ಹಾಕಿ: ಎಸ್‌ಎಐ ಬಿ ತಂಡಕ್ಕೆ ವಿಜಯ

ಸೋಮವಾರ, ಮೇ 27, 2019
24 °C

ಹಾಕಿ: ಎಸ್‌ಎಐ ಬಿ ತಂಡಕ್ಕೆ ವಿಜಯ

Published:
Updated:

ಬೆಂಗಳೂರು: ವಿನಾಯಕ ಹಾಗೂ ಅಶೋಕ್ ಗಳಿಸಿದ ತಲಾ ಎರಡು ಗೋಲುಗಳ ನೆರವಿನಿಂದ ಭಾರತೀಯ ಕ್ರೀಡಾ ಪ್ರಾಧಿಕಾರ `ಬಿ~ (ಎಸ್‌ಎಐ) ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಸ್‌ಎಐ ತಂಡ 5-0ಗೋಲುಗಳಿಂದ ಬಿಎಸ್‌ಎನ್‌ಎಲ್ ತಂಡವನ್ನು ಸುಲಭವಾಗಿ ಮಣಿಸಿತು.ವಿಜಯಿ ತಂಡದ ರಮೇಶ್ 3ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ವಿನಾಯಕ್ (7 ಹಾಗೂ 39), ಅಶೋಕ್ (14 ಹಾಗೂ 19) ಗೋಲು ಕಲೆ ಹಾಕಿ ಅಂತರದ ಗೆಲುವು ಪಡೆಯಲು ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry