-0 ಗೋಲುಗಳಿಂದ ಸಿಒಇ ಎದುರು ಗೆಲುವು ಸಾಧಿಸಿತು.

ಏಕಪಕ್ಷೀಯವಾಗಿ ಕೊನೆಗೊಂಡ ಪಂದ್ಯದಲ್ಲಿ ವಿಜಯಿ ತಂಡದ ರಮೇಶ್ 14ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಮಹಮ್ಮದ್ ನಯೀಮ್ 33ನೇ ನಿಮಿಷದಲ್ಲಿ ತಂಡಕ್ಕೆ ಎರಡನೇ ಗೋಲು ತಂದಿತ್ತರು.

ಎಂಇಜಿ-ಐಎಎಫ್ ಪಂದ್ಯ ಡ್ರಾ: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ `ಎ~ (ಎಂಇಜಿ) ಹಾಗೂ ಇಂಡಿಯನ್ ಏರ್ಫೋರ್ಸ್ (ಐಎಎಫ್) ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯವು 2-2ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.

ಎಂಇಜಿ `ಎ~ ತಂಡದ ಸಿರಾಜ್ 16ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಇದಕ್ಕೆ ತಿರುಗೇಟು ನೀಡಿದ ಐಎಎಫ್ನ ವೀರೇಂದ್ರ ಕುಮಾರ್ 29ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ 1-1ರಲ್ಲಿ ಸಮಬಲ ಸಾಧಿಸಿದರು.

ಸಿರಾಜ್ 39ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ತಂಡಕ್ಕೆ 2-1ರಲ್ಲಿ ಮುನ್ನಡೆ ತಂದಿತ್ತರು. 40ನೇ ನಿಮಿಷದಲ್ಲಿ ಐಎಎಫ್ ತಂಡದ ಪ್ರಭಾಕರ್ ಗೋಲು ಗಳಿಸಿ ಮತ್ತೆ ಸಮಬಲ ಸಾಧಿಸಿದರು.

ಎಂಇಜಿ `ಬಿ~ ಗೆ ಗೆಲುವು: ಎಂಇಜಿ `ಬಿ~ ತಂಡ 5-2 ಗೋಲುಗಳಿಂದ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ತಂಡವನ್ನು ಮಣಿಸಿತು.

ಸೋಮವಾರದ ಪಂದ್ಯಗಳು: ಪಿಸಿಟಿಸಿ-ಸೆಂಟ್ರಲ್ ಎಕ್ಸೈಜ್ (ಮಧ್ಯಾಹ್ನ 1.30), ಕೆಎಸ್ಪಿ-ಕೆನರಾ ಬ್ಯಾಂಕ್ (ಮಧ್ಯಾಹ್ನ 3.00) ಹಾಗೂ ಎಚ್ಎಎಲ್-ಎಬಿಎಚ್ಎ (ಸಂಜೆ 4.30).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.